ಗುಬ್ಬಿಯಲ್ಲಿ ಸರಣಿ ಕಳ್ಳತನ 6 ಕುಖ್ಯಾತ ಕಳ್ಳರ ಬಂಧನ
ಗುಬ್ಬಿ : ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ಸರಣಿ ಕಳ್ಳತನ ನಡೆಯುತಿದ್ದು ನಾಗರಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ಆರು ಜನ ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಗುಬ್ಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳ್ಳರು ಸ್ಥಳೀಯರೇ ಆಗಿದ್ದು, ಕಳೆದ ಹಲವು ದಿನಗಳಲ್ಲಿ ಪಟ್ಟಣದ ವಿವಿಧೆಡೆ ನಡೆಯುತ್ತಿದ್ದ ಕಳ್ಳತನ ಸಾರ್ವನಿಕರಲ್ಲಿ ಆತಂಕವನ್ನುಂಟುಮಾಡಿತ್ತು. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ತಾಲೂಕಿನ ಬಿಲ್ಲೇಪಾಳ್ಯದ ಮಂಜು, ಸುರುಗೇನಹಳ್ಳಿಯ ಕೃಷ್ಣಮೂರ್ತಿ, ರಂಗನಾಥ್, ಗಿಡದಮುದ್ದೇನಹಳ್ಳಿಯ ನಾಗರಾಜು, ನೆರಳೆಕಟ್ಟೇಪಾಳ್ಯದ ಚಿಕ್ಕಣ್ಣಸ್ವಾಮಿ, ಗುಬ್ಬಿ ಪಟ್ಟಣದ ಗುಂಡಪ್ಪ ಬಂಧಿತರು.
ಕಳೆದ ಕೆಲವು ದಿನಗಳ ಹೀಂದೆ ರಾತ್ರಿ ಸುಮಾರು 8. 30ರಲ್ಲಿ ಪೆಟ್ರೋಲ್ ಬಂಕ್ ಮುಂಭಾಗ 2ಲಕ್ಷ ಮೌಲ್ಯದ ಆಭರಣಗಳನ್ನು ದೋಚಿದ್ದರು. ಆದರೆ ಈ ದರೋಡೆಗಾರರು ಹೆಚ್ಚು ದೋಚಬೇಕೆಂಬ ಆಸೆಯಲ್ಲಿ ಮನೆಯೊಡೆಯ ಲಿಂಗಪ್ಪ ಮನೆಯಲ್ಲಿಲ್ಲದ ಸುಳಿವು ಆಧರಿಸಿ ನುಗ್ಗಿದ್ದಾರೆ. ಸೈಟು ವ್ಯಾಪಾರದಿಂದ ಮನೆಯಲ್ಲಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ನುಗ್ಗಿದ ದರೋಡೆಕೋರರು ಮನೆಯೊಡತಿ ವೃದ್ಧೆ ಲಕ್ಷ್ಮಮ್ಮನ ಮೈಮೆಲಿದ್ದ 2 ಲಕ್ಷ ಒಡೆವೆಗಳನ್ನು ಚಾಕು ತೋರಿಸಿ, ಬೆದರಿಸಿ ಕಿತ್ತೊಯ್ಯುವ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿದ್ದ ಸೊಸೆ ಅಪರಿಚಿತರನ್ನು ನೋಡಿ ಕೂಗಿಕೊಂಡಿದ್ದಾರೆ. ಆಗ ಪರಾರಿಯಾದ ಕಳ್ಳರು ತಪ್ಪಿಸಿಕೊಂಡು ಹೋಗುವಾಗ ಬಟ್ಟೆಯ ತುಂಡನ್ನು ಬಿಟ್ಟುಹೋಗಿದ್ದಾರೆ. ಈ ಬಟ್ಟೆಯ ತುಂಡು ಪೊಲೀಸರು ದರೋಡೆಕೋರರನ್ನು ಬಂಧಿಸುವಲ್ಲಿ ಸಹಾಯಕಾರಿಯಾಯಿತು. ಇವರನ್ನೆಲ್ಲ ಶುಕ್ರವಾರ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಪಿಐ ಅಬ್ದುಲ್ ಕರೀಂ ರಾವತ್ತೂರ್, ಪಿಎಸ್ಐ ಮಾರ್ಕಾಂಡಯ್ಯ, ಸಿಬ್ಬಂದಿಗಳಾದ ರಾಮಯ್ಯ, ನಾಗರಾಜ, ನಯಾಜ್, ವೆಂಕಟೇಶ್, ಧನಂಜಯ, ಧರಣೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

