ತುಮಕೂರು

ಇಇ ಮಂಜುನಾಥ್ ವರ್ಗಾವಣೆ ಮಾಡಿದ್ದು ಸರ್ಕಾರ, ನಾನಲ್ಲ

Published On :

ಕ.ಪ್ರ. ವಾರ್ತೆ ಟಿ ತುಮಕೂರು ಟಿ ಮಾ. 4
ಎಕ್ಸಿಕ್ಯುಟಿವ್ ಎಂಜಿನಿಯರ್ (ಇಇ) ಮಂಜುನಾಥ್ ಅವರನ್ನು ತುಮಕೂರು ನಗರಸಭೆಗೆ ವರ್ಗಾವಣೆ ಮಾಡಿದ್ದು ಸರ್ಕಾರ, ನಾನಲ್ಲ. ಮಂಜುನಾಥ್ ವರ್ಗಾವಣೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಸ್ಪಷ್ಟಪಡಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕೆಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಂಜುನಾಥ್ ತಮ್ಮ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರಿಸಿದರು. ಮಂಜುನಾಥ್‌ಗೆತಮ್ಮ ಶ್ರೀರಕ್ಷೆಯಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಂತಹ ಪ್ರಶ್ನೆಗಳಿಗೆಲ್ಲಾ ಉತ್ತರಿಸುವ ಅಗತ್ಯವಿಲ್ಲ ಎಂದು ಸೊಗಡು ಪ್ರತಿಪಾದಿಸಿದರು.
ಕೆಜೆಪಿ ಆರೋಪದಲ್ಲಿ ಹುರುಳಿಲ್ಲ: ತುಮಕೂರು ನಗರಸಭೆಗೆ ಎಕ್ಸಿಕ್ಯುಟಿವ್ ಎಂಜಿನಿಯರ್ ಮಂಜುನಾಥ್ ಅವರನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ನಗರಸಭೆಯಲ್ಲಿ ಇಇ ಪೋಸ್ಟ್ ಇಲ್ಲ. ಆದರೆ ಮಂಜುನಾಥ್ ಅವರನ್ನು ನಗರಸಭೆಗೆ ತರಲೇಬೇಕೆಂಬ ದುರುದ್ದೇಶದಿಂದ ಹುದ್ದೆ ನಿರ್ಮಾಣ ಮಾಡಿ, ಸೊಗಡು ಶಿವಣ್ಣ ಮಂಜುನಾಥ್ ಅವರನ್ನು ತಂದಿದ್ದಾರೆ ಎಂಬ ಕೆಜೆಪಿ ಜಿಲ್ಲಾಧ್ಯಕ್ಷರ ಆರೋಪದಲ್ಲಿ ಹುರುಳಿಲ್ಲ ಎಂದರು.
ಕೆಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲ: ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ತುಮಕೂರು ನಗರಸಭೆ ಪಾಲಿಕೆ ಆದ ವೇಳೆ ಬಿಡುಗಡೆಯಾದ 25 ಕೋಟಿ ರು. ಹಣ ಖರ್ಚಾಗಿರುವ ಕುರಿತು ಮಾಹಿತಿಯಿಲ್ಲ. ತಾವು
ತುಮಕೂರಿನಲ್ಲಿ ಮಾಡಿಸುತ್ತಿರುವ ಅಭಿವೃದ್ಧಿ ಕಾಮಗಾರಿಗಳೂ ಅವರಿಗೆ ಗೊತ್ತಿಲ್ಲ. 25 ಕೋಟಿ ರು ಹಣ ವಾಪಸ್ ಹೋಗಿಲ್ಲ. ದುರದೃಷ್ಟ ಅವರಿಗೆ ನಾನು ಅನ್ನೋದು ಹೆಚ್ಚಾಗಿ, ಹೀಗೆಲ್ಲಾ ಮಾಡಿಸುತ್ತಿದೆ. ಬಿಜೆಪಿ ನಾನು ಎಂಬುದನ್ನು ವಿರೋಧಿಸುತ್ತದೆ. ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿ, ಎರಡನೇ ಹಂತದ ಒಳ ಚರಂಡಿ ಕಾಮಗಾರಿ ಸೇರಿದಂತೆ  ಒಟ್ಟು 800 ಕೋಟಿ ರು. ಗಳಿಗೂ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ತುಮಕೂರಿನಲ್ಲಿ ನಡೆದಿವೆ ಎಂದು ಸೊಗಡು ಮಾಹಿತಿ ನೀಡಿದರು.
ರಸ್ತೆ ಪ್ರಸ್ತಾವನೆ ಗೊತ್ತಿಲ್ಲ: ಈಗ ದ್ವಾರಕ ಹೋಟೆಲ್‌ನಿಂದ, ಅಮಾನಿಕೆರೆ ವರೆಗೆ ಚೆನ್ನಾಗೇ ಇರುವ ರಸ್ತೆಗೆ ಮತ್ತೆ ಕಾಮಗಾರಿ ನಡೆಸಲು 25 ಲಕ್ಷ ರು. ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿರುವುದು ತಮಗೆ ಗೊತ್ತಿಲ್ಲ ಎಂದರು.
ರಾಯಗಾಲುವೆ ಒತ್ತುವರಿ ಪರ ಇಲ್ಲ: ಉಪ್ಪಾರಹಳ್ಳಿ ರಾಯಗಾಲುವೆ ಸೇರಿದಂತೆ ಯಾವುದೇ ರಾಯಗಾಲುವೆ ಒತ್ತುವರಿದಾರರ ಪರ ತಾವಿಲ್ಲ. ಪಾರ್ಕ್ ಒತ್ತುವರಿ ತೆರವುಗೊಳಿಸಲು ಬದ್ಧ. ತುಮಕೂರಿನಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ಕುರಿತು ಎಸ್ಪಿಯವರೊಂದಿಗೆ ಚರ್ಚಿಸುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಟೂಡಾ ಅಧ್ಯಕ್ಷ ಎಸ್.ಆರ್. ಶ್ರೀಧರಮೂರ್ತಿ, ಎಂಎಸ್‌ಐಎಲ್ ಅಧ್ಯಕ್ಷ ನಂದೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.