ನಗರಸಭೆ ಅತಂತ್ರ
ತುಮಕೂರು: ನಿರೀಕ್ಷೆಯಂತೆ ತುಮಕೂರು ನಗರಸಭೆ ಅತಂತ್ರವಾಗಿದೆ.
ತುಮಕೂರು ನಗರದ 35 ವಾರ್ಡ್ಗಳಲ್ಲಿ ಜೆಡಿಎಸ್ 13, ಕಾಂಗ್ರೆಸ್ 12, ಕೆಜೆಪಿ 5, ಬಿಜೆಪಿ 3 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ.
ಸ್ಪಷ್ಟ ಬಹುಮತಕ್ಕೆ 18 ಸೀಟುಗಳ ಅವಶ್ಯಕತೆ ಇದೆ. ಈಗ ಬಂದಿರುವ ಫಲಿತಾಂಶಗಳ ಪ್ರಕಾರ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತವಿಲ್ಲ. ಹೀಗಾಗಿ ಯಾರೇ ಅಧಿಕಾರ ಮಾಡಿದರೂ ಕೆಜೆಪಿ ಬೆಂಬಲ ಅಗತ್ಯವಾಗಿದೆ. ಹೀಗಾಗಿ ತುಮಕೂರು ನಗರಸಭೆಯಲ್ಲಿ ಕೆಜೆಪಿ ನಿರ್ಣಾಯಕ ಪಾತ್ರ ವಹಿಸಿದೆ.
ಕಳೆದ ನಗರಸಭಾ ಚುನಾವಣೆಗೆ ಹೋಲಿಸಿದರೆ ಜೆಡಿಎಸ್ ಗಣನೀಯ ಸಾಧನೆ ಮಾಡಿದೆ. ಕಳೆದ ನಗರಸಭೆ ಚುನಾವಣೆಯಲ್ಲಿ ತುಮಕೂರು ನಗರಸಭೆಗೆ 9 ಮಂದಿ ಜೆಡಿಎಸ್ ಸದಸ್ಯರು ಆಯ್ಕೆಯಾಗಿದ್ದರು. ಈಗ ಅವರ ಸಂಖ್ಯೆ 13 ಕ್ಕೆ ಏರಿದೆ. ಹಾಗೆಯೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 13 ಕ್ಷೇತ್ರವನ್ನು ಉಳಿಸಿಕೊಂಡಿತ್ತು. ಈ ಬಾರಿ 12 ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಳೆದ ಬಾರಿ 9 ಸೀಟು ಗೆದ್ದಿದ್ದ ಬಿಜೆಪಿ ಈ ಬಾರಿ 3 ಸೀಟು ಗೆದ್ದು ಶೋಚನೀಯ ಸ್ಥಿತಿ ತಲುಪಿದೆ. ಇನ್ನು ಹೊಸದಾಗಿ ಚುನಾವಣಾ ಕಣಕ್ಕೆ ಧುಮುಕಿದ್ದ ಕೆಜೆಪಿ ಗಣನೀಯ ಸಾಧನೆ ಮಾಡಿದ್ದು 5 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಉತ್ತಮವಾಗಿಯೇ ಇನ್ನಿಂಗ್ಸ್ ಆರಂಭಿಸಿದೆ.
ವಾರ್ಡ್ ನಂಬರ್ 1 ರಲ್ಲಿ ಕೆಜೆಪಿಯ ಇಂದ್ರಕುಮಾರ್ 1081 ಮತಗಳನ್ನು ಪಡೆಯುವ ಮೂಲಕ ಪಕ್ಷೇತರ ಅಭ್ಯರ್ಥಿ ವಿರುದ್ಧ 541 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ವಾರ್ಡ್ ನಂಬರ್ 2 ರಲ್ಲಿ ಬಿಜೆಪಿಯ ವೆಂಕಟಪ್ಪ ಅವರು 1362 ಮತಗಳನ್ನು ಪಡೆದು ಗೆದ್ದಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ನ ಟಿ.ಡಿ.ಯೋಗೀಶ್ ವಿರುದ್ಧ 502 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
41 ಮತಗಳ ಅಂತರ: ವಾರ್ಡ್ ನಂಬರ್ 3 ರಲ್ಲಿ ಕಾಂಗ್ರೆಸ್ನ ಮಹೇಶ್ ಅವರು 41 ಮತಗಳ ಅಂತರದಿಂದ ಕೆಜೆಪಿಯ ನರಸಿಂಹರಾಜು ಅವರನ್ನು ಪರಾಭವಗೊಳಿಸಿದ್ದಾರೆ. ವಾರ್ಡ್ ನಂಬರ್ 4 ರಲ್ಲಿ ಬಿಜೆಪಿಯ ಬಾವಿಕಟ್ಟೆ ನಾಗೇಶ್ ಅವರು 541 ಮತಗಳ ಅಂತರದಿಂದ ಕಾಂಗ್ರೆಸ್ನ ಚಂದ್ರಶೇಖರ್ ಅವರನ್ನು ಸೋಲಿಸಿದ್ದಾರೆ.
