ನಗರಸಭಾ ನಾಮ ನಿರ್ದೇಶನ ಮಾಡಲು ಒತ್ತಾಯ
ತಿಪಟೂರು: ಸವಿತಾ ಸಮಾಜಕ್ಕೆ ನಗರಸಭಾ ನಾಮ ನಿರ್ದೇಶನ ನೀಡಬೇಕೆಂದು ಸಮಾಜದ ಮುಖಂಡರು ಶಾಸಕರಾದ ಕೆ.ಷಡಕ್ಷರಿಯವರಿಗೆ ಒತ್ತಾಯಿಸಿದ್ದಾರೆ.
ಸವಿತಾ ಸಮಾಜದ ಜನಾಂಗವು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗವಾಗಿರುವುದರಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸದೇ ಇಂದು ಅಲ್ಪಸಂಖ್ಯಾತರ ರೀತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಸಹ ಮಾಹಿತಿ ಇಲ್ಲದೇ ಇಂದು ಅನೇಕ ಸರ್ಕಾರದ ಸೌಲಭ್ಯಗಳು ಸವಿತಾ ಸಮಾಜಕ್ಕೆ ತಲುಪುತ್ತಿಲ್ಲ.
ಆದ್ದರಿಂದ ರಾಜಕೀಯವಾಗಿ ಸವಿತಾ ಸಮಾಜದ ಜನಾಂಗವು ಬೆಳೆಯಲು ಶಾಸಕರು ಪ್ರೋತ್ಸಾಹ ನೀಡಿ ಸವಿತಾ ಸಮಾಜಕ್ಕೆ ನಗರಸಭಾ ನಾಮ ನಿರ್ದೇಶನ ಮಾಡುವುದರ ಮೂಲಕ ಜನಾಂಗಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸವಿತಾ ಸಮಾಜದ ತಾ.ಅಧ್ಯಕ್ಷರಾದ ಮುತ್ತುರಾಜ್ ಮತ್ತು ಪದಾಧಿಕಾರಿಗಳಾದ ಟಿ.ಎನ್.ನಾಗರಾಜು, ವರದರಾಜು, ಕುಮಾರ್, ಗೋವಿಂದರಾಜ್, ವಿಜಯಕುಮಾರ್ ಸೇರಿದಂತೆ ಮತ್ತಿತರ ಮುಖಂಡರುಗಳು ಶಾಸಕರಿಗೆ ಒತ್ತಾಯಿಸಿದ್ದಾರೆ.
7 ರಂದು ಏಕಕಲಾರತ್ನ ಪ್ರಶಸ್ತಿ ಪುರಸ್ಕಾರ
ತುಮಕೂರು: ತುಮಕೂರು ಜಿಲ್ಲಾ ಅಲೆಮಾರಿ ದೊಂಬಿದಾಸರ ಸಂಘದ ವತಿಯಿಂದ ಏಕಕಲಾ ರತ್ನ ಪ್ರಶಸ್ತಿ ಪುರಸ್ತಾರ ಸಮಾರಂಭವನ್ನು ಜು. 7 ರಂದು ಬೆಳಗ್ಗೆ 11-30ಕ್ಕೆ ತುಮಕೂರಿನ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11-30 ಕ್ಕೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಅನಂತಪುರ ಜಿಲ್ಲೆಯ ಗುರುರಂಗ ಮಠದ ವೀರ ಅಜ್ಜಿಹಳ್ಳಿಯ ಕರುಣಾಕರ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್ ವಹಿಸಲಿದ್ದಾರೆ. ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡ, ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರ ಪಾಲ್ಗೊಳ್ಳಲ್ಲಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿ, ನಟ ಕಾಕೋಳು ರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ನಿವೃತ್ತ ಪಪೂ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಕೆ. ದೊರೈರಾಜ್, ಕಾನೂನು ತಜ್ಞ ರಂಗನಾಥ್, ಸಮತಾ ಮಹಿಳಾ ವೇದಿಕೆ ಅಧ್ಯಕ್ಷೆ ಗಾಯತ್ರಿ ರಾಜು, ಮೋಹನ್ದಾಸ್, ಡಾ. ರಘುಪತಿ, ಯುವ ಕಾಂಗ್ರೆಸ್ನ ರಾಜೇಶ್ ದೊಡ್ಮನೆ, ಸಂಘದ ಹಿರಿಯರಾದ ವೆಂಕಟೇಶ್, ಅನಂತಪದ್ಮನಾಭಯ್ಯ, ಕೃಷ್ಣದಾಸ್ ಇತರರು ಪಾಲ್ಗೊಳ್ಳಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

