ಹಳೆ ಬೇರು, ಹೊಸಚಿಗುರು ಕೂಡಿದಾಗ ನೆಮ್ಮದಿ ಜೀವನ ಸಾಧ್ಯ'
ಕ.ಪ್ರ.ವಾರ್ತೆ ಕುಣಿಗಲ್ ಮಾ 24
ಹಳೆ ಬೇರು, ಹೊಸಚಿಗುರು ಕೂಡಿದಾಗ ಜೀವನ ಸೊಗಸೆಂಬಂತೆ, ಹಳೆ ಬೇರಾದ ಧರ್ಮ, ಹೊಸ ಚಿಗುರಾದ ಆಧುನಿಕ ವಿಜ್ಞಾನ ಎರಡೂ ಬೆರೆತು, ಧರ್ಮಾಧಾರಿತ ಆಧುನಿಕ ವಿಜ್ಞಾನಗಳ ಸಹಾಯದಿಂದ ಮನುಷ್ಯ ನೆಮ್ಮದಿಯುತ ಜೀವನ ಸಾಗಿಸಬಹುದಾಗಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಭಾನುವಾರ, ತಾಲೂಕಿನ ಸೊಂದಲಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಾಲಭೈರವೇಶ್ವರ ಸ್ವಾಮಿ ನೂತನ ದೇವಾಲಯದ ಉದ್ಘಾಟನೆ ನೆರವೇರಿಸಿದ ನಂತರ ಧಾರ್ಮಿಕ ಸಭೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ವಿಜ್ಞಾನ ಎಷ್ಟೆ ಮುಂದುವರೆದಿದ್ದರೂ, ಹೃದಯಲ್ಲಾಗುವ ಭಾವನಾತ್ಮಕ ತುಮುಲಗಳಿಗೆ, ಗೊಂದಲಗಳಿಗೆ ಸಾಂತ್ವನ ನೀಡಲು ಸಾಧ್ಯವಿಲ್ಲ. ಆದರೆ, ಧರ್ಮದ ನೆಲೆಗಟ್ಟಿನಲ್ಲಿ ಧಾರ್ಮಿಕ ಭಾವನೆಗಳ ಶ್ರದ್ಧಾಭಕ್ತಿ ಆಚರಣೆಯಿಂದ ಭಾವನಾತ್ಮಕ ಗೊಂದಲ, ತುಮುಲಗಳಿಗೆ ಸಾಂತ್ವನ ದೊರೆಯುತ್ತದೆ. ಧಾರ್ಮಿಕ ಭಾವನೆಗಳನ್ನು ಉದ್ದೀಪನಗೊಳಿಸುವ ಶಕ್ತಿ ದೇವಾಲಯಗಳಿಗಿವೆ, ಆದುದರಿಂದ ಭಾರತೀಯ ಸಂಸ್ಕೃತಿಗಳಲ್ಲಿ ದೇವಾಲಯಕ್ಕೆ ಹೆಚ್ಚಿನ ಮಹತ್ಯ ಇದೆ ಎಂದರು.
ಅಘಾದ ಶಕ್ತಿ: ಭಗವಂತ ಸೃಷ್ಟಿಸಿರುವ ಈ ಜಗತ್ತಿನ ಪ್ರತಿಯೊಂದು ಕಣದಲ್ಲೂ ಅಘಾದ ಶಕ್ತಿ ಇದೆ ಎಂದು, ಸಹಸ್ರಾರು ವರ್ಷಗಳ ಹಿಂದೆಯೆ ಭಾರತೀಯ ಪ್ರಾಚೀನ ಸಂಸ್ಕೃತಿ ವೇದಗಳ ಕಾಲದಲ್ಲೆ ಹೇಳಲಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ದೈವಕಣ ರಹಸ್ಯವನ್ನು ಭೇದಿಸಿದ ವಿಜ್ಞಾನಿಗಳು ಕಣದಲ್ಲೂ ಅಘಾದ ಶಕ್ತಿ ಇದೆ ಎಂದು ಹೇಳುತ್ತಿದ್ದಾರೆ. ಯಾವುದೇ ಪ್ರಯೋಗಗಳ ಸಹಾಯ ವಿಲ್ಲದೆಯೇ ವಿಜ್ಞಾನ ಇಂದು ಸಾಧಿಸಿರುವುದನ್ನು, ಭಾರತೀಯ ಪ್ರಾಚೀನ ಸಂಸ್ಕೃತಿಯ ವೇದಕಾಲದಲ್ಲೆ ಹೇಳಿರುವುದು ನೋಡಿದರೆ ನಮ್ಮ ಸಂಸ್ಕೃತಿಯ ಮಹತ್ವ ಎಂತಹದೆಂದು ತಿಳಿಯುತ್ತದೆ. ಕೇವಲ ನಶ್ವರವಾದ ಸಂಪತ್ತಿನ ಹಿಂದೆ ಧಾವಿಸಿ ಕ್ಷಣಿಕ ಸುಖಪಡೆಯದೆ, ಧಾರ್ಮಿಕ ಶ್ರದ್ಧೆ, ಆದ್ಯಾತ್ಮಿಕ ಚಿಂತನೆಗಳನ್ನು ಸದ್ಗುರುಗಳ ಮಾರ್ಗದರ್ಶನದಲ್ಲಿ ಸಾಧಿಸಿದಾಗ ಶಾಶ್ವತ ಸುಖ ಪಡೆದು ನೆಮ್ಮದಿಯುತ ಜೀವನ ಸಾಗಿಸಬಹುದೆಂದರು.
ಉಚಿತ ವಿದ್ಯಾಭ್ಯಾಸ ಅವಕಾಶ: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಶ್ರೀಮಠದ ವತಿಯಿಂದ ಉಚಿತವಾಗಿ ವಿದ್ಯಾಭ್ಯಾಸ ಅವಕಾಶಗಳನ್ನು ಕಲ್ಪಿಸಲಾಗುತ್ತಿದ್ದು, ಪ್ರಾಥಮಿಕ ಹಂತದ ವಿದ್ಯಾಭ್ಯಾಸದಿಂದ ಉನ್ನತ ಶಿಕ್ಷಣದವರೆಗೂ ಶ್ರೀ ಮಠ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಶಿಕ್ಷಣವಂತರಾಗುವ ಮೂಲಕ ಅಕ್ಷರಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.
ಮಾಜಿ ಸಚಿವ ಡಿ. ನಾಗರಾಜಯ್ಯ, ತಾಲೂಕಿನ ಬೋರೇಗೌಡನಪಾಳ್ಯದವರಾಗಿ ನವದೆಹಲಿಯ ಉಪ ಪೊಲೀಸ್ ಅಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಸುರೇಶ್, ತಾಲೂಕು ಚೈಲರ್ ಸಂಘದ ಅಧ್ಯಕ್ಷ ಶಿವಕುಮಾರ(ರಾಜು), ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಶ್ರೀನಿವಾಸ್, ಪೂರ್ಣಿಮಾ ನಾಗರಾಜ, ಗೋವಿಂದರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

