ಸಾಹಿತ್ಯ ಸಮಾಜದ ಕನ್ನಡಿಯಂತೆ: ಡಾ.ಮಹಮದ್
ಕ.ಪ್ರ.ವಾರ್ತೆ ಚಿಕ್ಕನಾಯಕನಹಳ್ಳಿ ಜೂ.27
ಸಾಹಿತ್ಯ ಸಮಾಜದ ಪ್ರತಿಬಿಂಬ,ಅದು ಸಮಾಜದ ಆಸೆ, ಆಕಾಂಕ್ಷೆಗಳಿಗೆ ಹಿಡಿದ ಕನ್ನಡಿಯಿದ್ದಂತೆ ಎಂದು ಬೆಂಗಳೂರಿನ ಡಾ-ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ದಂತ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಮಹಮದ್ ಫೈಜುದ್ದೀನ್ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಬಾಲಭವನದಲ್ಲಿ ಬುಧವಾರ ನಡೆದ ರೋಟರಿ ಚಾರ್ಟರ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜರಾವ್ 'ಅಘೋರಿಗಳ ನಡುವೆ' ಕಾಂದಬರಿಯ 4ನೇ ಮುದ್ರಣದ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನ್ಙಾದರು.
ಬೇರೆ ಭಾಷೆ ಸಾಹಿತ್ಯಗಳಲ್ಲಿ ಹೊರತರುವ ಕೃತಿಗಳಿಗೆ ಸಮನಾಗಿ ಕನ್ನಡದಲ್ಲಿ ಹೊರಬರುತ್ತಿಲ್ಲ ಎಂಬ ಕೊಂಕು ನಮ್ಮ ಬಹುತೇಕ ಜನರಲ್ಲಿದೆ. ಆದರೆ, ಬೇರೆ ಭಾಷೆ ಸಾಹಿತ್ಯಕ್ಕೆ ನಮ್ಮ ಭಾಷೆಯನ್ನು ಹೋಲಿಸಬೇಡಿ. ಎಂ.ವಿ.ನಾಗರಾಜರಾಯರು ನಮ್ಮ ಸಮಾಜ, ನಮ್ಮ ಬಡಜನರ ಬಗ್ಗೆ ನೂರಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಆದರೆ, ಒಂದು ಪ್ರಶಸ್ತಿ ಬರಲಿಲ್ಲ. ಕೇವಲ ಒಂದು ಪುಸ್ತಕವನ್ನು ಭಾಷಾಂತರ ಮಾಡಿದವರಿಗೆ ಪ್ರಶಸ್ತಿ ಬಂದಿರುವ ನೂರಾರು ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ವಾತಾವರಣದಲ್ಲಿ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಿರಂತರವಾಗಿ ಸಾಹಿತ್ಯ ಸೇವೆ ಮಾಡಿಕೊಂಡು ಬರುತ್ತಿರುವ ಅವರು ಎಂದು ಪ್ರಶಸ್ತಿಯ ಬೆನ್ನತ್ತಿ ಹೋಗಲಿಲ್ಲ ಎಂದು ಅವರ ಸ್ವಾಭಿಮಾನವನ್ನು ಮತ್ತು ಸಾಹಿತ್ಯ ಸೇವೆಯನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಅಸಿಸ್ಟೆಂಟ್ ಗೌರ್ವನರ್ ರೊ.ಬಿಳಿಗೆರೆ ಶಿವಕುಮಾರ್ ಮಾತನಾಡಿ, ನನ್ನ ವೃತ್ತಿಗೂ ಸಾಹಿತ್ಯಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ರೋಟರಿ ಮೂಲಕ ಸಾಹಿತಿ ಎಂವಿಎನ್ ಅವರ ಒಡನಾಟದಿಂದ ಸಾಹಿತ್ಯದ ಬಗ್ಗೆ ಮಾತನಾಡುವಷ್ಟು ಸೆಳೆತವುಂಟಾಯಿತು. ರೋಟರಿಯಲ್ಲಿ ನೀಡಿ ಅಭ್ಯಾಸವೇ ಹೊರತು ಬೇಡಿ ರೂಢಿ. 107 ವರ್ಷ ಪ್ರಾಯದ ರೋಟರಿ ಕ್ಲಬ್ ತನ್ನ ನಡಿಗೆಯನ್ನು ನಿರಂತರವಾಗಿ ಮುಂದುವರಿಸಿದೆ. ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಸಮಾಜ ಸೇವೆಯ ಬಗ್ಗೆ ಬದ್ಧತೆಯಿರುವವರಿಂದ ಮಾತ್ರ ಸಾಧ್ಯ. ರೋಟರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 90 ಕ್ಲಬ್ಗಳ ಪೈಕಿ ಮೂರು ಕ್ಲಬ್ಗಳಿಗೆ ಮಾತ್ರ ಸೇವಾ ಕಾರ್ಯಗಳಿಗಾಗಿ ಲಭಿಸಿರುವ ಫೈವ್ ಸ್ಟಾರ್ ಪ್ರಶಸ್ತಿಯಿಂದಾಗಿ ಇಲ್ಲಿನ ಕ್ಲಬ್ ಅದೃಷ್ಟಶಾಲಿ ಕ್ಲಬ್ ಎನಿಸಿಕೊಂಡಿದೆ ಎಂದರು.
ಚಾರ್ಟರ್ ನೈಟ್ ಕೇಂದ್ರ ಬಿಂದುವಾದ ವಕೀಲರಾದ ಎಂ.ಮಹಲಿಂಗಪ್ಪ ಅವರು ಮಾತನಾಡಿ, ರೋಟರಿ ಕ್ಲಬ್ ನಮ್ಮ ಪಟ್ಟಣಕ್ಕೆ ಪದಾರ್ಪಣೆ ಮಾಡಿ. ಇಂದಿಗೆ 37 ವರ್ಷಗಳಾದವು.ಆರಂಭದಲ್ಲಿ ಹಿಂದೆ ಇದ್ದ ತಾಲೂಕು ಅಭಿವೃದ್ಧಿ ಮಂಡಳಿಯಲ್ಲಿ ಕ್ಷೇತ್ರಾಭಿವೃದ್ದಿ ಅಧಿಕಾರಿಯಾಗಿದ್ದ ನಿರಂಜನಪಾಲ್ ಎಂಬುವರು ಅಧ್ಯಕ್ಷರಾಗಿ ನಾನು ಕಾರ್ಯದರ್ಶಿಯಾಗಿ ಪ್ರಾರಂಭಿಸಿದ ಸಂಸ್ಥೆ ಇಂದು ಬಹಳ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಹೀಗೆ ನಿರಂತರವಾಗಿ ಮುಂದುವರಿಯಲಿ ಎಂದರು.
ಕಾರ್ಯಕ್ರಮದಲ್ಲಿ ಮಾಸ್ತಿ ಪ್ರಶಸ್ತಿ ಪುರಸ್ಕೃತ ಎಸ್.ಜಿ. ಸಿದ್ದರಾಮಯ್ಯ ಮತ್ತು ದಂತವೈದ್ಯ ಡಾ.ಮಹಮದ್ ಫೈಜುದ್ದೀನ್ ಅವರನ್ನು ಅಭಿನಂದಿಸಲಾಯಿತು. ಎಂ.ಎಲ್.ಎಂ. ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ದೇವರಾಜ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

