ಹುಟ್ಟುಹಬ್ಬಗಳು ಆಡಂಬರದ ಆಚರಣೆಗಳಾಗದಿರಲಿ
ಕ.ಪ್ರ.ವಾರ್ತೆ ತುಮಕೂರು ಜೂ. 10
ಹುಟ್ಟುಹಬ್ಬಗಳು ಆಡಂಬರದ ಆಚರಣೆಗಳಾಗದೆ, ಹಣವ್ಯಯದ ಆಚರಣೆಗಳಾಗದೆ ಸಮಾಜಮುಖಿಯಾಗಿರಲಿ ಎಂದು ತುಮಕೂರಿನ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಕರೆ ನೀಡಿದರು.
ಅವರು ತುಮಕೂರಿನಲ್ಲಿ ಕರವೇ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 47 ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಾಟಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತದಾನದ ಮೂಲಕ ನಾರಾಯಣಗೌಡರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಸಂತೋಷದ ವಿಷಯ. ಈ ಮೂಲಕ ಮಾನವೀಯತೆ, ಭಾವೈಕ್ಯತೆ ವೃದ್ಧಿಸುವ ಗುಣಸ್ವಭಾವದಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಾರಾಯಣಗೌಡರು ಕರವೇಯನ್ನು ಬೆಂಗಳೂರು ಕರಗದಷ್ಟೇ ಪ್ರಸಿದ್ಧಿಗೊಳಿಸಿದ್ದಾರೆ ಎಂದು ಶ್ಲಾಘಿಸಿದ ಶ್ರೀಗಳು, ಕನ್ನಡಪರ ಹೋರಾಟಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣಗೌಡರಿಗೆ ಎಲ್ಲ ಕನ್ನಡಿಗರು ಶಕ್ತಿಯಾಗಿ ಬೆಂಬಲ ನೀಡಬೇಕು ಎಂದರು.
ವಿಷಾದ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ನೆಲ, ಜಲ ಉಳಿವಿಗಾಗಿ ಸ್ವಾತಂತ್ರ್ಯ ಚಳುವಳಿ ರೀತಿಯಲ್ಲಿ ಹೋರಾಟ ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ವಿಷಾದಿಸಿದರು. ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡ ಹಲವರು ಆಸ್ತಿ-ಪಾಸ್ತಿ, ಜೀವ ಕಳೆದುಕೊಂಡಿದ್ದಾರೆ.
ಮಾತೃಭಾಷೆ ಮೇಲೆ ಅನ್ಯಭಾಷಿಕರ ಆಕ್ರಮಣ ತಡೆಗೆ ಕನ್ನಡ ಸಂಘಟನೆಗಳು ನ್ಯಾಯಬದ್ಧ ಹೋರಾಟ ರೂಪಿಸಬೇಕು ಎಂದರು.
ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕಿ ಡಾ.ಎಂ. ರಜನಿ ಮಾತನಾಡಿ, ರಕ್ತಕ್ಕೆ ಪರ್ಯಾಯವಿಲ್ಲದ ಕಾರಣಕ್ಕೆ ರೋಗಿಗಳ ಜೀವರಕ್ಷಣೆಗೆ ಇನ್ನೊಬ್ಬರ ರಕ್ತವೇ ಅನಿವಾರ್ಯ. ಈ ಸ್ಥಿತಿಯಲ್ಲಿ ಎಲ್ಲರೂ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಜೆಡಿಎಸ್ ಮುಖಂಡರಾದ ಕೆ.ಬಿ. ಬೋರೇಗೌಡ, ಕರವೇ ಜಿಲ್ಲಾಧ್ಯಕ್ಷ ಎನ್.ಎಸ್. ವಿಷ್ಣುವರ್ಧನ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನಿತಾಮೂರ್ತಿ, ಮುಖಂಡರಾದ ಮರಿಚೆನ್ನಮ್ಮ, ಮಂಜುನಾಥ್, ಸುಭೋದ್ಜೈನ್ ಹಾಗೂ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷರು ಪಾಲ್ಗೊಂಡಿದ್ದರು.
ನಂತರ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಕರವೇಯ ನೂರಾರು ಕಾರ್ಯಕರ್ತರು ರಕ್ತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

