'ಕೆಜೆಪಿ ಗೆಲವಿನೊಂದಿಗೆ ಸರ್ವಾಧಿಕಾರದ ಅಂತ್ಯ ಖಚಿತ'
ಕ.ಪ್ರ.ವಾರ್ತೆ ತುರುವೇಕೆರೆ ಮೇ 2
ಈ ಬಾರಿಯ ಚುನಾವಣೆ ಮಹತ್ತರವಾಗಿದೆ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಇದ್ದ ಸರ್ವಾಧಿಕಾರದ ಅಂತ್ಯವಾಗಲಿದೆ.
ಕೆಜೆಪಿ ಗೆಲವಿನೊಂದಿಗೆ ಕ್ಷೇತ್ರದ ಜನರಿಗೆ, ಮತದಾರರಿಗೆ ಹಾಗೂ ಅಧಿಕಾರಿಗಳು ಹಾಗೂ ನೌಕರರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರೆಯಲಿದೆ. ಮುಂದಿನ ದಿನಗಳು ಶಾಂತಿಯ ದಿನಗಳಾಗಿ ಪರಿವರ್ತನೆಯಾಗುತ್ತವೆ ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಲಿದೆ ಎಂದು ಕೆಜೆಪಿ ವಕ್ತಾರ ವಕೀಲ ಮುದ್ದೇಗೌಡ ಹೇಳಿದರು.
ಮಾಯಸಂದ್ರದಲ್ಲಿ ಕೆಜೆಪಿ ಪರವಾದ ಚುನಾವಣಾ ಪ್ರಚಾರ ಮಾಡಿದ ಅವರು ಕಳೆದ ಹತ್ತು ವರ್ಷಗಳಲ್ಲಿ ಹಾಲಿ ಶಾಸಕರಾಗಿರುವ ಎಂ.ಟಿ.ಕೃಷ್ಣಪ್ಪನವರು ಕ್ಷೇತ್ರದಲ್ಲಿ ಸರ್ವಾಧಿಕಾರಿ ಧೋರಣೆ ತಳೆದಿದ್ದರು.
ಕ್ಷೇತ್ರದ ಮತದಾರರನ್ನು ಜನರನ್ನು ಕಾಲ ಕಸದಂತೆ ಕಂಡಿದ್ದರು. ಅಂದು ಆಡಿದ ಸರ್ವಾಧಿಕಾರಿ ದುರಹಂಕಾರಿ ಮಾತುಗಳಿಗೆ ಬೆಲೆ ತೆರುವ ಕಾಲ ಸನ್ನಿಹಿತವಾಗಿದೆ ಎಂದು ಮುದ್ದೇಗೌಡ ಹೇಳಿದರು.
ಈಗ ಕೆಜೆಪಿಯಿಂದ ಸ್ಪರ್ಧೆ ಮಾಡಿರುವ ಮಸಾಲಾ ಜಯರಾಂ ಸಜ್ಜನರಾಗಿದ್ದಾರೆ. ಎಲ್ಲರನ್ನೂ ಗೌರವದಿಂದ ಮಾತನಾಡಿಸುವ ಮನೋಭಾವದವರಾಗಿದ್ದಾರೆ. ಕ್ಷೇತ್ರದ ಜನರನ್ನು ಅಭಿಮಾನದಿಂದ ಮಾತನಾಡಿಸುವ ಮನಸ್ಸು ಮಾಡಿದರೆ ಜನರಿಗೆ ಅದಕ್ಕಿಂತ ಮತ್ತೇನು ಬೇಕು. ಶಾಸಕರು ಆಡುತ್ತಿದ್ದ ದುರಹಂಕಾರದ ಮಾತುಗಳು ಈಗ ಅವರಿಗೇ ಮುಳುವಾಗಿದೆ.
ಹಾಗಾಗಿ ಈ ಚುನಾವಣೆಯಲ್ಲಿ ಕೆಜೆಪಿ ಗೆಲವು ನಿಶ್ಚಿತ. ಇದರೊಂದಿಗೆ ಕಳೆದ ಹತ್ತು ವರ್ಷಗಳಿಂದ ಜೀತದಾಳುಗಳಂತೆ ಇದ್ದ ಕ್ಷೇತ್ರದ ಜನರಿಗೆ ಮುಕ್ತಿ ದೊರೆಯಲಿದೆ ಎಂದು ಮುದ್ದೇಗೌಡ ಹೇಳಿದರು.
ಕೆಜಿಪಿ ಅಭ್ಯರ್ಥಿ ಮಸಾಲಾ ಜಯರಾಂ ಮಾತನಾಡಿ ತಾವು ಮನೆ ಮಗನಂತೆ ಇದ್ದು ಕ್ಷೇತ್ರದ ಎಲ್ಲಿರಿಗೂ ಗೌರವ ಭಾವನೆಯಿಂದ ನಡೆದುಕೊಳ್ಳುವುದಾಗಿ ಹೇಳಿದರು. ಮೊದಲು ಮತದಾರ ಪ್ರಭುವಿಗೆ, ಕಾರ್ಯಕರ್ತರಿಗೆ ಗೌರವ ನೀಡಿ ತದ ನಂತರ ಕ್ಷೇತ್ರದ ಅಭಿವೃಧ್ಧಿಗೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ರಾಜ್ಯ ಕೈಮಗ್ಗ ಅಭಿವೃಧ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಕೆಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ್, ಮುಖಂಡರಾದ ಎಂ.ಡಿ.ಮೂರ್ತಿ, ತಾಲೂಕು ಅಧ್ಯಕ್ಷ ಮಾಚೇನಹಳ್ಳಿ ರಾಮಣ್ಣ, ಸಿಎಸ್ ಪುರ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ಕೆಂಪೇಗೌಡ, ಹೇಮಚಂದ್ರು ಮೊದಲಾದ ಮುಖಂಡರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

