ಲೇಖಕಿ ಭಾನುಮುಷ್ತಾಕ್ರ ಮೂರು ಕೃತಿಗಳ ಬಿಡುಗಡೆ
ಹಾಸನ: ಸಮುದಾಯದ ನೋವು ಬರಹದ ಮೂಲಕ ಹಂಚಿಕೊಳ್ಳಬಹುದೆಂದು ವೈದ್ಯೆ ಮತ್ತು ಸಾಹಿತಿ ಡಾ. ಎಚ್.ಎಸ್. ಅನುಪಮತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಜಿಲ್ಲಾ ಕಸಾಪ ಹಾಗೂ ಅಭಿರುಚಿ ಪ್ರಕಾಶನ ಮತ್ತು ಲಡಾಯಿ ಪ್ರಕಾಶನ ಬಾಲಾಜಿ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಬಾನು ಮುಷ್ತಾಕ್ ಅವರ ಮೂರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದಲ್ಲಿ ಬಾನು ಮುಷ್ತಾಕ್ರವರ ಬಡವರ ಮಗಳು ಹೆಣ್ಣಲ್ಲ (ಕಥಾ ಸಂಕಲನ), ಇಬ್ಬನಿಯ ಕಾವು (ಲೇಖನಗಳ ಸಂಗ್ರಹ), ಕೌಟುಂಬಿಕ ದೌರ್ಜನ್ಯ ಕಾಯಿದೆ (ಕಾನೂನು ಕೃತಿ) ಬಿಡುಗಡೆಗೊಳಿಸಿದರು.
ಮುಸ್ಲಿಂ ಕವಿಯತ್ರಿಗಳು ಹೆಚ್ಚು ಸಾಹಿತ್ಯ ಲೋಕಕ್ಕೆ ಬಂದು ತಮ್ಮ ಸಮುದಾಯದಲ್ಲಿ ಇರುವ ನೋವುಗಳನ್ನು ಕವನಗಳ ಮೂಲಕ ಹಂಚಿಕೊಳ್ಳುವಂತೆ ಸಲಹೆ ನೀಡಿದ ಅವರು, ಸಮಾಜದ ಜತೆ ಏಕೆ ಹಂಚಿಕೊಳ್ಳಲು ಮುಂದೆ ಬಾರದಿರುವ ಬಗ್ಗೆ ವಿಷಾದಿಸಿದರು. ಪ್ರಸ್ತುತದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಹೆಚ್ಚಾಗಿ ಬರಬೇಕು ಎಂದು ಹೇಳಿದರು.
ಮುಸ್ಲಿಂ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಲು ಮುಂದಾಗಬೇಕೆಂದ ಅವರು, ಬಾನು ಮುಷ್ತಾಕ್ರ ಮೂರು ಕೃತಿಗಳು ಸಮಾಜಕ್ಕೆ ಸಹಾಯಕವಾಗಲಿದೆ. ಇಂತಹ ಕೃತಿಗಳು ಹೆಚ್ಚು ಹೆಚ್ಚು ಬರಲಿ ಎಂದು ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

