ಕಗ್ಗೆರೆ ಕೆರೆಯಲ್ಲಿ ಕಾಡಾನೆಗಳು ಬೀಡು
ಕ.ಪ್ರ.ವಾರ್ತೆ ್ಣ ಗುಬ್ಬಿ ್ಣ ಮಾ. 19
ತಾಲೂಕಿನ ಕಗ್ಗೆರೆ ಕೆರೆಯಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ.
ಕಳೆದ ಎರಡು, ಮೂರು ದಿನದಿಂದ ಇಲ್ಲಿಯೇ ಓಡಾಡುತ್ತಿರುವ ಕಾಡಾನೆಗಳು ಪಟ್ಟಣ ಪ್ರವೇಶಿಸಿ ಸಿದ್ದರಾಜು ಎಂಬ ರೈತರ ರಾಗಿ ಹೊಲ ಹಾಳು ಮಾಡಿವೆ. ಆನೆಗಳು ಪಟ್ಟಣದಲ್ಲಿ ಯಾವುದೇ ದಾಂಧಲೆ ನಡೆಸದೆ ಮುಂದೆ ಸಾಗಿವೆ. ಮಾರ್ಗ ಮಧ್ಯ ರೈತರ ಬೆಳೆಗಳನ್ನು ತುಳಿಯತ್ತಲೇ ಸಾಗಿದ್ದು, ಕಗ್ಗೆರೆ ಕೆರೆಯಲ್ಲಿನ ಗಣೇಶ ಕಡ್ಡಿಯ ನಡುವೆ ವಾಸ್ತವ್ಯ ಹೂಡಿವೆ.
ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕರುಣಾಕರ್, ಎಸಿಎಫ್ ರಾಜಣ್ಣ, ಆರ್ಎಫ್ಓ ಕೆ.ಹರೀಶ್ ಭೇಟಿ ನೀಡಿ ಆನೆಗಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ವನಪಾಲಕರು ಮತ್ತು ಗಾರ್ಡ್ಗಳು ಕಳೆದೆರಡು ದಿನಗಳಿಂದ ಕಾಡಾನೆಗಳನ್ನು ಹಿಂಬಾಲಿಸುತ್ತಾ ಮಾರ್ಗ ಮಧ್ಯ ಬರುವ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುತ್ತಾ ಕಾರ್ಯೋನ್ಮುಖರಾಗಿದ್ದಾರೆ. ರೈತರು ತಮ್ಮ ತೋಟದತ್ತ ಆನೆಗಳು ಬರಬಹುದೆಂಬ ಹೆದರಿಕೆಯಿಂದ ಬೆಂಕಿ ಹಚ್ಚುವ ಮೂಲಕ ಆನೆಗಳನ್ನು ದಿಕ್ಕನ್ನೇ ಬದಲಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

