ಮೂಲ ಸೌಲಭ್ಯ ನೀಡುವಲ್ಲಿ ಸರ್ಕಾರಿ ಶಾಲೆ ಪ್ರಥಮ
ಕ.ಪ್ರ. ವಾರ್ತೆ , ಶಿರಾ , ಜೂ. 5
ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಸರ್ಕಾರಿ ಶಾಲೆಗಳು ಮೊದಲನೆ ಸ್ಥಾನ ಪಡೆದಿವೆ ಎಂದು ಮುಖ್ಯೋಪಾಧ್ಯಾಯ ನಾಗೇಂದ್ರಪ್ಪ ತಿಳಿಸಿದರು.
ಅವರು ತಾಲೂಕಿನ ಬರಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ದಿನ ಮತ್ತು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
2012-13ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 34 ಮಕ್ಕಳು ಪರೀಕ್ಷೆ ಬರೆದಿದ್ದು 32 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಸಂತೋಷದ ಸಂಗತಿ ಎಂದರು.
ನಮ್ಮ ಶಾಲೆಯ ಆಧಾರ ಸ್ತಂಭದಂತಿರುವ ಸಹ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ. ಸಮಿತಿ ಹಾಗೂ ಪೋಷಕರ ಸಹಕಾರದಿಂದ ಈ ಯಶಸ್ಸು ಕಂಡಿದ್ದೇವೆ ಎಂದ ಅವರು ಶಾಲಾ ಪ್ರಾರಂಭ ದಿನದಿಂದಲೂ ಪಾಠ ಪ್ರವಚನಗಳು ಆರಂಭವಾಗುತ್ತಿರುವುದರಿಂದ ಮಕ್ಕಳು ಮತ್ತು ಸ್ನೇಹಿತರನ್ನು ಶಾಲೆಗೆ ಕರೆತರಬೇಕು ಮತ್ತು
ಪೋಷಕರಿಗೆ ಸರ್ಕಾರಿ ಶಾಲೆಗಳಲ್ಲಿನ ಸೌಕರ್ಯ ಸೌಲಭ್ಯ ಹಾಗೂ ಉತ್ತಮ ಶಿಕ್ಷಣದ ಅರಿವು ಮೂಡಿಸಿ ಮಕ್ಕಳನ್ನು ಸೇರಿಸುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸ್ವಾಗತಾರ್ಹ: ನಂತರ ಮಾತನಾಡಿದ ಎಸ್.ಡಿ.ಎಂ.ಸಿ. ಅಧ್ಯಕ್ಷ ಮುಬಾರಕ್ ಪಾಷ ಪ್ರತಿ ವರ್ಷದಂತೆ ಈ ವರ್ಷವು ಉತ್ತಮ ಫಲಿತಾಂಶ ಬಂದಿರುವುದು ಸ್ವಾಗತಾರ್ಹ. ಬರಗೂರು ಇತಿಹಾಸ ಪೂರ್ವದಿಂದಲೂ ಹೆಂಜೇರು ಸಂಸ್ಥಾನದ ವಿದ್ಯಾಕೇಂದ್ರವಾಗಿತ್ತು ಎಂಬ ನಂಬಿಕೆ ಸಾಕ್ಷೀಕರಿಸಿದಂತೆ ವಿದ್ಯಾರ್ಥಿಗಳ ಈ ಉತ್ತಮ ಫಲಿತಾಂಶ ಸಾರ್ಥಕವಾಗಿದೆ ಎಂದರು.
ಶಾಲೆಗೆ ಫಲಿತಾಂಶ ಬರಲು ಪರೀಕ್ಷಾ ಸಮಯದ ಮುನ್ನಾ, ರಜಾ ದಿನಗಳಲ್ಲೂ ಬೋಧನೆ ಮಾಡಿದ ಶಿಕ್ಷಕ ವೃಂದದ ಶ್ರಮ ಹಾಗೂ 12 ದಿನಗಳು ನಡೆಸಿದ ರಾತ್ರಿ ಶಾಲೆಯಿಂದಾಗಿ ಈ ಫಲ ದೊರೆತಂತಾಗಿದೆ. ಮುಂದಿನ ದಿನಗಳಲ್ಲೂ ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ಬರಗೂರು ಗ್ರಾಮವನ್ನು ರಾಜ್ಯ ಮಟ್ಟಕ್ಕೆ ಕೊಂಡೋಯ್ಯಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣಪ್ಪ, ಗ್ರಾ.ಪಂ. ಸದಸ್ಯ ನಾರಾಯಣಪ್ಪ, ವೀರನಾಗಪ್ಪ, ರಾಜಣ್ಣ, ಬಿ.ಸಿ.ಬಸವರಾಜು ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