ವಾರ್ಡ್ ನಂಬರ್ 5 ರಲ್ಲಿ ಜೆಡಿಎಸ್ನ ವಾಸುದೇವ ಅವರು ಪಕ್ಷೇತರ ಅಭ್ಯರ್ಥಿ ಟಿ.ಎ. ಬಾಲಕೃಷ್ಣ ಅವರನ್ನು 126 ಮತಗಳ ಅಂತರದಿಂದ ಸೋಲಿಸಿದ್ದಾರೆ. ವಾರ್ಡ್ ನಂಬರ್ 6 ರಲ್ಲಿ ಜೆಡಿಎಸ್ನ ರಾಜಣ್ಣ ಅವರು ಕಾಂಗ್ರೆಸ್ನ ಮಂಜುನಾಥ ಅವರನ್ನು 619 ಮತಗಳಿಂದ ಸೋಲಿಸಿದ್ದಾರೆ. ವಾರ್ಡ್ ನಂಬರ್ 7 ರಲ್ಲಿ ಜೆಡಿಎಸ್ ನ ಎ.ಆರ್. ನಾಗರಾಜ ಅವರು ಬಿಜೆಪಿಯ ಹೆಚ್.ಕೆ. ನಾಗರಾಜು ಅವರನ್ನು 53 ಮತಗಳಿಂದ ಸೋಲಿಸಿದ್ದಾರೆ.
ಭರ್ಜರಿ ಅಂತರ: ವಾರ್ಡ್ ನಂಬರ್ 8 ರಲ್ಲಿ ಕಾಂಗ್ರೆಸ್ನ ನಯಾಜ್ ಅವರು ಜೆಡಿಎಸ್ನ ಮಹಮದ್ ಅನ್ಸರ್ ಅವರ ವಿರುದ್ಧ 1484 ಮತಗಳ ಭರ್ಜರಿ ಅಂತರದಿಂದ ಜಯ ದಾಖಲಿಸಿದ್ದಾರೆ.
ವಾರ್ಡ್ ನಂಬರ್ 9 ರಲ್ಲಿ ಕಾಂಗ್ರೆಸ್ನ ಸುಧೀಶ್ವರ್ ಅವರು ಪಕ್ಷೇತರ ಅಭ್ಯರ್ಥಿ ಟಿ.ಎಸ್. ಶಿವಪ್ರಸಾದ್ ವಿರುದ್ಧ 838 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ವಾರ್ಡ್ ನಂಬರ್ 10 ರಲ್ಲಿ ರಾಂಹ್ಪೆಲ್ನ ಮೊಹಮದ್ ನದೀಂ ಪಾಷ ಅವರು ಜೆಡಿಎಸ್ನ ಉಬೇದುಲ್ಲಾ ವಿರುದ್ಧ 43 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ವಾರ್ಡ್ ನಂಬರ್ 11 ರಲ್ಲಿ ಕೆಜೆಪಿಯ ಎಂ.ಎನ್. ವೆಂಕಟೇಶ್, ಜೆಡಿಎಸ್ನ ಜಿತೇಂದ್ರ ವಿರುದ್ಧ 118 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ವಾರ್ಡ್ ನಂಬರ್ 12 ರಲ್ಲಿ ಕಾಂಗ್ರೆಸ್ನ ರೆಹಮತ್ ಉನ್ನೀಸ್ ಅವರು ಪಕ್ಷೇತರ ಅಭ್ಯರ್ಥಿ ಶಬರಿನ್ ತಾಜ್ ಅವರನ್ನು 298 ಮತಗಳಿಂದ ಸೋಲಿಸಿದ್ದಾರೆ. 13 ರಲ್ಲಿ ಕಾಂಗ್ರೆಸ್ನ ಮಹಮದ್ ಹಫೀಜ್ ಅವರು ಕೆಜೆಪಿಯ ಎಸ್. ಶಂಕರ್ ವಿರುದ್ಧ 210 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 14 ರಲ್ಲಿ ಕಾಂಗ್ರೆಸ್ನ ಎಂ.ಪಿ. ಮಹೇಶ್ ಅವರು ಕೆಜೆಪಿಯ ಸೈಯದ್ ರೆಹಮತ್ ಉಲ್ಲಾ ಅವರನ್ನು 1156 ಮತಗಳ ಅಂತರದಿಂದ ಸೋಲಿಸಿದ್ದಾರೆ. ವಾರ್ಡ್ ನಂಬರ್ 15 ರಲ್ಲಿ ಕೆಜೆಪಿಯ ಟಿ.ಎಸ್. ಕರುಣಾರಾಧ್ಯ ಅವರು ಕಾಂಗ್ರೆಸ್ನ ಶಶಿಧರ್ ಟಿ.ಆರ್. ಅವರ ವಿರುದ್ಧ 308 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.
