'ಬಡವರಲ್ಲಿ ಪರಿವರ್ತನೆ ತರುವುದೇ ಯೋಜನೆ '
ಕ.ಪ್ರ. ವಾರ್ತೆ ಟಿ ತಿಪಟೂರು ಟಿ ಮಾ. 4 ಬಡ ಕುಟುಂಬಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಒದಗಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕರ್ತರು ಮಾಡಬೇಕೆಂದು ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು. ತಿಪಟೂರಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡವರ ಬದುಕಿನ ಸಮಸ್ಯೆಯು ಪರಿಹಾರವಾದಾಗ ಅವರ ಸಂತೋಷದ ಜೊತೆಗೆ ಕಾರ್ಯಕರ್ತರು ಸಂತೋಷ ಪಡಬೇಕು. ಸರ್ಕಾರದ ಅನೇಕ ಜನಹಿತ ಕಾರ್ಯಕ್ರಮಗಳನ್ನು ಅರ್ಹ ರೈತರಿಗೆ ಸೌಲಭ್ಯ ಒದಗಿಸುವಲ್ಲಿ ಹೆಚ್ಚು ಆದ್ಯತೆ ನೀಡಬೇಕು. ಪರ್ಯಾಯ ಇಂಧನಗಳಾದ ಗೋಬರ್ ಗ್ಯಾಸ್, ಸೋಲಾರ್ ಬಗ್ಗೆ ಸಂಘದ ಸದಸ್ಯರಿಗೆ ಹೆಚ್ಚಿನ ಮಾಹಿತಿ ನೀಡಿ ಅನುಷ್ಠಾನಗೊಳಿಸುವುದು. ಕಡಿಮೆ ಪ್ರಮಾಣದಲ್ಲಿ ನೀರಾವರಿಯನ್ನು ಬಳಸಿ ಮಾಡುವ ಕೃಷಿಯ ಕುರಿತು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಬೇಕೆಂದರು. ಪ್ರಗತಿನಿಧಿ ಮರುಪಾವತಿ, ಎನ್.ಪಿ.ಎಸ್. ಜೀವನ ಮಧುರ ಭವಿಷ್ಯಕ್ಕೆ ಉಳಿತಾಯವೆಂದು ಸದಸ್ಯರಿಗೆ ಮನವರಿಕೆ ಮೂಡಿಸಬೇಕು. ಬಡವರಲ್ಲಿ ಪರಿವರ್ತನೆ ತರುವುದೇ ಯೋಜನೆಯ ಗುರಿಯಾಗಿದ್ದು, ತುಮಕೂರು ಜಿಲ್ಲೆಯಲ್ಲಿ 28ಸಾವಿರ ಸಂಘದಲ್ಲಿ 2,85,00 ಸದಸ್ಯರು 310 ಕೋಟಿ ಸಾಲವನ್ನು ಪಡೆದು ಶೇ.100ರಷ್ಟು ಮರುಪಾವತಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಜಿಲ್ಲೆಯ ನಿರ್ದೇಶಕರಾದ ಪಿ.ಗಂಗಾಧರ್ ರೈ ಸ್ವಾಗತಿಸಿ, ಯೋಜನೆಯ ಅಭಿವೃದ್ಧಿಯ ಪ್ರಗತಿಯ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಬಿ.ಸಿ. ನಾಗೇಶ್, ಜಿಲ್ಲೆಯ ಉತ್ತರ ವಿಭಾಗದ ನಿರ್ದೇಶಕ ಪುರುಷೋತ್ತಮ್, ಯೋಜನಾಧಿಕಾರಿ ಶ್ರೀನಿವಾಸ್ ಮತ್ತಿರರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

