ತುಮಕೂರು

ಶಿರಾ ತಾಲೂಕಿನ 9 ಪ್ರೌಢಶಾಲೆಗಳಿಂದ ಶೇ. 100 ರಷ್ಟು ಫಲಿತಾಂಶ

Published On :

ಶಿರಾ:  ಮಧುಗಿರಿ ಶೈಕ್ಷಣಿಕ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗೈದು ತಾಲೂಕಿನಲ್ಲಿ 9 ಪ್ರೌಢಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜ್ಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ 2102 ವಿದ್ಯಾರ್ಥಿಗಳು, 2033 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 4135 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು ಇದರಲ್ಲಿ 1738 ವಿದ್ಯಾರ್ಥಿಗಳು 1718 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 3456 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 145 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 1261 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 855 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 1195 ವಿದ್ಯಾರ್ಥಿಗಳು  ತೃತೀಯ ದರ್ಜೆಯಲ್ಲಿ ಪಾಸಾಗಿ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 4ನೇ ಸ್ಥಾನ ಪಡೆದು ಶೇ. 83.57 ಫಲಿತಾಂಶ ಪಡೆದಿದ್ದಾರೆ.
ಇದರಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದ ಶಾಲೆಗಳೆಂದರೆ ಗೋಣಿಹಳ್ಳಿಯ ಸರ್ಕಾರಿ ಪ್ರೌಢಶಾಲೆ, ಗುಮ್ಮನಹಳ್ಳಿಯ ಅರ್.ರೆಹಾನ್ ಪ್ರೌಢಶಾಲೆ, ಲಕ್ಕನಹಳ್ಳಿಯ ಅರುಣೋದಯ ಪ್ರೌಢಶಾಲೆ ಶಿರಾದ ಮಂಜುಶ್ರೀ ಆಂಗ್ಲ ಪ್ರೌಢಶಾಲೆ, ಬುಕ್ಕಾಪಟ್ಟಣದ ಅಕ್ಸ್ಫರ್ಡ್ ಪ್ರೌಢಶಾಲೆ, ಕಾಳಾಪುರ ರಂಗನಾಥ ಸ್ವಾಮಿ ಪ್ರೌಢಶಾಲೆ, ಪಟ್ಟನಾಯಕನಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆ, ಶಿರಾ ಪಟ್ಟಣದ ಸೆಂಟ್ ಆನ್ಸ್ ಪ್ರೌಢಶಾಲೆ, ಪಟ್ಟನಾಯಕನಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರ ಬಾಲಕಿಯರ ಪ್ರೌಢಶಾಲೆ ಒಟ್ಟು 9 ಶಾಲೆಗಳು ಶೇ. 100 ರಷ್ಟು ಫಲಿತಾಂಶ ಪಡೆದಿವೆ.
ಸೇಂಟ್ ಆನ್ಸ್ ಪ್ರೌಢಶಾಲೆ:  ಶಾಲೆಯಲ್ಲಿ 88 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು ಇದರಲ್ಲಿ 15 ಡಿಸ್ಟಿಂಕ್ಷನ್, 61 ಪ್ರಥ ದರ್ಜೆ, 10 ದ್ವಿತೀಯ ದರ್ಜೆ, 2 ತೃತಿಯ ದರ್ಜೆ ಪಡೆದು ಪಾಸಾಗಿದ್ದಾರೆ.
ಪ್ರೆಸಿಡೆನ್ಸಿ ಪ್ರೌಢಶಾಲೆ: ಶಿರಾ ಪಟ್ಟಣದ ಪ್ರೆಸಿಡೆನ್ಸಿ ಪ್ರೌಢಶಾಲೆಯಲ್ಲಿ ಒಟ್ಟು 205 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಇದರಲ್ಲಿ 46 ಡಿಸ್ಟಿಂಕ್ಷನ್, 121 ಪ್ರಥಮ ದರ್ಜೆ, 26 ದ್ವಿತೀಯ ದರ್ಜೆ, 9 ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಶೇ. 98.53 ಫಲಿತಾಂಶ ದೊರಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.