ಇಂದು ತಾಲೂಕು ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ ್ಣ ತಿಪಟೂರು ್ಣ ಮಾ.12
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 13 ರಂದು ಮಧ್ಯಾಹ್ನ 12.30ಕ್ಕೆ ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಉದ್ಘಾಟನೆಯಾಗಲಿದ್ದು, 14ರಂದು ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.
ನಟರಾಜ್ ಹೊನ್ನವಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಹಂಪಿ ವಿವಿ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಉದ್ಘಾಟನೆ ನೆರವೇರಿಸುವರು. ಗ್ರಾಮ ಕಥನಗಳು- ಹಾಗೂ ವಿವಿಧ ಗೋಷ್ಠಿಗಳನ್ನು ಡಾ.ಬಂಜಗೆರೆ ಜಯಪ್ರಕಾಶ್ ನೆರವೇರಿಸಲಿದ್ದಾರೆ. ಲೇಖಕ ಡಾ.ನಟರಾಜ್ ಹುಳಿಯಾರ್ ಆಶಯ ನುಡಿಗಳನ್ನಾಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ಪ್ರಾಸ್ತಾವಿಕ ನುಡಿ ಮತ್ತು ತಾಲೂಕು ಅಧ್ಯಕ್ಷ ಉಜ್ಜಜ್ಜಿ ರಾಜಣ್ಣ ಪರಿಚಯ ಭಾಷಣ ಮಾಡಲಿದ್ದಾರೆ. ಉಪವಿಭಾಗಾಧಿಕಾರಿ ಶಿಲ್ಪಾ, ಡಿವೈಎಸ್ಪಿ ಕೆ.ವಿಕೆ.ರೆಡ್ಡಿ, ಇ.ಒ.ಷಡಾಕ್ಷರಮೂರ್ತಿ, ಪೌರಾಯುಕ್ತ ಹೆಚ್.ಎಸ್.ಚಂದ್ರಶೇಖರಯ್ಯ, ಬಿಇಒ ಮನಮೋಹನ್ ಮತ್ತಿತರರು ಭಾಗವಹಿಸಲಿದ್ದಾರೆ.
ಮೊದಲ ದಿನದ ವಿಚಾರಗೋಷ್ಠಿ ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆಯಲಿದ್ದು, ಭಾರತೀಯ ಗ್ರಾಮೀಣ ಸಮಾಜ, ತಾತ್ವಿಕ ಗ್ರಹಿಕೆ ಎಂಬ ವಿಷಯದ ಬಗ್ಗೆ ಚಿಂತಕರಾದ ಪ್ರೊ.ಎಸ್.ಸಿ. ಸಿದ್ದರಾಮಯ್ಯ, ಡಿ.ಎಸ್.ನಾಗಭೂಷಣ್, ಡಾ.ಹೆಚ್.ಎಸ್.ಅನುಪಮಾ, ಜಿ.ತಿಪ್ಪೇಸ್ವಾಮಿ ಮತ್ತಿತರರು ಉಪನ್ಯಾಸ ನೀಡಲಿದ್ದಾರೆ. ಸಂಜೆ 4.30ರಿಂದ 7.30ರವರೆಗೆ ವಿಚಾರ ಗೋಷ್ಠಿ ಹಮ್ಮಿಕೊಂಡಿದ್ದು, ಸಾಹಿತ್ಯ ಮತ್ತು ಸಾಂಸ್ಕೃತಿಕ ನೋಟಗಳು ಎಂಬ ವಿಷಯದ ಬಗ್ಗೆ ಕಲಾವಿದರಾದ ಕೆ.ಟಿ.ಶಿವಪ್ರಸಾದ್, ಡಾ. ನಟರಾಜ್ ಬೂದಾಳು, ಎಲ್.ಎನ್.ಮುಕುಂದ ರಾಜ್, ಪಿಚ್ಚಳ್ಳಿ ಶ್ರೀನಿವಾಸ್ ಮತ್ತಿತರರು ಉಪನ್ಯಾಸ ನೀಡಲಿದ್ದಾರೆ. 2ನೇ ದಿನದ ವಿಚಾರ ಗೋಷ್ಠಿಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದ್ದು 'ಜನಪ್ರಿಯ ಸಂಸ್ಕೃತಿಗಳಲ್ಲಿ ಗ್ರಾಮ ಸಮಾಜ ಎಂಬ ವಿಷಯದ ಬಗ್ಗೆ ಡಾ.ಕೆ.ಪುಟ್ಟಸ್ವಾಮಿ, ಜಿ.ಎನ್.ಮೋಹನ್, ಜಿ.ಶಿವನಂಜಯ್ಯ ಬಾಳೇಕಾಯಿ ಮತ್ತಿತರರು ಮಾತನಾಡಲಿದ್ದಾರೆ.
11.30 ರಿಂದ 1.30ರವರೆಗೆ ಗ್ರಾಮೀಣ ಆರ್ಥಿಕ ಮತ್ತು ಆಧುನಿಕ ಸಮಾಜ ಹಿನ್ನೋಟ-ಮುನ್ನೋಟ ಹಾಗೂ ದಲಿತ ರೈತ ಹೋರಾಟದ ದಿಕ್ಕುಗಳು ಎಂದು ವಿಷಯದ ಬಗ್ಗೆ ಸಮಾಜ ವಿಜ್ಞಾನಿ ಡಾ.ಎಚ್.ಡಿ.ಪ್ರಶಾಂತ್, ಚಿಂತಕ ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಲೇಖಕ ಡಾ.ಸಿದ್ದಗಂಗಯ್ಯ ಹೊಲತಾಳ್ ಮತ್ತಿತರರು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 4ರಿಂದ 6ರವರೆಗೆ ಕವಿಗೋಷ್ಠಿ ಹಮ್ಮಿಕೊಂಡಿದ್ದು,ಕೆ.ಸಿದ್ದಯ್ಯ,ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಮತ್ತಿತರರು ಭಾಗವಹಿಸಲಿದ್ದಾರೆ.
ಸಂಜೆ 6ಕ್ಕೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದ್ದು, ಅಧ್ಯಕ್ಷತೆ ನಟರಾಜ್ ಹೊನ್ನವಳ್ಳಿ ವಹಿಸಲಿದ್ದು, ರಂಗ ಸಂಘಟಕ ಪ್ರಸನ್ನ, ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡ ಸೇರಿದಂತೆ ಕಸಾಪದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

