ಈ ಬಾರಿ ಜೆಡಿಎಸ್ಗೆ ಸ್ಪಷ್ಟ ಬಹುಮತ: ಸುಧಾಕರ್ ಲಾಲ್
ಕೊರಟಗೆರೆ: ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿದೆ, ಅದೇ ರೀತಿ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ಗೆ ಪ್ರಚಂಡ ಬಹಮತ ಸಿಗಲಿದೆ ಎಂದು ಅಭ್ಯರ್ಥಿ ಸುಧಾಕರ್ ಲಾಲ್ ತಿಳಿಸಿದರು. ಅವರು ಗುರುವಾರ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿ ಮಾತಡಿದರು. ಜನರ ಒತ್ತಾಸೆಯಂತೆ ನಾನು 3 ಬಾರಿ ಜಿ.ಪಂ ಸದಸ್ಯನಾಗಿದ್ದೇನೆ. ಅದೇ ರೀತಿ ಈ ಬಾರಿ ಜನರ ಬೆಂಬಲದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ, ನನ್ನಲ್ಲಿ ಹಣಬಲವಿಲ್ಲದಿದ್ದರೂ ಅಪಾರ ಜನ ಬಲವಿದ್ದು ನಾನು ಜನರ ಅಪೇಕ್ಷೆಯಂತೆ ಜಯಗಳಿಸುತ್ತೇನೆ ಎಂದು ಹೇಳಿದರು. ಇವರೊಂದಿಗೆ ಪ.ಪಂ ಸದಸ್ಯರಾದ ಶ್ರೀನಿವಾಸಮೂರ್ತಿ, ಎ. ಶಾಂಭವಿ, ಕೆ.ಎಲ್. ಆನಂದ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