ವಾರ್ಡ್ ನಂಬರ್ 16 ರಲ್ಲಿ ಜೆಡಿಎಸ್ ರಾಮಕೃಷ್ಣ ಅವರು ಪಕ್ಷೇತರ ಅಭ್ಯರ್ಥಿ ಸೈಯದ್ ಇಲಿಯಾಸ್ ವಿರುದ್ಧ 84 ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. 17 ರಲ್ಲಿ ಪಕ್ಷೇತರ ಅಭ್ಯರ್ಥಿ ಗೀತಾ ರುದ್ರೇಶ್ ಅವರು ಕಾಂಗ್ರೆಸ್ನ ಅನಿತಾ ವಿರುದ್ಧ 894 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. 18 ರಲ್ಲಿ ಕಾಂಗ್ರೆಸ್ನ ಮುಜಿದ ಖಾನಂ ಅವರು ಬಿಜೆಪಿಯ ಎಸ್. ಮಂಜುಳ ವೇದಮೂರ್ತಿ ವಿರುದ್ಧ 718 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 19 ರಲ್ಲಿ ಜೆಡಿಎಸ್ನ ಟಿ.ಎಚ್. ಬಾಲಕೃಷ್ಣ ಅವರು ಕಾಂಗ್ರೆಸ್ನ ಕೆ. ರಘುರಾಮ್ ವಿರುದ್ಧ 146 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
20 ರಲ್ಲಿ ಜೆಡಿಎಸ್ನ ಟಿ.ಸಿ. ಹನುಮಂತರಾಯಪ್ಪ ಅವರು ಕಾಂಗ್ರೆಸ್ನ ಸಿ.ವಿ. ಯೋಗೇಂದ್ರಕುಮಾರ್ ವಿರುದ್ಧ 716 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 21ರಲ್ಲಿ ಜೆಡಿಎಸ್ನ ಲಲಿತಾ ಅವರು ಕೆಜೆಪಿಯ ಸರೋಜಮ್ಮ ವಿರುದ್ಧ 1208 ಮತಗಳಿಂದ ಗೆಲುವು ಸಾಧಿಸಿದ್ದಾರೆ. 22 ರಲ್ಲಿ ಜೆಡಿಎಸ್ ನ ರವಿಕುಮಾರ್ ಅವರು ಕಾಂಗ್ರೆಸ್ನ ನಾರಾಯಣಗೌಡ ವಿರುದ್ಧ 316 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
23 ರಲ್ಲಿ ಜೆಡಿಎಸ್ನ ಹೆಚ್. ಮರಿಗಂಗಯ್ಯ ಅವರು ಬಿಜೆಪಿಯ ಎಸ್.ಎಚ್. ಜಗದೀಶ್ ವಿರುದ್ಧ 764 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 24 ರಲ್ಲಿ ಪಕ್ಷೇತರ ಅಭ್ಯರ್ಥಿ ಫರ್ಜಾನ್ ಖಾನಂ ಅವರು ಕಾಂಗ್ರೆಸ್ ನ ಮುಜೀಬ್ ಉನ್ನೀಸಾ ಅವರು 6 ಮತಗಳ ಅಂತರದಿಂದ ಜಯದಾಖಲಿಸಿದ್ದಾರೆ. 25 ರಲ್ಲಿ ಕೆಜೆಪಿಯ ವಿಜಯ ರುದ್ರೇಶ್ ಅವರು ಬಿಜೆಪಿಯ ಕೆ.