ಒಂದು ನೋಟು ಕೊಟ್ಟು ಒಂದು ಓಟು ಕೊಡಿ...
ತುಮಕೂರು: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಪಿಐ(ಎಂ) ನಗರ ಸಮಿತಿಯು ನಗರದ 12 ನೇ ವ್ಯಾಪ್ತಿಯಲ್ಲಿ ಚುನಾವಣಾ ಕನಿಷ್ಠ ವೆಚ್ಚಗಳಿಗಾಗಿ ಜನ ಸಾಮಾನ್ಯರಿಂದ ಒಂದು ನೋಟು ಕೊಟ್ಟು, ಒಂದು ಓಟು ಕೊಡಿ ಎಂಬ ವಿಶೇಷ ಆಂದೋಲನಕ್ಕೆ ಚಾಲನೆ ನೀಡಿತು.
ಜನ ಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ವಿಶೇಷ ಆಸಕ್ತಿಯಿಂದ ಜನರ ಇದನ್ನು ಸ್ವೀಕರಿಸಿದ್ದಾರೆಂದು ಸಿಪಿಐ(ಎಂ) ನಗರ ಸಮಿತಿ ತಿಳಿಸಿದೆ. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತುಮಕೂರು ನಗರ ಸಿಪಿಐ(ಎಂ) ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಅವರು ಮಾತನಾಡಿ ಚುನಾವಣೆಗಳು ಹಣ ಹೂಡಿ ಲಾಭ ಮಾಡಿಕೊಳ್ಳು ಉದ್ದಿಮೆಗಳಲ್ಲಿ ಪರಿವರ್ತನೆ ಆಗುತ್ತಿರುವ ಅನಾರೋಗ್ಯಕರ ಪರಿಸ್ಥಿತಿಯನ್ನು ಪ್ರಜೆಗಳು ಸರಿಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಿಪಿಐ(ಎಂ) ಹಿಂದಿನಿಂದಲೂ ಜನತೆಯ ಸಹಾಯ ಸಹಕಾರಗಳಿಂದಲೇ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದು ಚುನಾವಣೆಗಳಲ್ಲಿ ಇದನ್ನೆ ಅನುಸರಿಸುತ್ತಿದೆ ಎಂದು ತಿಳಿಸಿದರು.
ಸಿಪಿಐ(ಎಂ) ನ ನಜರಾಬಾದ್ ಶಾಖೆಯ ಮುಖಂಡರಾದ ಕುಲ್ಸುಂಬು, ಹಲೀಮಾ, ಸೈಯದ್ ಖಾಸಿಂ, ರಫೀಕ್ ಅಹಮದ್ ಮತ್ತಿತರರು ಮನೆ ಮನೆಗಳಿಗೆ ತೆರಳಿ ಒಂದು ನೋಟು ಕೊಟ್ಟು ಒಂದು ಓಟು ಕೊಡಿ ಎಂಬ ಘೋಷಣೆಗಳೊಂದಿಗೆ ಅಭ್ಯರ್ಥಿಯ ಪ್ರಚಾರ ನಡೆಸಿದರು. ಸುಮಾರು 2 ಸಾವಿರ ರು.ಗಳಷ್ಟು ನಿಧಿ ಇಂದಿನ ಪ್ರಚಾರ ಸಂದರ್ಭದಲ್ಲಿ ಜನರು ದೇಣಿಗೆಯಾಗಿ ನೀಡಿದ್ದಾರೆ.
ಇದೇ ಮಾದರಿಯಲ್ಲಿ ನಗರದಲ್ಲಿ ಸಿಪಿಐ(ಎಂ) ಸರ್ವೆ ಮಾಡಿರುವ ಎಲ್ಲಾ ವಾರ್ಡ್ಗಳಲ್ಲಿ ಚುನಾವಣಾ ವೆಚ್ಚಕ್ಕಾಗಿ ಸಾರ್ವಜನಿಕರ ಸಹಕಾರ ಕೋರಲಾಗುವುದೆಂದು ಸಿಪಿಐ(ಎಂ) ನಗರ ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

