ತುಮಕೂರು

ಕೆಪಿಸಿಸಿ ಅಧ್ಯಕ್ಷರ ರೋಡ್ ಶೋ, ಮತಯಾಚನೆ

Published On :

ತುಮಕೂರು: ಸ್ಥಳೀಯ ಸಂಸ್ಥೆಗಳ ಚುನಾವಣಾ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ತುಮಕೂರಿನಲ್ಲಿ ಮತಯಾಚನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. 1 ನೇ ವಾರ್ಡ್‌ನ ಚೆಕ್ ಪೋಸ್ಟ್‌ನಿಂದ ಶ್ರೀರಾಮ  ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿರಾಗೇಟ್‌ನ ಕನಕದಾಸರ ವೃತ್ತ, ಹಳೇ ಮಾರುಕಟ್ಟೆ ವೃತ್ತದ ದೊಡ್ಡ ಆಂಜನೇಯ ದೇವಸ್ತಾನ, ಚಿಕ್ಕಪೇಟೆ ಮುಖ್ಯರಸ್ಥೆ, ವಾಸವಿ ಕಲ್ಯಾಣ ಮಂಟಪದ ರಸ್ತೆ, ಜಿಸಿಆರ್ ಕಾಲೋನಿ, ಶಿಶುವಿಹಾರ ರಸ್ತೆ, ಗಾರ್ಡನ್ ರಸ್ತೆ, ದಿಬ್ಬೂರು ರಿಂಗ್ ರಸ್ತೆಯ ಮೂಲಕ ಬಿಎಚ್ ರಸ್ತೆ, ಗುಬ್ಬಿ ಗೇಟ್ ವೃತ್ತ, ಸಂತೇಪೇಟೆ ಮುಖ್ಯರಸ್ಥೆ, ಬಿ.ಜಿ. ಪಾಳ್ಯ ವೃತ್ತ, ಪಿಎಚ್ ಕಾಲೋನಿ ಮುಖ್ಯರಸ್ಥೆ, ಬಾಂಬೆ ಬಿಲ್ಡಿಂಗ್ ರಸ್ತೆ , ಜಯಪುರ ರಸ್ತೆ, ಹೆಗ್ಗಡೆ ಕಾಲೋನಿ, ಮೆಳೇಕೋಟೆ, ಸದಾಶಿವನಗರ ಮುಖ್ಯರಸ್ಥೆ, ಉಪ್ಪಾರಹಳ್ಳಿ, ಡಿಡಿಪಿಐ ಕ:ಕೇರಿ ರಸ್ತೆ, ಎಸ್‌ಐಟಿ ಮುಖ್ಯರಸ್ಥೆ, ಬಟವಾಡಿ ವೃತ್ತ, ದೇವರಾಯಪಟ್ಟಣ,  ಬಂಡೇಪಾಳ್ಯ, ಕ್ಯಾತ್ಸಂದ್ರದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು.
ಪರಮೇಶ್ವರ್ ಜತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ರಫೀಕ್ ಅಹಮದ್, ಭೂಮಿ ಬಳರದ ಸೋಮಣ್ಣ, ಆಡಿಟರ್ ಯಲಚವಾಡಿ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, 35 ವಾರ್ಡ್‌ಗಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.