ಜನಹಿತ ಮರೆತವರಿಗೆ ಪಾಠ ಕಲಿಸಲಿ ಚುನಾವಣೆ: ದಸ್ತಗೀರ್ ಅಭಿಮತ
ತುಮಕೂರು: ಪ್ರಜಾಪ್ರಭುತ್ವದಲ್ಲಿ ಪ್ರಭುಗಳ ಆಯ್ಕೆ ನಡೆಸಬೇಕಾದ ಪ್ರಜೆಗಳು ಪ್ರಜ್ಞಾವಂತಿಕೆ ಮೆರೆಯುವ ಸಂದರ್ಭ ಚುನಾವಣೆಗಳ ಕಾಲವಾಗಿದ್ದು ಜನ ಹಿತಕ್ಕಾಗಿ ನಿಸ್ವಾರ್ಥ ಹಾಗೂ ಜನೋಪಕಾರಿ ಮನೋಭಾವಗಳಿಂದ ಕೆಲಸ ಮಾಡುವ ಬದ್ಧತೆ ಇರುವವರನ್ನು ಗುರುತಿಸಿ ಜನಹಿತ ಮರೆತ ಪಕ್ಷಗಳಿಗೆ, ವ್ಯಕ್ತಿಗಳಿಗೆ ಪಾಠ ಕಲಿಸುವಂತಹ ಕೆಲಸಕ್ಕೆ ಮತದಾರರು ಮುಂದಾಗಬೇಕೆಂದು ಹಿರಿಯ ಕಾರ್ಮಿಕ ಧುರೀಣ ಸಿಪಿಐ (ಎಂ) ನಾಯಕ ಮಹಮದ್ ದಸ್ತಗೀರ್ ಅವರು ಅಭಿ ಪ್ರಾಯಪಟ್ಟರು.
ಅವರು ನಜರಾಬಾದ್ನಲ್ಲಿ ನಡೆದ ತುಮಕೂರು ನಗರಸಭಾ ಚುನಾವಣೆಗೆ ಸಿಪಿಎಂ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಸಿಪಿಎಂ ಮತ್ತೊಬ್ಬ ಮುಖಂಡ ಬಿ.ಉಮೇಶ್ ಮಾತನಾಡಿ ಸದಾ ಜನಹಿತದ ಸದುದ್ದೇಶದಿಂದ ಎಚ್ಚರ ಇರುವ ಚಳವಳಿಗಳು ಚುನಾವಣೆಗಳ ಸಂದರ್ಭದಲ್ಲಿ ಜನಗಳಿಂದ ದೂರ ಉಳಿದುಬಿಡುವ ಕ್ರಮ ಸರಿಯಲ್ಲ. ಹಾಗಾಗಿ ಈ ವ್ಯವಸ್ಥೆಯ ಎಲ್ಲಾ ತಪ್ಪುಗಳನ್ನು ಸರಿಪಡಿಸಲು ಚಳವಳಿಗಳಲ್ಲಿರುವ ಜನರು ಜನರೊಂದಿಗೆ ಸೇರಿಕೊಂಡು ಚುನಾವಣೆ ಸಂದರ್ಭವನ್ನು ಬಳಸಲೇ ಬೇಕಾದ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು
ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಅವರು ಮಾತನಾಡಿ ಪ್ರಜಾಪ್ರಭುತ್ವ ಬಲಿಷ್ಠಗೊಳಿಸಲು ಸಂವಿದಾನದ 74ನೇ ತಿದ್ದುಪಡಿಯಂತೆ ಅಧಿಕಾರ ವಿಕೇಂದ್ರೀಕರಣ ಹಾಗೂ ಜನತೆಗೆ ಅಧಿಕಾರ ನೀಡಬೇಕಾದ ನಗರ ಸ್ಥಳೀಯ ಸಂಸ್ಥೆಗಳು ಭೂ ಕಬಳಿಕೆದಾರರ ಕೋಟ್ಯಧಿಪತಿಗಳ ಅರಮನೆಯ ಕೂಟಗಳಾಗದೆ ಜನತೆ ಸಂಕಷ್ಟಗಳಿಗೆ ಸ್ಪಂದಿಸುವಂತಹ ನೈಜ ಪ್ರಜಾಪ್ರಭುತ್ವದ ಕೇಂದ್ರಗಳಾಗಿ ಕೆಲಸ ನಿರ್ವಹಿಸುವಂತಾಗಬೇಕೆಂದರು.
ಕಾರ್ಯಕ್ರಮದ ಆರಂಭದಲ್ಲಿ ನಗರ ಸಮಿತಿ ಕಾರ್ಯದರ್ಶಿ ಎನ್.ಕೆ. ಸುಬ್ರಹ್ಮಣ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಮಾರಂಭದಲ್ಲಿ 5ನೇ ವಾರ್ಡಿನ ಅಭ್ಯರ್ಥಿ ಬಿ. ಉಮೇಶ್, 11 ನೇ ವಾರ್ಡಿನ ಅಭ್ಯರ್ಥಿ ಕೆ. ಮಂಜುನಾಥ್, 12 ನೇ ವಾರ್ಡಿನ ಅಭ್ಯರ್ಥಿ ಇಮ್ತಿಯಾಜ್ ಉನ್ನೀಸಾ, 13 ನೇ ವಾರ್ಡಿನ ಅಭ್ಯರ್ಥಿ ರಫೀಕ್ ಅಹಮದ್, 22 ನೇ ವಾರ್ಡಿನ ಅಭ್ಯರ್ಥಿ ರಾಘವೇಂದ್ರ ಅವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

