ಶನೇಶ್ವರ ಸ್ವಾಮಿ ಕುಂಭಾಭಿಷೇಕ ಮಹೋತ್ಸವ
ಹುಳಿಯಾರು :ಪಟ್ಟಣದ ಜ್ಯೋತಿಪಣ ಗಾಣಿಗರ ಸಂಘ ಹಾಗೂ ಭಕ್ತಾದಿಗಳಿಂದ ಗಾಂಧೀಪೇಟೆಯಲ್ಲಿನ ಶ್ರೀ ಶನೇಶ್ವರಸ್ವಾಮಿಯ 9ನೇ ವರ್ಷದ ಕುಂಭಾಭಿಷೇಕ ಮಹೋತ್ಸವ 7ರಿಂದ 2 ದಿನಗಳ ಕಾಲ ನಡೆಯಲಿದೆ. ತಾ.7 ಶುಕ್ರವಾರ ಗ್ರಾಮದೇವತೆ ದುರ್ಗಾ ಪರಮೇಶ್ವರಿ, ಹುಳಿಯಾರಮ್ಮ, ಆಂಜನೇಯಸ್ವಾಮಿಯವರ ಆಗಮನ ಹಾಗೂ ರಾತ್ರಿ ಸ್ವಾಮಿಗೆ ಪುಣ್ಯಾಹ, ದೇವನಾಂದಿ, ಮಂಡಲ ಸ್ಥಾಪನೆ ಹಾಗೂ ಭಕ್ತರಿಂದ ಕಳಸ ಸ್ಥಾಪನೆ, ಪ್ರಧಾನ ಕಳಸ, ನವಗ್ರಹಗಳ ಸ್ಥಾಪನಾ ಕಾರ್ಯ ನಡೆಯಲಿದ್ದು, ತಾ.8ರ ಶನಿವಾರ ಬೆಳಿಗ್ಗೆ ನವಗ್ರಹ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಶನೇಶ್ವರ ಹೋಮ, ನವಗ್ರಹಾರಾಧನೆ, ಪಂಚಾಮೃತಾಭಿಷೇಕ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯೊಂದಿಗೆ ಕಳಸಕ್ಕೆ ಕುಂಭಾಭಿಷೇಕ, ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಇದೇ ದಿನ ಸಂಜೆ 5ಕ್ಕೆ ಊರಿನ ರಾಜಬೀದಿಗಳಲ್ಲಿ ಸ್ವಾಮಿಯವರ ಉತ್ಸವ ನಡೆಯಲಿದೆ.
ನಾಳೆ ಮಕ್ಕಳ ಕವಿಗೋಷ್ಠಿ
ತುಮಕೂರು: ಇಲ್ಲಿನ ಕಣ್ಮುಚ್ಚಾಲೆ ಮಕ್ಕಳ ಗುಂಪು, ಶೃತ ಜೈನ್ ಮಹಿಳಾ ಮಿಲನ್, ತುಮಕೂರು, ಶೃತ ಪಂಚಮಿ ಅಂಗವಾಗಿ ಜೂ.8 ರಂದು ಶನಿವಾರ ಮಧ್ಯಾಹ್ನ 2.30 ಕ್ಕೆ ಬಸವೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ ಮಕ್ಕಳ ಕವಿಗೋಷ್ಠಿ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಉಪನ್ಯಾಸಕಿ ಜಿ. ದೇವಿಕಾ ವಹಿಸಲಿದ್ದಾರೆ. ಭಾರತೀಯ ಜೈನ್ ಮಿಲನ್ನ ಶ್ಯಾಮಲ ಧರಣೇಂದ್ರ ಬಹುಮಾನ ವಿತರಿಸಲಿದ್ದಾರೆ. ಪ್ರಶಸ್ತಿ ಪತ್ರವನ್ನು ಅಬ್ಬಿನಹೊಳೆ ಸುರೇಶ್ ವಿತರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸುನಿತಾಮೂರ್ತಿ, ಟಿ.ಆರ್. ಶಾರದಮ್ಮ, ಕೆ. ಗಣೇಶ್ಪ್ರಸಾದ್ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿದ್ಧರಾಜ್ ಐವಾರ್ ಉಪಸ್ಥಿತರಿರುವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

