ಆಲೂರು ಪಪಂ: ಶೇ. 85.75
ಕ.ಪ್ರ. ವಾರ್ತೆ ಆಲೂರು ಮಾ. 7
ಆಲೂರು ಪಟ್ಟಣ ಪಂಚಾಯ್ತಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಶೇ.85.75 ಮತದಾನ ನಡೆದಿದೆ. 1ನೇ ವಾರ್ಡಿನಲ್ಲಿ ಒಟ್ಟು 455 ಮತಗಳಿದ್ದು, 400 ಮತಗಳು ಚಲಾವಣೆಗೊಂಡಿದ್ದು ಶೇ.87.91ಮತದಾನವಾಗಿದೆ. 2ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದು, 3ನೇ ವಾರ್ಡಿನಲ್ಲಿ 381 ಮತಗಳಿದ್ದು 338 ಚಲಾವಣೆ, ಶೇ.88.71. 4ನೇ ವಾರ್ಡ್ ಮತಗಳಿದ್ದು ಚಲಾವಣೆ 338 ಮತ ಚಲಾವಣೆಯಾಗಿದ್ದು, ಶೇ. 89.41 ಮತದಾನವಾಗಿದೆ.
5ನೇ ವಾರ್ಡಿನಲ್ಲಿ 468 ಮತಗಳಿದ್ದು, 422 ಮತ ಚಲಾವಣೆಯಾಗಿದ್ದು, ಶೇ. 90.17 ಮತದಾನವಾಗಿದೆ. 6 ನೇ ವಾರ್ಡಿನಲ್ಲಿ 414 ಮತಗಳಿದ್ದು, 346 ಚಲಾವಣೆಯಾಗಿ, ಶೇ. 83.57 ರಷ್ಟು ಮತದಾನವಾಗಿದೆ. 7ನೇ ವಾರ್ಡಿನಲ್ಲಿ 302 ಮತಗಳಿದ್ದು, 265 ಚಲಾವಣೆಯಾಗಿದೆ. ಶೇ. 87.84 ರಷ್ಟು ಮತದಾನವಾಗಿದೆ. 8ನೇ ವಾರ್ಡಿನಲ್ಲಿ 360 ಮತಗಳಿದ್ದು, 281 ಮತ ಚಲಾವಣೆಯಾಗಿದ್ದು, ಶೇ. 78.05ರಷ್ಟು ಮತದಾನವಾಗಿದೆ. 9ನೇ ವಾರ್ಡಿನಲ್ಲಿ 252 ಮತಗಳಿದ್ದು, 223 ಮತ ಚಲಾವಣೆಯಾಗಿದ್ದು, ಶೇ. 88.49 ಮತದಾನವಾಗಿದೆ. 10 ನೇ ವಾರ್ಡಿನಲ್ಲಿ 493 ಮತಗಳಿದ್ದು, 429 ಮತ ಚಲಾವಣೆಯಾಗಿದ್ದು, ಶೇ.87.01 ರಷ್ಟು ಮತದಾನವಾಗಿದೆ. 11 ನೇ ವಾರ್ಡಿನಲ್ಲಿ 480 ಮತಗಳಿದ್ದು, 375 ಮತ ಚಲಾವಣೆಯಾಗಿದ್ದು, ಶೇ. 78.12 ರಷ್ಟು ಮತದಾನವಾಗಿದೆ. ಪಟ್ಟಣದ ಒಟ್ಟು 11 ವಾರ್ಡ್ಗಳ ಪೈಕಿ 10 ವಾರ್ಡ್ಗಳಿಗೆ ಮತದಾನ ನಡೆದು ಒಟ್ಟು 3983 ಮತದಾರರಲ್ಲಿ 1713 ಪುರುಷರು,1704 ಮಹಿಳಾ ಮತದಾರರು ಸೇರಿದಂತೆ 3417 ಮಂದಿ ಮತ ಚಲಾಯಿಸಿದ್ದಾರೆ. ಒಟ್ಟಾರೆಯಾಗಿ ಶೇ.85.78 ರಷ್ಟು ಮತದಾನವಾಗಿದೆ. ಪಟ್ಟಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಿದ್ದ 4, 9 ಹಾಗೂ 8 ನೇ ವಾರ್ಡ್ ಸೇರಿದಂತೆ ಎಲ್ಲಾ 10 ವಾರ್ಡ್ಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಮತದಾನ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

