ಜನಸೇವೆಗಾಗಿ ರಾಜಕೀಯಕ್ಕೆ ಸೇರಿದ್ದೇನೆ
ಚಿಕ್ಕನಾಯಕನಹಳ್ಳಿ: ಜನಸೇವೆ ಮಾಡಲು ವಿಫುಲ ಅವಕಾಶವಿರುವ ಕ್ಷೇತ್ರವಾದ್ದರಿಂದ ನಾನು ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ನುಡಿದರು.
ಭಾನುವಾರ ಅವರು ಪಟ್ಟಣದ ಶ್ರೀಸರ್ವೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಅಹೆಡ್ ಸಂಸ್ಥೆ ಆಶ್ರಯದಲ್ಲಿ ನಡೆದ ಹೊಲಿಗೆ ತರಬೇತಿ ಫಲಾನುಭವಿಗಳಿಗೆ ಚೆಕ್ ವಿತರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ನಾವು ಬೇರೆ ದೇಶಗಳಿಗೆ ಹೋಗಿ ಏನನ್ನು ಕಲಿಯಬೇಕಾಗಿಲ್ಲ, ಎಲ್ಲವೂ ನಮ್ಮ ಸಂಸ್ಕೃತಿಯಲ್ಲಿಯೇ ಇದೆ. ಒಬ್ಬರಿಗೊಬ್ಬರು ಪರಸ್ಪರ ಸಹಕಾರ ಮತ್ತು ಸಂಬಂಧಗಳು ನಮ್ಮಲ್ಲಿ ಗ್ರಾಮೀಣ ಭಾಗದಲ್ಲಿ ಗಟ್ಟಿಯಾಗಿವೆ. ಈ ವಾತಾವರಣ ಪಟ್ಟಣ ಪ್ರದೇಶಗಳಲ್ಲಿ ಕಂಡುಬರುವುದಿಲ್ಲ. ದ್ವೇಷದಿಂದ ನಾವು ಏನನ್ನೂ ಸಾಧಿಸಲಾಗುವುದಿಲ್ಲ.ಪ್ರೀತಿಯಿಂದ ಎಲ್ಲವನ್ನು ಗೆಲ್ಲಬಹುದೆಂಬುದು ನನ್ನ ಭಾವನೆ.ಇಲ್ಲಿ ನನ್ನ ಸ್ನೇಹಿತರು ಹಮ್ಮಿಕೊಂಡಿರುವ ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರ ಹಲವರ ಬದುಕಿಗೆ ದಾರಿಯಾಗಿದೆ ಎಂದರೆ ತಪ್ಪಾಗಲಾರದು. ನಾವು ಬದುಕಿದ್ದಾಗ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡೋಣ, ಕೆಟ್ಟದ್ದನ್ನು ಮಾಡದೇ ಸುಮ್ಮನಿದ್ದರೆ ಅದೇ ನಾವು ಸಮಾಜಕ್ಕೆ ಕೊಡುವ ಕೊಡುಗೆ ಎಂದು ತಿಳಿಯಬೇಕಿದೆ. ಹೆಣ್ಣು ಸಹನಾಮೂರ್ತಿ, ಆಕೆ ಕುಟುಂಬದಲ್ಲಿನ ಎಲ್ಲರ ಒಳಿತಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗಮಾಡುತ್ತಾಳೆ.ಪುರುಷರಿಗೆ ಸಮನಾಗಿ ಹೊರಗೆ ದುಡಿಯುವ ಮಹಿಳೆ ಮನೆಯಲ್ಲಿಯೂ ಸಹ ಗೃಹಿಣಿಯ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಾಳೆ. ತನ್ನ ಕುಟುಂಬದ ಒಳಿತಿಗಾಗಿ ಆಕೆ ಸದಾ ದೇವರನ್ನು ಪ್ರಾರ್ಥಿಸುತ್ತಾಳೆ. ಮನೆಯ ಹೊರಗೆ ದುಡಿಯುವ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ತ್ಯಾಗವಿರುತ್ತದೆ. ಸಮಾಜದಲ್ಲಿ ಉಳಿತಾಯದ ಪಾಠ ಪ್ರಾರಂಭವಾಗಿದ್ದೇ ಮಹಿಳೆಯರಿಂದ ಎಂದರು.
ಹೇಳಿಕೆಗೆ ಬದ್ಧ: ನನ್ನ ಕ್ಷೇತ್ರದ ಮಹಿಳೆಯರು ಆರ್ಥಿಕವಾಗಿ ಸಬಲವಾಗಲು ನಾನು ಈ ಹಿಂದೆ ನುಡಿದಂತೆ ಸಿದ್ಧ ಉಡುಪು ಘಟಗಳನ್ನು ತೆರೆಯಲು ಬದ್ಧನಾಗಿದ್ದೇನೆ. ಈ ಬಗ್ಗೆ ಬೆಂಗಳೂರಿನಲ್ಲಿರುವ ಅನೇಕ ಹೆಸರಾಂತ ಕಂಪನಿಗಳ ಜೊತೆ ಚರ್ಚಿಸಿದ್ದೇನೆ. ಜನರ ಹಿತಕ್ಕಾಗಿ ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಅವರು ನುಡಿದರು. ಈ ಸಂದರ್ಭದಲ್ಲಿ ತರಬೇತಿ ಹೊಂದಿದ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಎಸ್. ರಮೇಶ್, ಎಚ್.ಬಿ.ಪ್ರಕಾಶ್, ಎಂ.ಕೆ.ರವಿಚಂದ್ರ, ಅಹೆಡ್ ಸಂಸ್ಥೆಯ ಅಧ್ಯಕ್ಷಅಶೋಕ್, ಕಾರ್ಯದರ್ಶಿ ಶಾಂತಕುಮಾರ್, ಟ್ರಸ್ಟಿ ಸುರೇಶ್ರಾವ್, ಶಿವಲಿಂಗಸ್ವಾಮಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

