ತುಮಕೂರು

ಕಳ್ಳರ, ಜೈಲು ಪಾಲಾದವರ ಪಕ್ಷವೇ ಕೆಜೆಪಿ

Published On :

ಕ.ಪ್ರ. ವಾರ್ತೆ   ತುರುವೇಕೆರೆ   ಮೇ 1
ಕೆ ಎಂದರೆ ಕಳ್ಳರ, ಜೆ ಎಂದರೆ ಜೈಲು ಪಾಲಾದವರ, ಪಿ ಎಂದರೆ ಪಾರ್ಟಿ. ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದು ತಮ್ಮ ಸ್ವಾರ್ಥ ಸಾಧನೆ ಮಾಡಕೊಂಡ ಮಹನೀಯರು ಮಾಡಿದ ದೇಶದ್ರೋಹದ ಕೆಲಸಕ್ಕೆ ತಕ್ಕಶಾಸ್ತಿ ಅನುಭವಿಸಿ ಜೈಲು ಸೇರಿದವರ ಪಕ್ಷ ಕೆಜೆಪಿ.
 ಹೀಗೆಂದು ಕೆಜೆಪಿ ಬಗ್ಗೆ ವ್ಯಂಗ್ಯವಾಡಿದವರು ಶಾಸಕ ಎಂ.ಟಿ.ಕೃಷ್ಣಪ್ಪ. ರಾಜ್ಯವನ್ನು ಲೂಟಿ ಮಾಡಿರುವವರಿಂದ ದೇಶಕ್ಕೆ ರಾಜ್ಯಕ್ಕೆ ಹಾನಿಯೇ ಹೊರೆತು ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಕ್ಷೇತ್ರದ ಜನರು ರೈತರ ಪರ ಚಿಂತಿಸುವ ಜೆಡಿಎಸ್ಗೇ ಮತ ನೀಡುವುದು ಅತಿ ಮುಖ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಪಾದಿಸಿದರು.
 ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸಯ್ಯನವರ ಸಂಘಟನೆ ಫಲವಾಗಿ ವಿವಿಧ ಪಕ್ಷಗಳಿಂದ  ಜೆಡಿಎಸ್ಗೆ ಸೇರ್ಪಡೆಗೊಂಡ ನೂರಾರು ಕಾರ್ಯಕರ್ತರನ್ನು ಬರಮಾಡಿಕೊಂಡ ಅವರು ರೈತರ ಪರ ಆಡಳಿತ ಮಾಡಿದ ಹೆಗ್ಗಳಿಕೆ ಇರುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಮಾತ್ರ. ಅವರುಗಳಿಂದ ಮಾತ್ರವೇ ರೈತರ ಅಭಿವೃಧ್ಧಿ ನಿರೀಕ್ಷಿಸಲು ಸಾಧ್ಯ ಎಂದು  ಎಂ.ಟಿ.ಕೃಷ್ಣಪ್ಪ ಹೇಳಿದರು.
ವಿಜಯ ಖಚಿತ: ಕೆಜೆಪಿಯವರು ಹಣವನ್ನು ನೀರಿನಂತೆ ಚೆಲ್ಲುತ್ತಾರೆ ಎಂಬ ಭಾವನೆಯಿಂದ ಹಲವಾರು ಮಂದಿ ಕೆಜೆಪಿ ಸೇರುತ್ತಿದ್ದಾರೆ. ಆದರೆ ಅವರಿಗೆ ಪಕ್ಷಕ್ಕೆ ಸೇರಿದ ನಂತರವೇ ಸತ್ಯ ಗೊತ್ತಾಗುತ್ತಿದೆ ಎಂದು ಕೃಷ್ಣಪ್ಪ ವ್ಯಂಗ್ಯವಾಡಿದರು. ಕ್ಷೇತ್ರದಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಅಲೆ ಎದ್ದಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ತಮಗೆ ವಿಜಯ ಖಚಿತ ಎಂದು ಹೇಳಿದರು.
ಕ್ಷೇತ್ರದ ಪ್ರತಿಯೊಂದು ಹೋಬಳಿಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಅಭಿವೃಧ್ಧಿ ಕಾಮಗಾರಿ ಮಾಡಿರುವುದೂ ಸಹ ಗೆಲವಿಗೆ ಕಾರಣವೆಂದು ಎಂ.ಟಿ.ಕೃಷ್ಣಪ್ಪ ಹೇಳಿದರು.
ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ: ನನಗೇಕೋ ಕಳೆದ ಹತ್ತು ವರ್ಷಗಳ ಹಿಂದೆ ಮಂಕು ಹಿಡಿದಿತ್ತು. ದೇವೇಗೌಡರ ಕುಟುಂಬದಿಂದ ದೂರವಾಗಿದ್ದ ತಾವು ಕಾಂಗ್ರೆಸ್ಗೆ ಸೇರಿ ಬಿಟ್ಟೆ. ತಾನು ತಪ್ಪು ಮಾಡಿದೆ ಎಂದು ಹಲವಾರು ಬಾರಿ ಅನ್ನಿಸಿತ್ತು. ಆದರೆ ತಪ್ಪು ತದ್ದಿಕೊಂಡು ತವರಿಗೆ ಮರಳಲು ಸೂಕ್ತ ಸಮಯ ಸಿಕ್ಕಿರಲಿಲ್ಲ. ಈಗ ನನ್ನ ತವರೂರಿಗೆ ಮರಳಿದ ತೃಪ್ತಿ ತಮಗಿದೆ ಎಂದು ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಹೇಳಿದರು. ಕಾಂಗ್ರೆಸ್ನಲ್ಲಿ ತಾವು ಕಳೆದ ಹತ್ತು ವರ್ಷದಿಂದ ನಿಸ್ವಾರ್ಥ ಸೇವೆ ಮಾಡಿದೆ. ಕನಿಷ್ಠ ರಾಜ್ಯ ನಾಯಕರು ಗುರುತಿಸಿ ಸ್ಥಾನಮಾನ ನೀಡುವ ಸೌಜನ್ಯವನ್ನೂ ಸಹ ತೋರಲಿಲ್ಲ. ಆದರೆ ಜೆಡಿಎಸ್ನಲ್ಲಿ ಮಾಜಿ ಪ್ರಧಾನಿಗಳ ಪಕ್ಕದಲ್ಲೇ ಕುಳಿತು ಜನರ ಕಷ್ಟ ಸುಖಗಳನ್ನು ಕೇಳುವ ಸದಾವಕಾಶ ಸಿಕ್ಕಿದೆ ಎಂದು ನಂಜೇಗೌಡ ಹೇಳಿದರು.
ಭೇದಿಸಲು ಸಾಧ್ಯವೇ ಇಲ್ಲ: ಮಾಯಸಂದ್ರ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸಯ್ಯ ಮಾತನಾಡಿ ಜೆಡಿಎಸ್ನ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಯಾರಿಂದಲೂ ಭೇದಿಸಲು ಸಾಧ್ಯವೇ ಇಲ್ಲ. ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪನವರು ಕ್ಷೇತ್ರದ ಪ್ರತಿಯೊಬ್ಬ ಜನರ ಕಷ್ಟ ಸುಖಗಳಿಗೆ ಭಾಗಿಯಾಗಿದ್ದಾರೆ. ಗ್ರಾಮಗಳ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿದ್ದಾರೆ. ಇಂತಹ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ಹಾಗೂ ಸಂಘಟನೆ ಮಾಡಿರುವ ಮುಂದೆ ಮಂತ್ರಿ ಸ್ಥಾನವನ್ನೂ ಪಡೆಯುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಕೃಷ್ಣಪ್ಪನವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡುವ ಜವಾಬ್ದಾರಿ ಕ್ಷೇತ್ರದ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರಿಗೆ ಇದೆ ಎಂದು ಹೇಳಿದರು.
ತಮ್ಮ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃಧ್ಧಿ ಕಾರ್ಯಗಳನ್ನು ಗಮನಿಸಿ ಮೆಚ್ಚಿರುವ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು  ಜೆಡಿಎಸ್ ಅನ್ನು ಬೆಂಬಲಿಸಲು ಪಕ್ಷವನ್ನು ಸೇರುತ್ತಿದ್ದಾರೆ ಎಂದು ಹೇಳಿದರು. ಸೇರ್ಪಡೆಗೊಂಡ ಕಾರ್ಯಕರ್ತರನ್ನು ಹಾರ ಹಾಕಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
 ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ವಕ್ತಾರ ಡಾ.ಬಿ.ನಂಜಪ್ಪ, ವಕೀಲ ಧನಪಾಲ್, ಎಸ್ಸಿ ಘಟಕದ ಅಧ್ಯಕ್ಷ ತಿಮ್ಮೇಶ್, ಮಹಲಿಂಗಪ್ಪ, ಬಸವರಾಜು, ಇಟ್ಟಿಗೇಹಳ್ಳಿ ಬಾಬು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.