ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ
ಕ.ಪ್ರ. ವಾರ್ತೆ ್ಣ ಪಾವಗಡ ್ಣ ಮಾ.21
ಈಗಾಗಲೇ ತಾಲೂಕಿನಾದ್ಯಂತ 403 ಮಂದಿ ಜೀತದಾಳುಗಳನ್ನು ಗುರುತಿಸಿದ್ದು 3 ವರ್ಷ ಕಳೆದರೂ ಜೀತ ದಾಳುಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಜೀತ ವಿಮುಕ್ತಿ ಕರ್ನಾಟಕ ಶಾಖೆಯ ಸಂಚಾಲಕ ಮಂಗಳವಾಡ ಟಿ.ಹನುಮಂತರಾಯಪ್ಪ ಆರೋಪಿಸಿದರು.
ಜೀತ ಮಿಮುಕ್ತಿ ಕರ್ನಾಟಕ ತಾಲೂಕು ಶಾಖೆ ಹಾಗೂ ಕಲಾವಿದರ ಒಕ್ಕೂಟದ ವತಿಯಿಂದ ಜೀತ ವಿಮುಕ್ತರ ಸಮಗ್ರ ಪುನರ್ವಸತಿಗೆ ಒತ್ತಾಯಿಸಿ ಗುರುವಾರ ತಾಲೂಕು ಕಚೇರಿಯ ಬಳಿ ಹಮ್ಮಿಕೊಂಡಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.ತಾಲೂಕಿನಿಂದ ಆಗಮಿಸಿದ್ದ ನೂರಾರು ಮಂದಿ ಜೀತದಾಳುಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಅಧಿಕಾರಿಗಳ ನಿರ್ಲಕ್ಷ್ಯದಿಂದ 36 ವರ್ಷ ಕಳೆದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿದ್ದು 2006-07ಸಾಲಿಗೆ ತಾಲೂಕಿನಾದ್ಯಂತ ಸುಮಾರು 403 ಮಂದಿ ಜೀತದಾಳುಗಳನ್ನು ಗುರುತಿಸಲಾಗಿದೆ ಎಂದ ಅವರು ಜೀತದಾಳುಗಳನ್ನು ಗುರುತಿಸಿ 3ವರ್ಷ ಕಳೆದರೂ ಅವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಕಿಡಿಕಾರಿದರು.
ಗುರುತಿನ ಚೀಟಿ ವಿತರಿಸಿ: ಜೀತದಾಳುಗಳಿಗೆ ಕೂಡಲೇ ಗುರುತಿನ ಚೀಟಿ ವಿತರಿಸಬೇಕು. ಸರ್ಕಾರದಿಂದ ಈಗಾಗಲೇ ಗುರುತಿಸಲ್ಪಟ್ಟ ಜೀತದಾಳುಗಳಿಗೆ ಒಂದು ವಾರದೊಳಗೆ ಪರಿಹಾರ ಕಲ್ಪಿಸಬೇಕು. 2001-02 ರಲ್ಲಿ ಗುರುತಿಸಿದ ಜೀತ ವಿಮುಕ್ತರಿಗೆ ಸಮಗ್ರ ಪುನರ್ವಸತಿ ಹಾಗೂ ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಜೀತದಾಳುಗಳಿಗೆ ಸೌಲಭ್ಯ ಕಲ್ಪಿಸಬೇಕು. ಡಾ. ಬಿ.ಆರ್.ಆಂಬೇಡ್ಕರ್ ನಿಗಮದಿಂದ ಜೀತ ವಿಮುಕ್ತರಿಗೆ 2ಎಕರೆ ಭೂಮಿ ಉಚಿತವಾಗಿ ಹಂಚಿಕೆ ಮಾಡಿ ಸಾಮೂಹಿಕ ವ್ಯವಸಾಯಕ್ಕೆ ಉತ್ತೇಜನ ನೀಡಬೇಕು. ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುವ ವ್ಯಾಪಾರ ಮಾಡುವ ಚಿಂದಿ ಆಯುವ 16ವರ್ಷದೊಳಗಿನ ಮಕ್ಕಳನ್ನು ಗುರುತಿಸಿ ವಸತಿ ಶಾಲೆಗೆ ಸೇರಿಸುವ ಮೂಲಕ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಖಾತ್ರಿ ಯೋಜನೆಯಲ್ಲಿ 100 ದಿನ ಕೆಲಸ ಸೇರಿದಂತೆ ಜೀತ ವಿಮುಕ್ತರಿಗೆ ವಿವಿಧ ರೀತಿಯ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷ ಕಿರ್ಲಾಲಹಳ್ಳಿ ನಾಗರಾಜ್, ಹೋಬಳಿ ಸಂಚಾಲಕರಾದ ಗಂಗಾಧರ್, ಡಿ.ಹನುಮಂತರಾಯಪ್ಪ, ವೆಂಕಟರಾಮಪ್ಪ ಮುಂತಾದವರು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

