ತುಮಕೂರು

ಅಕ್ರಮವಾಗಿ ಹುಣಸೆ ಹಣ್ಣು ಸಾಗಿಸುತ್ತಿದ್ದ ಲಾರಿ ವಶ, ದಂಡ

Published On :

ಪಾವಗಡ: ಆಂಧ್ರದಿಂದ ಹಿಂದೂ ಪುರ ಮಾರುಕಟ್ಟೆಗೆ ಅಕ್ರಮವಾಗಿ ಲಕ್ಷಾಂತರ ರು. ಹುಣಿಸೇಹಣ್ಣು ತುಂಬಿಸಿಕೊಂಡು ಹೋಗುತ್ತಿದ್ದ 2 ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸಿ ದಂಡ ವಿಧಿಸಿದ ಘಟನೆ ಮಂಗಳವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ನಡೆದಿದೆ.
ಆಂಧ್ರದಿಂದ ರೈತರೊಬ್ಬರು 2 ಲಾರಿಗಳಲ್ಲಿ ಹುಣಿಸೇಹಣ್ಣು ತುಂಬಿಸಿಕೊಂಡು ಹಿಂದೂಪುರ ಮಾರುಕಟ್ಟೆಗೆ ಪಾವಗಡ ಮಾರ್ಗವಾಗಿ ಸಾಗಿಸುತ್ತಿರುವಾಗ ಎಪಿಎಂಸಿ ಮಾರುಕಟ್ಟೆ ಬಳಿ ಬರುತ್ತಿದ್ದಂತೆ ಆ ಲಾರಿಗಳನ್ನು ಹಿಡಿದ ಎಪಿಎಂಸಿ ಕಾರ್ಯದರ್ಶಿ ಪರಿಶೀಲಿಸುವ  ಮೂಲಕ ಎಪಿಎಂಸಿ ರಶೀದಿ ಹಾಕಿಸದೇ ಅಕ್ರಮವಾಗಿ ಸಾಗಿಸುವುದು ಕಾನೂನು ಬಾಹಿರವೆಂದು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
ಮಣ್ಣಿನ ಗುಡ್ಡೆ ಬಿದ್ದ ವ್ಯಕ್ತಿ ಸಾವು
ಪಾವಗಡ: ಟ್ರ್ಯಾಕ್ಟರ್‌ಗೆ ಮಣ್ಣು ತುಂಬುತ್ತಿರುವಾಗ ಆಕಸ್ಮತ್ ಮಣ್ಣಿನ ಗುಡ್ಡೆ ಬಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪಾವಗಡ ಸಮೀಪ ಕೊಡಮಡಗು ಗ್ರಾಮದಲ್ಲಿ ಮಂಗಳವಾರ ಸಂಜೆ  ನಡೆದಿದೆ.  
ಮಣ್ಣಿನ ಗುಡ್ಡೆ ಬಿದ್ದು ಸಾವನ್ನಪ್ಪಿದ ವ್ಯಕ್ತಿ ಹನುಮಂತರಾಯಪ್ಪ (46)ಎಂಬುವರು. ಅವರು ರೈತರೊಬ್ಬರ ಜಮೀನಿಗೆ ಟ್ರ್ಯಾಕ್ಟರ್‌ನಿಂದ ಮಣ್ಣು ಹೊಡೆಯಲು ಮಂಗಳವಾರ ಕೂಲಿಗೆ ಹೋಗಿದ್ದು ಟ್ರ್ಯಾಕ್ಟರ್‌ಗೆ ಮಣ್ಣು ತುಂಬುತ್ತಿದ್ದಾಗ ಆತನ ಮೇಲೆ ಅಕಸ್ಮಾತ್ ಮಣ್ಣು ಗುಡ್ಡೆ ಕುಸಿದು ಬಿದ್ದಿದೆ. ಕೂಡಲೇ ತುರ್ತು ವಾಹನದಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ಕೊಡಿಸಿದರೂ ಪ್ರಯೋಜನವಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.