ಕಾಂಗ್ರೆಸ್ ಬೆಂಬಲಿಸಿ: ವೆಂಕಟರಮಣಪ್ಪ ಮನವಿ
ಪಾವಗಡ: ಜನಪರ ಕಾರ್ಯಕ್ರಮಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಶಾಸಕ ವೆಂಕಟರಮಣಪ್ಪ ಕಾರ್ಯಕರ್ತರನ್ನು ಕರೆ ನೀಡಿದರು. ಅವರು ಸೋಮವಾರ ಕನಿಕಲಬಂಡೆ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಡವ, ನಿರ್ಗತಿಕ ಹಾಗೂ ಅಂಗವಿಕಲ ರೈತರು ಸೇರಿದಂತೆ ಈಗಾಗಲೇ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೊಂಡ ಕೋಟ್ಯಂತರ ರು.ಗಳ ಜನಪರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಜನತೆ ಕಾಂಗ್ರೆಸ್ ಪರ ಬೆಂಬಲ ವ್ಯಕ್ತಪಡಿಸುತ್ತಿದ್ದು ದಿನೇ ದಿನೇ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ತಾಲೂಕಿನಲ್ಲಿ ಕಾಂಗ್ರೆಸ್ ಭದ್ರ ಕೋಟೆಯಾಗಲಿದೆ ಎಂದ ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಶಾಸಕ ವೆಂಕಟರಮಣಪ್ಪ ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಹಾಗೂ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೈಲಾರ ರೆಡ್ಡಿ ಸಮ್ಮುಖದಲ್ಲಿ ಕನಿಕಲಬಂಡೆ ಗ್ರಾಮದ ಮುಖಂಡ ಹನುಮಂತರೆಡ್ಡಿ, ಮಂಜುನಾಥ್, ತಿಮ್ಮಪ್ಪ, ಅನಿಲ್ಕುಮಾರ್ (ಉಪ್ಪಾರ್) ಕೃಷ್ಣಪ್ಪ, ನಾರಾಯಣಪ್ಪ, ಸನ್ನೇಯಪ್ಪ ನರಸಿಂಹಲು (ಕಲಿಕಟ್ಲು), ಕಮ್ಮ ಜನಾಂಗದ ನರಸಿಂಹಮೂರ್ತಿ, ಚಂದ್ರಪ್ಪ, ಅಂಜಪ್ಪ, ಕುರುಬ ಜನಾಂಗದ ನಿಂಗಯ್ಯ ಹಾಗೂ ಗಂಗಸಾಗರ ಗ್ರಾಮದ ಮುಖಂಡರಾದ ಲಿಂಗಮಯ್ಯ,ನಾಗಭೂಷಣ್, ಜಯಸಿಂಹ, ಜಲ್ಲಿಪಲ್ಲಿ ಅಂಜಯ್ಯ, ಜಿ.ಎ. ಹನುಮಂತರೆಡ್ಡಿ, ಅಂಜಯ್ಯ, ಬ್ರಹ್ಮಚಾರಿ, ಸೂರಪ್ಪ ಸೇರಿದಂತೆ ಸುಮಾರು 150 ಮಂದಿ ಕಾರ್ಯಕರ್ತರು ಜೆಡಿಎಸ್ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದರು.
ನಾಳೆ ಅತ್ತಿಗೆ ಹೆತ್ತಮ್ಮ ಸಾಮಾಜಿಕ ನಾಟಕ
ಹುಳಿಯಾರು: ಸಮೀಪದ ಹಂದನಕೆರೆ ಹೋಬಳಿ ನಿರುವಗಲ್ ಯಾದವರಹಟ್ಟಿಯ ಹುಲ್ಕಲ್ಬೆಟ್ಟದ ಶ್ರೀದುರ್ಗಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಕೃಷ್ಣ ಕೃಪಾಪೋಷಿತ ನಾಟಕ ಮಂಡಳಿಯವರು ತಾ.21 ರ ಗುರುವಾರ ರಾತ್ರಿ 9 ಗಂಟೆಗೆ ಅತ್ತಿಗೆ ಹೆತ್ತಮ್ಮ ಅಥವಾ ಸೇಡಿನ ದುರಂತ ಎಂಬ ಸಾಮಾಜಿಕ ನಾಟಕವನ್ನು ಅಭಿನಯಿಸಲಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರಮದಾನ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಮಾದಿಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ.ಶ್ರೀನಿವಾಸ್ ಉದ್ಘಾಟಿಸಿ ಸದಸ್ಯರಿಗೆ ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

