22 ರಿಂದ ಕಾರೇಹಳ್ಳಿ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಹುಳಿಯಾರು: ಹೋಬಳಿ ಕಾರೇಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ದನಗಳ ಜಾತ್ರೆ ಮಾ.22ರ ಶುಕ್ರವಾರದಿಂದ ಏ.1ರ ಸೋಮವಾರದ ವರೆಗೆ ಒಟ್ಟು 11 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಮಾ.22ರ ಬೆಳಿಗ್ಗೆ ಸ್ವಾಮಿಗೆ ಕಂಕಣಧಾರಣೆ, ಅಂಕುರಾರ್ಪಣೆ, ಧ್ವಜಾರೋಹಣ, ಉಯ್ಯಾಲೋತ್ಸವ,ದೀಪಾಲಂಕಾರ ಸೇವೆ, ತಾ.23ರ ಶನಿವಾರ ಗಾಣಧಾಳು ಗ್ರಾಮಸ್ಥರಿಂದ ಗಜಾರೋಹಣ, ಅನ್ನಸಂತರ್ಪಣೆ, ತಾ.24ರ ಭಾನುವಾರ ಗರುಡವಾಹನೋತ್ಸವ, ತಾ.25ರ ಸೋಮವಾರ ಮಧ್ಯಾಹ್ನ 12.30 ರಿಂದ 1.30 ರವರೆಗಿನ ಮಿಥುನ ಲಗ್ನದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ನಡೆದು, ಅನ್ನಸಂತರ್ಪಣೆ ನಡೆಯಲಿದೆ. ತಾ.26ರ ಮಂಗಳವಾರ ಅಡ್ಡಪಲ್ಲಕ್ಕಿ ಉತ್ಸವ, ತಾ.27ರ ಬುಧವಾರ ಮಂಗಳಸ್ನಾನ, ಅದೇ ದಿನ ರಾತ್ರಿ 8ಕ್ಕೆ ಶಯನೋತ್ಸವ, ತಾ.28ರ ಗುರುವಾರ ಸರ್ಪವಾಹನೋತ್ಸವ, ತಾ.29ರ ಶುಕ್ರವಾರ ಚಂದ್ರಮಂಡಲೋತ್ಸವ, ತಾ.30ರ ಶನಿವಾರ ಪುಷ್ಪವಾಹನೋತ್ಸವ, ತಾ.31ರ ಭಾನುವಾರ ಸೂರ್ಯಮಂಡಲೋತ್ಸವ ಹಾಗೂ ತಾ.ಏ.1ರಂದು ತೆರೆಬೀಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

