ತುಮಕೂರು

ಕೆಜೆಪಿ ಸರ್ಕಾರ, ಬಿಎಸ್‌ವೈ ಸಿಎಂ: ಎಂಡಿಎಲ್

Published On :

ಕ.ಪ್ರ.ವಾರ್ತೆ   ತುರುವೇಕೆರೆ   ಮೇ 3
ಮುಂಬರುವ ಚುನಾವಣೆಯಲ್ಲಿ ಕೆಜೆಪಿ ಸ್ಪಷ್ಟ ಬಹುಮತ ಗಳಿಸಿ ಸರ್ಕಾರ ರಚಿಸುವುದು ಶತಃಸಿದ್ದ ಎಂದು ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.
ಕ್ಷೇತ್ರದ ಹಲವಾರು ಪ್ರದೇಶಗಳಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿ ಮಾಡುವ ಮೂಲಕ ಮತಯಾಚನೆಗೆ ತೆರಳಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಜೆಪಿ ಕನಿಷ್ಠ 130 ಸ್ಥಾನಗಳನ್ನು ಗಳಿಸಲಿದೆ. ಹಾಗೆಯೇ ಬಿಎಸ್‌ವೈರವರು ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಿದರು.
ಬಿಎಸ್‌ವೈರವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯವನ್ನು ಅಭಿವೃಧ್ಧಿಯತ್ತ ತೆಗೆದುಕೊಂಡು ಹೋದ ರೀತಿ, ಜನಸಾಮಾನ್ಯರ ಹಾಗೂ ರೈತರ ಪರವಾಗಿ ಮಾಡಿದ ಹಲವಾರು ಯೋಜನೆಗಳು ರಾಜ್ಯದಲ್ಲಿ ಕೆಜೆಪಿ ಅಲೆ ಬರಲು ಸಾಧ್ಯವಾಗಿದೆ ಎಂದರು.
ಈ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಿಂದಲೂ ಕೆಜೆಪಿಗೆ ಮುಖಂಡರು ಹಾಗೂ ಕಾರ್ಯಕರ್ತರು ಹರಿದು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಕನಿಷ್ಠ 7 ಸ್ಥಾನಗಳು ಕೆಜೆಪಿಯ ಪಾಲಾಗಲಿವೆ. ಪ್ರಥಮ ಫಲಿತಾಂಶ ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದಲೇ ಘೋಷಣೆಯಾಗಲಿದ್ದು, ಕೆಜೆಪಿ ಅಭ್ಯರ್ಥಿ ಮಸಾಲಾ ಜಯರಾಂರವರು ಗೆದ್ದು ಬರಲಿದ್ದಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೆಜೆಪಿ ಕಡಿಮೆ ಸ್ಥಾನ ಗಳಿಸಲಿದೆ ಎಂಬ ಸಮೀಕ್ಷೆಗಳು ಸುಳ್ಳು ಎಂಬುದನ್ನು ರಾಜ್ಯದ ಮತದಾರ ಮೇ 8 ರಂದು ಬಹಿರಂಗ ಪಡಿಸಲಿದ್ದಾನೆ ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಸಿ.ಜೆ.ಆನಂದಕುಮಾರ್, ಎಚ್.ಆರ್.ರಾಮೇಗೌಡ, ರಮೇಶ್, ಮಾಚೇನಹಳ್ಳಿ ರಾಮಣ್ಣ ಮೊದಲಾದವರಿದ್ದರು.
ಎಂ.ಡಿ.ಲಕ್ಷ್ಮೀನಾರಾಯಣ್ ದ್ವಿಚಕ್ರ ವಾಹನ ಚಾಲನೆ ಮಾಡುತ್ತಾ ಮತಯಾಚನೆ ಮಾಡಿದರು. ಪಕ್ಷಕ್ಕೆ ಸೇರ್ಪಡೆಯಾದ ಎಚ್.ಆರ್.ರಾಮೇಗೌಡ, ಪಕ್ಷದ ಕಾರ್ಯದರ್ಶಿ ಹೇಮಚಂದ್ರು, ತಾಲ್ಲೂಕು ಅಧ್ಯಕ್ಷ ರಾಮಣ್ಣ ಮೊದಲಾದವರು ಸಾಥ್ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.