ಮುಂದಿನ ದಿನಗಳಲ್ಲಿ ಕಠಿಣ ಸ್ಥಿತಿಯಲ್ಲಿ ಕನ್ನಡ ಭಾಷೆ

Updated on: 

ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.30
ರಾಷ್ಟ್ರೀಯತೆ ಎಂಬ ಪರಿಕಲ್ಪನೆ ಬಂದದ್ದು ಬ್ರಿಟಿಷರಿಂದ. ಕನ್ನಡದ ಅನೇಕ ಕವಿಗಳು ಪಾಶ್ಚಾತ್ಯ ಶಿಕ್ಷಣ ಅಧ್ಯಯನ ಮಾಡಿ ಕನ್ನಡಕ್ಕೆ ಅನುವಾದಿಸಿ, ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ ಎಂದು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಎಲ್.ಎಂ. ವೆಂಕಟೇಶ್ ತಿಳಿಸಿದರು.
ಬಿ.ಎಂ.ಶ್ರೀ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ, ನಗರದ ಶ್ರೀ ಸಿದ್ದಗಂಗಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಆಧುನಿಕ ಕನ್ನಡ ಸಾಹಿತ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಧುನಿಕ ಸಾಹಿತ್ಯ ಎಂಬುದು ಎಲ್ಲಾ ಕಾಲದಲ್ಲಿಯೂ ಹೊಸತಾಗಿಯೇ ಇರುತ್ತದೆ ಬದಲಾವಣೆ ಎಂಬುದು ಮಾನವರಿಗೆ ಮಾತ್ರ ಸಾಹಿತ್ಯಕ್ಕೆ ಅಲ್ಲ ಎಂದರು.
ಕನ್ನಡ ವಿಭಾಗ ಮುಖ್ಯಸ್ಥೆ ದಾಕ್ಷಾಯಣಿ ಪ್ರಕಾಶ್ ಅವರು ತೌಲನಿಕ ಸಾಹಿತ್ಯ ಒಂದು ಚಿಂತನೆ ಎಂಬ ವಿಷಯದಡಿ ಮಾತನಾಡಿ ಸಾಹಿತ್ಯ ಎಂಬುದು ಜೀವದ ವಿಮರ್ಶೆ ಹಾಗೂ ಆಧುನಿಕ ಸಾಹಿತ್ಯ ವಿಮರ್ಶೆಯ ಮಾನದಂಡವಾಗಿದೆ. ಭಾಷೆ ಹಾಗೂ ದೇಶದ ಎಲ್ಲೆಗಟ್ಟನ್ನು ಮೀರಿ ಜಾಗತೀಕ ಸಾಹಿತ್ಯದ ತುಲನೆಯೇ ತೌಲನಿಕ ಸಾಹಿತ್ಯ ಎಂದರು.
ಸಿದ್ದಗಂಗಾ ಕಾಲೇಜಿನ ಪ್ರಾಂಶುಪಾಲ, ಬಿ.ಎಲ್. ವೈದ್ಯೇಶ್ವರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯು ಮಾತನಾಡಲು ಮಾತ್ರ ಸೀಮಿತವಾಗಿದ್ದು ಕನ್ನಡಕ್ಕೆ ಹೆಚ್ಚಿನ ಸ್ಥಾನಮಾನ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕಠಿಣ ಸ್ಥಿತಿಯಲ್ಲಿ ಕನ್ನಡ ಭಾಷೆ ಕಂಡುಬರಬಹುದು ಎಂದು ಬೇಸರಪಟ್ಟರು.
ವಿದ್ಯಾರ್ಥಿಗಳಿಗೆ ಸ್ವ-ರಚಿತ ಕವನ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ  ಪದ್ಮಜ.ವೈ.ಎಂ, ಮಂಗಳ, ಜಲಜಾ, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com