ವಚನಗಳು ಸಚ್ಚಾರಿತ್ರ್ಯವಂತರನ್ನು ರೂಪಿಸುತ್ತವೆ
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.10
ವಚನಗಳು ಮಾನವನನ್ನು ಸಚ್ಚಾರಿತ್ರ್ಯವಂತನನ್ನಾಗಿ ರೂಪಿಸುತ್ತವೆ ಎಂದು ಪ್ರೊ. ಸಿ.ಎಚ್. ಮರಿದೇವರು ಅಭಿಪ್ರಾಯಪಟ್ಟರು.
ಅವರು ತುಮಕೂರು ಸಮೀಪದ ಯಲ್ಲಾಪುರದ ವನಿತಾ ವಿದ್ಯಾಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಳೆಯ ವಯಸ್ಸಿನಲ್ಲೇ ವಚನ, ಶ್ಲೋಕಗಳನ್ನು ಅಭ್ಯಾಸ ಮಾಡಿಸಿದಲ್ಲಿ, ಉತ್ತಮ ಪ್ರಜೆಗಳನ್ನು ನಿರೀಕ್ಷಿಸಲು ಸಾಧ್ಯ. ಇಂತಹ ಕೆಲಸ ಮಾಡುತ್ತಿರುವ, ಉತ್ತಮ ಸಂಸ್ಕಾರ ಬೆಳೆಸುತ್ತಿರುವ ವನಿತಾ ವಿದ್ಯಾಕೇಂದ್ರದ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಸಂಸ್ಕೃತ ವಿಶ್ವ ವಿದ್ಯಾಲಯದ ವಿಷಯ ಪರಿವೀಕ್ಷಕರಾದ ವಿದ್ವಾನ್ ಗಂಗಾಧರನ್ ಮಾತನಾಡಿ, ಪಾಠ ಕಲಿಯುವುದಕ್ಕೆ ಭವ್ಯ ಕಟ್ಟಡ, ಡೊನೇಷನ್ ಮುಖ್ಯವಲ್ಲ. ಉತ್ತಮ ಕಲಿಕಾ ವಾತಾವರಣ ಮುಖ್ಯ. ಇಲ್ಲಿನ ಮಕ್ಕಳ ಪ್ರತಿಭೆ ಹಾಗೂ ಪ್ರಗತಿ ಉತ್ತಮವಾಗಿದೆ ಎಂದರು. ಶಾರದಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರೂ, ಕೆ.ಎನ್. ಗುರಿಲಿಂಗಯ್ಯ ಬಹುಮಾನ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