ಎಸ್. ಮಂಜುಳ ವಿರುದ್ಧ 84 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 26 ರಲ್ಲಿ ಕೆಜೆಪಿಯ ಮಂಜುಳ ಅವರು ಕಾಂಗ್ರೆಸ್ನ ನರಸಮ್ಮ ವಿರುದ್ಧ 102 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. 27 ರಲ್ಲಿ ಜೆಡಿಎಸ್ನ ಎಂ.ಎಚ್. ಜಯಲಕ್ಷ್ಮೀ ಅವರು ಕೆಜೆಪಿಯ ರಾಧ ಮುನಿಸ್ವಾಮಿ ಗೌಡ ವಿರುದ್ಧ 441 ಮತಗಳದಿಂದ ಗೆಲುವು ದಾಖಲಿಸಿದ್ದಾರೆ. 28 ರಲ್ಲಿ ಜೆಡಿಎಸ್ನ ಎಂ.ಆರ್. ಜಯಲಕ್ಷ್ಮೀ ಅವರು ಕಾಂಗ್ರೆಸ್ನ ಹನುಮಕ್ಕ ವಿರುದ್ಧ 509 ಮತಗಳದಿಂದ ಗೆಲುವು ಸಾಧಿಸಿದ್ದಾರೆ.
29 ರಲ್ಲಿ ಕಾಂಗ್ರೆಸ್ನ ಯೂಸಫ್ ಖಾನ್ ಅವರು ಪಕ್ಷೇತರ ಅಭ್ಯರ್ಥಿ ಮಹಮದ್ ಇಸ್ಮಾಯಿಲ್ ವಿರುದ್ಧ 260 ಮತಗಳಿಂದ ಗೆಲುವು ಸಾಧಿಸಿದ್ದಾರೆ. 30 ರಲ್ಲಿ ಕಾಂಗ್ರೆಸ್ನ ನಾಗರಾಜರಾವ್ ಅವರು ಪಕ್ಷೇತರ ಅಭ್ಯರ್ಥಿ ಉದಯಕುಮಾರ್ ವಿರುದ್ಧ 44 ಮತಗಳಿಂದ ಗೆಲುವು ದಾಖಲಿಸಿದ್ದಾರೆ. 31 ರಲ್ಲಿ ಜೆಡಿಎಸ್ನ ಜಯಮ್ಮ ಅವರು ಕಾಂಗ್ರೆಸ್ನ ಗೀತಾ ನಾಗೇಶ್ ವಿರುದ್ಧ 522 ಮತಗಳಿಂದ ಜಯ ದಾಖಲಿಸಿದ್ದಾರೆ.
32 ರಲ್ಲಿ ಬಿಜೆಪಿಯ ಡೆಲ್ಟ ರವಿಕುಮಾರ್ ಅವರು ಕೆಜೆಪಿಯ ಬಿ.ಕೆ. ಗೋಪಾಲಯ್ಯ ವಿರುದ್ಧ 219 ಮತಗಳಿಂದ ಜಯಸಾಧಿಸಿದ್ದಾರೆ. 33 ರಲ್ಲಿ ಕಾಂಗ್ರೆಸ್ನ ಧನಲಕ್ಷ್ಮೀ ರವಿ ಅವರು ಪಕ್ಷೇತರ ಅಭ್ಯರ್ಥಿ ಲಕ್ಷ್ಮೀ ವಿರುದ್ಧ 2015 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. 34 ರಲ್ಲಿ ಕಾಂಗ್ರೆಸ್ನ ಯಶೋದಮ್ಮ ಅವರು ಕೆಜೆಪಿಯ ಭಾಗ್ಯಶ್ರೀ ವಿರುದ್ಧ 628 ಮತಗಳಿಂದ ಗೆಲುವು ದಾಖಲಿಸಿದ್ದಾರೆ. 35 ವಾರ್ಡ್ನಲ್ಲಿ ಜೆಡಿಎಸ್ ನ ಜಿ.ಎಚ್. ಲೋಕೇಶ್ ಅವರು ಕೆಜೆಪಿಯ ನರಸಿಂಹಮೂರ್ತಿ ವಿರುದ್ಧ 97 ಮತಗಳಿಂದ ಗೆಲುವು ಸಾಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

