ತುಮಕೂರು

'ಕೆಜೆಪಿಗೆ ಎಲ್ಲ ವರ್ಗದ ಬೆಂಬಲ'

Published On :

ತುಮಕೂರು: ತುಮಕೂರು ನಗರದಲ್ಲಿ ಕೆಜೆಪಿಗೆ ಪಕ್ಷಾತೀತ ಬೆಂಬಲ ಸಿಕ್ಕಿದ್ದು, ತಮಗೆ ಜಯ ಖಚಿತ ಎಂದು ತುಮಕೂರು ನಗರ ಕೆಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಲ್ಲ ವರ್ಗದ ಜನತೆಯನ್ನು ಭೇಟಿ ಮಾಡಿದ್ದೇವೆ. ಜನ ಬೆಂಬಲ ತಮಗಿದೆ. ಈ ಬಾರಿ ತುಮಕೂರು ನಗರದಲ್ಲಿ ಬದಲಾವಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ನಗರಸಭೆ ಚುನಾವಣೆ ವೇಳೆ ನೀಡಿದ್ದ ಪ್ರಣಾಳಿಕೆಯೇ ಈ ಬಾರಿ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಾಗಿದೆ ಎಂದರು.
ಆರೋಪ ಸುಳ್ಳು:  ಸಚಿವ ಸೊಗಡು ಶಿವಣ್ಣ, ಸಂಸದ ಜಿ.ಎಸ್.ಬಸವರಾಜು ವಿರುದ್ದ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಪಂಚಾಕ್ಷರಯ್ಯ ಹಾಗೂ ಅಳಿಯ, ಸೊಸೆ ಈ ಹಿಂದೆಯೇ ಕೆಜೆಪಿ ಸೇರಿದ್ದಾರೆ. ಪಂಚಾಕ್ಷರಯ್ಯ ಹಾಗೂ ಕುಟುಂಬದವರಿಗೆ ಸಂಸದರು ಬೆದರಿಕೆ ಹಾಕಿಲ್ಲ. ಸಂಸದರು ಯಾರ ಮನೆಯನ್ನೂ ಒಡೆಯುವ ಕೆಲಸ ಮಾಡಿಲ್ಲ. ಸೊಗಡು ಶಿವಣ್ಣ ಇಲ್ಲದ ಹೇಳಿಕೆ ನೀಡುವ ಮೂಲಕ ಅಗ್ಗದ ಪ್ರಚಾರ ಪಡೆಯುತ್ತಿದ್ದಾರೆ. ಜಾತಿಗಳನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೆಬ್ಬಾಕ ರವಿ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.