ತುಮಕೂರು

ಕಾಂಗ್ರೆಸ್ ಷಡಕ್ಷರಿಗೆ ಅನುಕಂಪ ತಂದ ಜಯ

Published On :

ತಿಪಟೂರು: ತೀವ್ರ ಕುತೂಹಲ ಮೂಡಿಸಿದ್ದ ಹಾಗೂ ಪ್ರತಿಷ್ಠೆಯ ಕಣವಾಗಿದ್ದ ತ್ರಿಕೋನ ಸ್ಪರ್ಧೆಯ ತಿಪಟೂರು ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದಿದ್ದು, ಕಾಂಗ್ರೆಸ್ನ ಕೆ.ಷಡಕ್ಷರಿಯವರು ಒಟ್ಟು 56817ಮತಗಳನ್ನು ಪಡೆಯುವ ಮೂಲಕ 11602 ಮತಗಳ ಅಂತರದೊಂದಿಗೆ ಅಭೂತ ಪೂರ್ವ ಗೆಲವು ಸಾಧಿಸಿದರು. ಕೆ.ಷಡಕ್ಷರಿಯವರ ಗೆಲವಿಗೆ ತಾಲೂಕಿನಾದ್ಯಂತ 2 ಬಾರಿಯ ಸೋಲಿನ ಹಾಗೂ ಇವರ ರಾಜಕೀಯ  ಜವಾಬ್ದಾರಿ ಹೊರುತಿದ್ದ ಸಹೋದರ ಕೆ.ರಾಜಶೇಖರ್ ಅವರ ಸಾವಿನ ಅನುಕಂಪ ಹೆಚ್ಚು  ಸಹಕಾರಿಯಾಯಿತು.  ಅಲ್ಲದೆ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೆಂಬ ಮನ್ಸೂಚನೆಯೂ ಹೆಚ್ಚು ಕೆಲಸ ಮಾಡಿದ್ದರ ಪರಿಣಾಮ ಇವರ ಗೆಲವಿಗೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಟಕ್ಕೆ ಬಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣೆ ಆರಂಭದಿಂದ ಅಂತಿಮ ಕ್ಷಣದವರೆಗೂ ಸಾಧ್ಯವಿರುವ ಎಲ್ಲಾ ಕಸರತ್ತುಗಳನ್ನು ಮಾಡಿದ್ದರ ಪರಿಣಾಮ ಕಾಂಗ್ರೆಸ್ ಗೆಲ್ಲಲು ಪ್ರಮುಖ ಕಾರಣವಾಯಿತು.
ಇದರ ಜೊತೆಗೆ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ್ದ ಬಿಜೆಪಿ ದುರಾಡಳಿತಕ್ಕೆ ಬೇಸತ್ತಿದ್ದ ತಾಲೂಕಿನ ಮತದಾರರು,ಈ ಬಾರಿ ಬಿಜೆಪಿ ಕಿತ್ತೊಗೆಯಬೇಕೆಂಬ ಮನಸ್ಸು ಮಾಡಿದ್ದರ ಪರಿಣಾಮ ಕಾಂಗ್ರೆಸ್ ಬಹುಮತಗಳಿಂದ ಗೆಲವು ಸಾಧಿಸಲು ಸಹಕಾರಿಯಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.