'ಅಂಕವೀರರಾಗಿ ಹಾಸ್ಟೆಲ್ಗೆ ಕೀರ್ತಿ ತನ್ನಿ'
ಕ.ಪ್ರ.ವಾರ್ತೆ , ಪಾವಗಡ , ಜೂನ್ 29
ಬರಡು ಭೂಮಿಯಲ್ಲಿ ಅಶಾ ಜ್ಯೋತಿ ಬೆಳಗಿಸುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸುಸುರ್ಜಿತ ಕಮ್ಮ ಹಾಸ್ಟಲ್ ಕಟ್ಟಡ ನಿರ್ಮಿಸಿದ್ದು ಹಾಸ್ಟೆಲ್ನ ಎಲ್ಲಾ ವಿದ್ಯಾರ್ಥಿಗಳು ಅತಿ ಹೆಚ್ಚು ಆಂಕಗಳು ಪಡೆಯುವ ಮೂಲಕ ಹಾಸ್ಟೆಲ್ಗೆ ಕೀರ್ತಿ ತನ್ನಿ ಎಂದು ಬೆಂಗಳೂರು ಗ್ರಾಮಾಂತರ ವಿಶೇಷ ಜಿಲ್ಲಾಧಿಕಾರಿ ದೊಡ್ಡಹಳ್ಳಿ ರಾಮಾಂಜನೇಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಶನಿವಾರ ಕಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ್ದ ಕಮ್ಮ ಹಾಸ್ಟಲ್ಗೆ ಭೇಟಿ ನೀಡಿ ಹೆಚ್ಚು ಆಂಕಗಳು ಪಡೆದ ಬಡ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಲಭ್ಯ ಕಲ್ಪಿಸಿ ಮಾತನಾಡುತ್ತಿದ್ದರು.
ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಉಚಿತವಾಗಿ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಹಿನ್ನಲೆಯಲ್ಲಿ ಕಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋಟ್ಯಾಂತರ ರು,ಗಳ ವೆಚ್ಚದಲ್ಲಿ ಸುಸರ್ಜಿತ ಕಮ್ಮ ಹಾಸ್ಟೆಲ್ ನಿರ್ಮಿಸಿದ್ದು ಪ್ರತಿ ವರ್ಷ ಪ್ರತಿಭಾನ್ವಿತ ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟಲ್ ಸೌಲಭ್ಯ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಕಳೆದ 2ವರ್ಷಗಳಿಂದ ಹಾಸ್ಟಲ್ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಿರುವುದು ಹರ್ಷದಾಯಕವಾಗಿದ್ದು,ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಲಭ್ಯ ಕಲ್ಪಿಸುವ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನಿಂದ ಶೇ,25ರಷ್ಟು ಇತರೆ ವರ್ಗದ ಬಡ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಲಭ್ಯ ಕಲ್ಪಿಸಲಾಗಿದೆ.