ಇಂದು ಗಿರಿಜಾ ಕಲ್ಯಾಣೋತ್ಸವ
ಹುಳಿಯಾರು: ಪಟ್ಟಣದ ಆರ್ಯವೈಶ್ಯ ಮಂಡಳಿ ವತಿಯಿಂದ ಗಾಂಧಿಪೇಟೆಯ ಶ್ರೀವಾಸವಿ ಕಲ್ಯಾಣ ಮಂದಿರದ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಸೋಮವಾರ ಗಿರಿಜಾ ಕಲ್ಯಾಣೋತ್ಸವವನ್ನು ಏರ್ಪಡಿಸಿದ್ದು, ಇದರ ಅಂಗವಾಗಿ ಬೆಳಿಗ್ಗೆ 6 ಗಂಟೆಯಿಂದ ನಾಂದಿ, ವರಪೂಜೆ, ನಿಶ್ಚಿತಾರ್ಥ ಕಾರ್ಯ ನಡೆದು, ನಂತರ 9.13 ರಿಂದ 11.21ರ ಧನುಸ್ಸು ಮಹೂರ್ತದಲ್ಲಿ ಪಾರ್ವತಿ ಪರಮೇಶ್ವರರಿಗೆ ಕಲ್ಯಾಣೋತ್ಸವ ನಡೆಯಲಿದೆ. ಇದೇ ದಿನ ಮಧ್ಯಾಹ್ನ ಭಜನಾ ಕಾರ್ಯಕ್ರಮ, ಸಂಜೆ ವೀರಗಾಸೆಯೊಂದಿಗೆ ಅಮ್ಮನವರ ರಾಜಬೀದಿ ಉತ್ಸವ ನಡೆಯಲಿದೆ.
ಚಾರ್ಮಿನಾರ್ ತಂಡ ಇಂದು ತುಮಕೂರಿಗೆ
ತುಮಕೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಸೋಮವಾರ ಮಧ್ಯಾಹ್ನ 12-30 ಕ್ಕೆ ಚಾರ್ಮಿನಾರ್ ಚಿತ್ರ ತಂಡ ಭೇಟಿ ನೀಡಲಿದೆ. ನಾಯಕ ನಟ ಪ್ರೇಮ್, ನಿರ್ದೇಶಕ ಆರ್. ಚಂದ್ರು, ನಾಯಕಿ ಮೇಘನಾ ಗಾಂವ್ಕರ್ ಉಪಸ್ಥಿತರಿರುವರು. ಬಿ.ಕೆ. ಆಂಜನಪ್ಪ, ಆರ್. ಸ್ವಾಧೀನ್ಕುಮಾರ್ ಉಪಸ್ಥಿತರಿರುವರು.
ಕಾಡದೇವರಮಠಗೆ ಪಿಎಚ್ಡಿ ಪದವಿ
ತುಮಕೂರಿನ ಸಿದ್ದಗಂಗಾ ಮಹಿಳಾ ಕಾಲೇಜಿನ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮುಖ್ಯಸ್ಥ ಎಸ್.ಎಲ್. ಕಾಡದೇವರ ಮಠ ಅವರಿಗೆ ಮೇಘಾಲಯದ ಸಿಎಂಜೆ ವಿವಿ ಡಾಕ್ಟರೇಟ್ ಪದವಿ ನೀಡಿದೆ. ರೀ ಇಂಜಿನಿಯರಿಂಗ್ ಆಫ್ ಕಾಲೇಜ್ ಲೈಬ್ರರೀಸ್ ಇನ್ ಅಪ್ಲೈಡ್ ಟು ತುಮಕೂರು ಯೂನಿವರ್ಸಿಟಿ ಎ ಸ್ಟಡಿ ಎಂಬ ವಿಷಯ ಕುರಿತು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯ ನಿವೃತ್ತ ಮಾಹಿತಿ ಅಧಿಕಾರಿ ಡಾ. ಎಸ್. ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಕಾಡದೇವರ ಮಠ ಪ್ರಬಂಧ ಮಂಡಿಸಿದ್ದರು.
ಜಾಗೃತಿ ಕಾರ್ಯಕ್ರಮ
ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ದಿನಾಚರಣೆ ಹಾಗೂ ಏಡ್ಸ್ ಜಾಗೃತಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನವೀನ್ ರೆಡ್ ರಿಬ್ಬನ್ ಕಾರ್ಯಕ್ರಮದಡಿ ಏಡ್ಸ್ ಕುರಿತಂತೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಚಿಕ್ಕಹನುಮಯ್ಯ ವಹಿಸಿದ್ದರು. ಪ್ರೊ. ಸುಬ್ಬಯ್ಯ ಸ್ವಾಗತಿಸಿ, ವಿದ್ಯಾರ್ಥಿನಿ ತಾರಾ ನಿರೂಪಿಸಿ, ವಂದಿಸಿದರು.
ಇಂದು ಯೋಗ ಶಿಬಿರ
ತುಮಕೂರಿನ ಮಂಜುನಾಥೇಶ್ವರ ಯೋಗ ಪ್ರತಿಷ್ಟಾನದ ವತಿಯಿಂದ ತಿಪಟೂರಿನಲ್ಲಿ ಮಾ.4 ರಿಂದ 9 ರವರೆಗೆ ಯೋಗ, ದ್ಯಾನ ಶಿಬಿರವನ್ನು ಆಯೋಜಿಸಲಾಗಿದೆ. ಮಾಹಿತಿಗೆ ಸಂಪರ್ಕಿಸಿ 8152960817, 8710924191.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

