ಸೋಮ್ಲಾ ನಾಯಕ್ ರಾಜಿನಾಮೆ?

Updated on: 

ಪಾವಗಡ: ತಾಲೂಕು ಬಿಜೆಪಿ ಅಧ್ಯಕ್ಷ ಮಾಜಿ ಶಾಸಕ ಸೋಮ್ಲಾನಾಯಕ್ ಭಾನುವಾರ ಬಿಜೆಪಿಗೆ ರಾಜಿನಾಮೆ ಸಲ್ಲಿಸಲಿರುವುದಾಗಿ ಅವರ ಆಪ್ತ ವಲಯಗಳು ತಿಳಿಸಿವೆ.  ಸೋಮ್ಲಾನಾಯಕ್ ಜನತಾ ಪರಿವಾರದಿಂದ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅವರು ಶನಿವಾರ ಸಂಜೆ ತಮ್ಮ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿದಿದ್ದು ಭಾನುವಾರ ಸಂಬಂಧಪಟ್ಟವರಿಗೆ ರಾಜಿನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ದಿಢೀರ್ ದಾಳಿ: ಅಕ್ಕಿ, ಸೈಕಲ್ ವಶ
ಪಾವಗಡ: ಅಕ್ರಮವಾಗಿ ಕೂಡಿಟ್ಟಿದ್ದ 2 ಕ್ವಿಂಟಲ್ ಅಕ್ಕಿ, 50 ಕೆಜಿ ಬೇಳೆ ಹಾಗೂ 8 ಸೈಕಲ್‌ಗಳನ್ನು ಶನಿವಾರ ಅಧಿಕಾರಿಗಳು ವೈ.ಎನ್. ಹೊಸಕೋಟೆ ಆರ್‌ವಿಪಿ ಪ್ರೌಢಶಾಲೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ ಬಿಇಒ ನಾಗರಾಜ್ ಹಾಗೂ ಅಕ್ಷರ ದಾಸೋಹ ಸಹಾಯ ನಿರ್ದೇಶಕ ನಾಗರಾಜ್ ಕಳೆದ 3 ತಿಂಗಳಿಂದ ಇಡಲಾಗಿದ್ದ ಬಿಸಿಯೂಟದ ಅಕ್ಕಿ, ಬೇಳೆ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಸಂಗ್ರಹಿಸಿದ ವಿಷಯಕ್ಕೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯ ವೆಂಕಟರತ್ನಯ್ಯ ಎಂಬುವರನ್ನು ಸಹಾಯಕ ನಿರ್ದೇಶಕ ನಾಗರಾಜ್ ಸಾರ್ವಜನಿಕರ ಎದುರಿನಲ್ಲಿಯೇ ಪ್ರಶ್ನಿಸಿದಾಗ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಜಾರಿಕೊಂಡರು. ಮಾಧ್ಯಮದ ಪ್ರತಿನಿಧಿಗಳು ವಿವರ ಕೇಳಿದಾಗ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ನಿರಾಕರಿಸಿದರು.
ಕ್ರಿಕೆಟ್ ಪಂದ್ಯಾವಳಿ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಶ್ರೀಅಂಬೇಡ್ಕರ್ ಕ್ರಿಕೆಟ್  ಕಬ್ ವತಿಯಿಂದ ಏ.2ರ ಮಂಗಳವಾರ ಮತ್ತು ಏ.3ರ ಬುಧವಾರ ಎಂಪಿಎಸ್ ಶಾಲೆಯ ಹಿಂಭಾಗದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ  ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ. ಟೂರ್ನಿಯಲ್ಲಿ ಪ್ರಥಮ ಬಹುಮಾನ 5001ರು,ದ್ವಿತೀಯ ಬಹುಮಾನ 2501ರು, ತಾ.ಪಂ.ಸದಸ್ಯ ನವೀನ್ ಟೂರ್ನಿಯ ಉದ್ಘಾಟನೆ ನೆರವೇರಿಸಲಿದ್ದು, ಮಾಜಿ ಶಾಸಕ ಕೆ.ಎಸ್. ಕಿರಣ್‌ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಪೂರ್ಣಮ್ಮ, ಸದಸ್ಯರಾದ ಗೌಡ, ಕುಮಾರಯ್ಯ,ಬಸವರಾಜು, ಮೈಸ್ ಕಪೂಟರ್ಸ್‌ನ ಸಂತೋಷ್, ಬಾಬು, ಗುರುಮೆಡಿಕಲ್‌ನ ಅನಿಲ್, ಪಿಡಿಓ ಶಿವಕುಮಾರ್ ಅತಿಥಿಗಳಾಗಿ ಆಗಮಿಸುವರು. ಟೂರ್ನಿಗೆ 250 ರು. ಪ್ರವೇಶ ಶುಲ್ಕ ಹಾಗೂ ತಂಡದ ಎಲ್ಲಾ ಆಟಗಾರರಿಗೆ ಊಟದ ವ್ಯವಸ್ಥೆಯಿದ್ದು, ಹೆಚ್ಚಿನ ಮಾಹಿತಿಗಾಗಿ ರಂಗನಾಥ್ (9986253083), ಮನು (8747837338), ರಮೇಶ್(9632671276), ಮಲ್ಲೇಶ್ (9686645611) ಸಂಪರ್ಕಿಸಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com