ತುಮಕೂರು

ವಿ.ಆರ್.ಚಲುವರಾಜನ್ ಆಯ್ಕೆ ಹೆಮ್ಮೆಯ ಸಂಗತಿ

Published On :

ಕ.ಪ್ರ.ವಾರ್ತೆ   ಪಾವಗಡ    ಜೂ. 23
ಸಾಹಿತಿ ಇತಿಹಾಸ ಸಂಶೋಧಕ ಸೇರಿದಂತೆ ವಿವಿಧ ರೀತಿಯ ಕಲಾ ನೈಪುಣ್ಯತೆಯೊಂದಿಗೆ ರಾಜ್ಯಾದ್ಯಂತ ಹೆಸರು ಪಡೆದು ರಾಜ್ಯೋತ್ಸವ ಪ್ರಶಸ್ತಿ ಪಡೆದ ಕಲಾವಿದ ವಿ.ಆರ್.ಚಲುವರಾಜನ್ ಅವರನ್ನು 6ನೇ ಕನ್ನಡ ಸಾಹಿತ್ಯ ಸಮ್ಮೇಳನಾದ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಹೆಮ್ಮೆಯ ವಿಚಾರವೆಂದು ಪಾವಗಡ ಪಿ.ಆರ್. ಆನಂತಲಕ್ಷ್ಮೀ ಬಣ್ಣಿಸಿದ್ದಾರೆ.
ತಾ.ಕಸಾಪ ವತಿಯಿಂದ ಸಮ್ಮೇಳನಾಧ್ಯಕ್ಷ ವಿ.ಆರ್. ಚಲುವರಾಜನ್ ಅಧ್ಯಕ್ಷತೆಯಲ್ಲಿ ಶನಿವಾರ ಪಟ್ಟಣದ ಎಸ್.ಎಸ್.ಕೆ.ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಹು ಯಶಸ್ವಿಯಾಗಿ ನಡೆದಿದ್ದು ಸಮಾರಂಭದಲ್ಲಿ ತಾಲೂಕಿನಲ್ಲಿ ಭಾಷಾ ಅನುಷ್ಠಾನ, ಫ್ಲೋರೈಡ್ಯುಕ್ತ ನೀರು ಸೇರಿದಂತೆ ಅನೇಕ ಶಾಶ್ವತ ಅಭಿವೃದ್ಧಿ ಪರ ಮಾತುಗಳು ಚರ್ಚೆಯಾಗಿದ್ದು ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ವಿ.ಆರ್ ಚಲುವರಾಜನ್ ವ್ಯಕ್ತಪಡಿಸಿದ ನೀರಾವರಿ ಅನುಷ್ಠಾನ, ಪಟ್ಟಣದಲ್ಲಿ ಸಾಹಿತ್ಯ ಭವನ, ಕೆ.ರಾಂಪುರದಲ್ಲಿ ನವಿಲು ಧಾಮ, ಐತಿಹಾಸಿಕ ನಿಡಗಲ್ ಪ್ರವಾಸ್ಯೋದ್ಯಮ ಕೇಂದ್ರ ಹಾಗೂ ಕಾಮನದುರ್ಗ ಬೆಟ್ಟದಲ್ಲಿ ಗಿಡಮೂಲಿಕೆಗಳ ರಕ್ಷಣೆ ಕಾರ್ಯ ಮುಖ್ಯವಾದ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ಸರ್ಕಾರದ ಗಮನ ಸೆಳೆದು ಇವುಗಳನ್ನು ಅಭಿವೃದ್ಧಿ ಪಡಿಸಿದರೆ ಉದ್ಯೋಗ ಸೃಷ್ಟಿ ಸೇರಿದಂತೆ ಒಂದು ರೀತಿಯಲ್ಲಿ ಪ್ರವಾಸೋದ್ಯಮ ತಾಣವಾಗಿ ನಿರ್ಮಾಣಗೊಳ್ಳುವುದೆಂದರು. ಪ್ರಗತಿ ಪರ ಚಿಂತಕ ಸಂಶೋಧಕ ಹಾಗೂ ಸೃಜನಶೀಲ ವ್ಯಕ್ತಿ ಪಾವಗಡ ವಿ.ಆರ್. ಚಲುವರಾಜನ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ತಾಲೂಕಿನ ಕೀರ್ತಿ ಎತ್ತಿಹಿಡಿದ  ಕಸಾಪಗೆ ಪಿ.ಆರ್. ಅನಂತಲಕ್ಷ್ಮೀ, ಕಮಲ, ಕಲಾವಿದ ರಂಗಸಮುದ್ರ ಜಯರಾಮ್, ಜಾಲೋಡು ವೈ. ಪರಮೇಶ್, ಹುಸೇನ್ಪುರ ನರಸರೆಡ್ಡಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.