ತುಮಕೂರು

ಕದರಿ ನರಸಿಂಹಸ್ವಾಮಿ ರಥೋತ್ಸವ

Published On :

ಶಿರಾ: ತಾಲೂಕಿನ ಕದರಿ ನರಸಿಂಹಸ್ವಾಮಿ,  ಲಕ್ಕದಾಸಗೊಂಡ ಸ್ವಾಮಿ ಹಾಗೂ ಈರಮುದ್ದಣ್ಣ ಸ್ವಾಮಿ ದೇವರ  ಜಾತ್ರೆ ಮತ್ತು ರಥೋತ್ಸವವು ಹೊನ್ನಗೊಂಡನಹಳ್ಳಿ ಗೊಲ್ಲರಹಟ್ಟಿಯಲ್ಲಿ ಮಾ. 22 ರಿಂದ 30 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಮಾ. 22 ರಂದು ರಾತ್ರಿ 9 ಗಂಟೆಗೆ ಕಳಸ, 23 ಬೆಳಿಗ್ಗೆ 6 ಗಂಟೆಗೆ ಗಂಗಾಸ್ನಾನ, 24 ರಂದು ನೂರೊಂದು ಎಡೆ ಪೂಜೆ, ಮಾ. 26 ರಂದು ರಾತ್ರಿ 10 ಗಂಟೆಗೆ ಗೆಡ್ಡೆತೇರು, ಮಾ. 27 ರಂದು ದೇವರು ಹೊರಡುವುದು, ಮಾ. 28 ರಂದು ಸಂಜೆ 3 ಗಂಟೆಗೆ ದೂಪದ ಸೇವೆ, ಮಾ. 29 ರಂದು ಮುಂಜಾನೆ ಕುರಿ ಸುತ್ತುವುದಕ್ಕೆ ದೇವರು ಹೊರಡುವುದು, 30 ರಂದು ರಾತ್ರಿ 9 ಗಂಟೆಗೆ ಮರಿ ಪೂಜೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.