ತಮ್ಮ ಮಕ್ಕಳ ಉತ್ತಮ ವಿದ್ಯಾಬ್ಯಾಸದಲ್ಲಿ ಪೋಷಕರ ಪಾತ್ರ ಕೂಡ ಅತಿ ಮುಖ್ಯವಾಗಿದ್ದು ರೈತರ ಸಂಕಷ್ಟ ಹಿನ್ನಲೆಯಲ್ಲಿ ತಮ್ಮ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಈ ಬರಡು ಭೂಮಿಯಲ್ಲಿ ನಿರ್ಮಿಸಿದ್ದ ಅಶಾ ಜ್ಯೋತಿಯನ್ನು ಉತ್ತಮವಾಗಿ ಬೆಳಗಿಸಿ ತಾ,ಕೀರ್ತಿ ತನ್ನಿ ಎಂದು ಸಲಹೆ ನೀಡಿದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡಾ.ಜಿ.ವೆಂಕರಾಮಯ್ಯ ಅವರು ಮಾತನಾಡಿ ಹಿಂದೂಳಿದ ತಾಲೂಕಿನಲ್ಲಿ ಬಡ ವಿದ್ಯಾರ್ಥಿಗಳ ಉತ್ತಮ ವಿದ್ಯಾಬ್ಯಾಸಕ್ಕೆ ಕೋಟ್ಯಾಂತರ ರು.ವೆಚ್ಚದ ಕಮ್ಮ ಹಾಸ್ಟಲ್ ನಿರ್ಮಾಣದಲ್ಲಿ ಜಿಲ್ಲಾಧಿಕಾರಿ ತಾ,ದೊಡ್ಡಹಳ್ಳಿ ರಾಮಾಂಜನೇಯ ಅವರ ಪರಿಶ್ರಮ ಹಚ್ಚಿದ್ದು,ಹಾಸ್ಟಲ್ ನಿರ್ಮಾಣಕ್ಕೆ 1ಕೋಟಿ 50ಲಕ್ಷ ಸ್ವಂತ ಹಣ ನೀಡಿದ್ದಾರೆ ಎಂದು ಪ್ರಶಂಶಿಸಿ ಅವರನ್ನು ಅಭಿನಂದಿಸಿದರು.ಉತ್ತಮ ಆಂಕಗಳು ಪಡೆಯುವುದರೊಂದಿಗೆ ಶೌಚಾಲಯ ಸ್ವಚ್ಚತೆ ಸೇರಿದಂತೆ ಹಾಸ್ಟಲ್ನಲ್ಲಿ ತಮ್ಮ ಕೆಲಸ ತಾವೇ ಮಾಡಿಕೊಂಡು ಹಾಸ್ಟಲ್ ಸುಸರ್ಜಿತವಾಗಿಡಿ ಎಂದು ಹಾಸ್ಟಲ್ ವಿದ್ಯಾರ್ಥಿಗಳಿಗೆ ಸಲಹೆ ಹಾಗೂ ಹಿತ ವಚನ ಹೇಳಿದರು.
ಪೋಷಕರು ತಮ್ಮ ಹಾಸ್ಟಲ್ ಎಂದು ಬಾವಿಸಿ,ಹಾಸ್ಟಲ್ ಅಭಿವ್ರದ್ಧಿಗೆ ಸಹಕರಿಸಿ ಎಂದ ಅವರು ವಿದ್ಯಾರ್ಥಿಗಳನ್ನು ಪದೇ ಪದೇ ಮನೆಗಳಗೆ ಕರೆಸಿಕೊಳ್ಳದೇ ವಿದ್ಯಾಬ್ಯಾಸಕ್ಕೆ ಪ್ರೋತ್ಸಾಹಿಸಿ ಎಂದರು.
ಮುಖಂಡರಾದ ಕೆಂಚಗಾನಹಳ್ಳಿ ಎಸ್.ವಿ.ಗೋವಿಂದಪ್ಪ,ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಕುಂಟೆ ಸತ್ಯಪ್ಪ,ಶಿಕ್ಷಕ ಕಟ್ಟಾ ನರಸಿಂಹಮೂರ್ತಿ,ತಾ,ಸಮಾಜ ಕಲ್ಯಾಣ ಇಲಾಖೆಯ ಚೌದರಿ ಮುಂತಾವರು ವಿದ್ಯಾರ್ಥಿಗಳಿಗೆ ಉತ್ತಮ ಸಲಹೆಗಳು ನೀಡಿ ಸ್ವಾಮಿ ವಿವೇಕಾನಂದ ರಾಮಕ್ರಷ್ಣ ಪರಮಹಂಸ ಅವರ ಅದರ್ಶಗಳು ಪಾಲಿಸುವ ಮೂಲಕ ಶಿಸ್ತು ರೂಡಿಸಿಕೊಂಡು ಉತ್ತಮ ವಿದ್ಯಾವಂತರಾಗಿ ಎಂದು ಸಲಹೆ ನೀಡಿದರು. ವಿವೇಕಾನಂದ ಡಿಇಡಿ ಕಾಲೇಜ್ ಪ್ರಾಂಶುಪಾಲ ಹಾಗೂ ನಿಲಯ ಪಾಲಕ ನಾಗೇಂದ್ರಪ್ಪ ವಂದನಾರ್ಪಣೆ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

