ತುಮಕೂರು

ಕಾರ್ಮಿಕ ಮಂಡಳಿಯಿಂದ ರು. 2 ಲಕ್ಷ ಪರಿಹಾರ ವಿಮೆ

Published On :

ಕ.ಪ್ರ. ವಾರ್ತೆ೤ ಹಾಸನ೤ ಮೇ 4
ಕಾರ್ಮಿಕರು ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಮೃತಪಟ್ಟರೆ ಕಾರ್ಮಿಕ ಮಂಡಳಿಯಿಂದ ಮೃತ ಕುಟುಂಬಕ್ಕೆ  2 ಲಕ್ಷ ರು. ಪರಿಹಾರ ವಿಮೆ ನೀಡಲಾಗುವುದು ಎಂದು ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಎ. ಸ್ವಾಮಿ ತಿಳಿಸಿದರು.
ನಗರದ ಸಿದ್ದಯ್ಯನಗರದಲ್ಲಿ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಸಂಘಟನೆಯು ಕಾರ್ಮಿಕರ ಪರ ಹೋರಾಟ ಮಾಡಿದ ಫಲವಾಗಿ ಕಾರ್ಮಿಕರಿಗೆ ಸೌಲಭ್ಯ ಸಿಗಲು ಕಾರಣವಾಯಿತು ಎಂದು ಹೇಳಿದರು.   
ಕಾರ್ಮಿಕರು ಕೆಲಸ ಮಾಡುವ ವೇಳೆ ಅಪಘಾತ ಸಂಭವಿಸಿ ಶೇ.40 ಅಂಗವಿಕಲತೆಯಾದರೆ 80 ಸಾವಿರ ರು. ಪರಿಹಾರ ಧನ ಹಾಗೂ ಸಂಪೂರ್ಣ ಅಂಗವಿಕಲತೆಯಾದರೆ 2 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಅಲ್ಲದೆ ಮಾಹೆಯಾನ ರು.500 ಪಿಂಚಣಿ ಎಕ್ಸ್‌ಗ್ರೇಷಿಯಾ ಧನಸಹಾಯ 50 ಸಾವಿರ ರು. ಅಂಗವಿಕಲತೆ ಪ್ರಮಾಣ ಪತ್ರ ಆಧರಿಸಿ 5 ಸಾವಿರ ರು. ಸಹಾಯಧನ,  ನೋಂದಾಯಿತರಲ್ಲದ ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಅಪಘಾತವುಂಟಾದಲ್ಲಿ, ನೊಂದಾಯಿತರಲ್ಲದ ಕಾರ್ಮಿಕರಿಗೆ ಅಪಘಾತ ಸಂಭವಿಸಿದರೆ 10-20  ಸಾವಿರ ರು. ಪರಿಹಾರ ಧನ ನೀಡಲಾಗುವುದು.
ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಚಿಕಿತ್ಸೆಗೆ 2 ಲಕ್ಷ ರು. ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯಕ್ಕೆ 15 ಸಾವಿರ ಹಾಗೂ ಮಕ್ಕಳ ಮದುವೆಗೆ 50 ಸಾವಿರ ರು. ಹೀಗೆ ಹಲವಾರು ಸೌಲಭ್ಯಗಳಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ  ಸಲಹೆ ನೀಡಿದರು. ಸಂಘದ ಅಧ್ಯಕ್ಷ ಚಲುವರಾಜ್, ಸಣ್ಣಸ್ವಾಮಿ, ಪ್ರಕಾಶ್, ಕುಮಾರ್, ಕೇಶವಮೂರ್ತಿ, ತಮ್ಮಯ್ಯಣ್ಣ, ಎಚ್.ಎಂ ವೀರಭದ್ರ , ಮಂಜೇಗೌಡ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.