ತುಮಕೂರು

ಪ್ರತಿ ದಿನದ ಸೂರ್ಯೋದಯವೇ ಸೃಜನೋತ್ಸವದ ಸಂಕೇತ

Published On :

ಕ.ಪ್ರ. ವಾರ್ತೆ, ತುಮಕೂರು, ಮೇ 9
ನಗರದ ಸಿದ್ಧಗಂಗಾ ಡಿಇಡಿ ಕಾಲೇಜಿನಲ್ಲಿ ಜಿಲ್ಲಾ ಕಸಪಾ ಮತ್ತು ನಗರ ಘಟಕಗಳ ಆಶ್ರಯದಲ್ಲಿ ಜಿಲ್ಲಾ ಸೃಜನ ಸಾಹಿತ್ಯ ಕುರಿತು ಚರ್ಚೆ ಏರ್ಪಡಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಸೋ.ಮು. ಭಾಸ್ಕರಾಚಾರ್ ವಹಿಸಿದ್ದರು. ಕಾರ್ಯಕ್ರಮ  ಉದ್ಘಾಟಿಸಿದ ಶಿಕ್ಷಣ ತಜ್ಞ ಪ್ರೊ. ಸಿ.ಎಚ್. ಮರಿದೇವರು ತಮ್ಮ ಉದ್ಘಾಟನಾ ನುಡಿಗಳಲ್ಲಿ ಪ್ರತಿ ದಿನದ ಸೂರ್ಯೋದಯವೇ ಸೃಜನೋತ್ಸವದ ಸಂಕೇತ ಎಂದರು.
ನಾವು ಪ್ರತಿನಿತ್ಯ ಹೊಸ ಹೊಸ ಆಯಾಮಗಳ ಕಡೆ ಪರಿವರ್ತನೆ ಆಗುತ್ತಲೇ ಇರುತ್ತೇವೆ. ಇದೇ ಸಾಮಾಜಿಕ ಪರಿವರ್ತನೆ ಹಾಗೆ ಸಾಹಿತ್ಯ ಕಾವ್ಯ, ಕತೆಗಳ ಹುಟ್ಟುತ್ತಲೇ ಇರುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ ಡಾ. ಲಕ್ಷ್ಮಣ್‌ದಾಸ್ ಅವರು ತುಮಕೂರು ಜಿಲ್ಲೆ, ಕಲೆ, ಸಾಹಿತ್ಯ ರಂಗಭೂಮಿ ಹಾಗೂ ಇಲ್ಲಿನ ಮಠಮಾನ್ಯಗಳೆಲ್ಲವು ಸೃಜನಶೀಲತೆಯ ಸಂಕೇತವಾಗಿವೆ. ಈ ಜಿಲ್ಲೆ, ಸಾಂಸ್ಕೃತಿಕ ಸಾಹಿತಿಗಳ ಕಲಾವಿದರ ಕಣಜವೆಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ, ಸೃಜನ ಸಾಹಿತ್ಯದ ಚರ್ಚೆಗೆ ಚಾಲನೆ ನೀಡಿ ಸಾಹಿತ್ಯ ನಿಂತ ನೀರಲ್ಲ ಎಂದರು. ಚರ್ಚೆಯಲ್ಲಿ ಪ್ರೊ. ಬಿ. ಕರಿಯಣ್ಣ ಹೊನ್ನಗಾನಹಳ್ಳಿ, ಡಾ. ಮುದ್ದುವೀರಪ್ಪ, ಲೇಖಕಿಯರ ಸಂಘದ ಅಧ್ಯಕ್ಷ ಸಿ.ಎನ್. ಸುಗುಣಾದೇವಿ, ಡಾ. ಬಿ. ನಂಜುಂಡಸ್ವಾಮಿ ಭಾಗವಹಿಸಿದ್ದರು. ಅನನ್ಯ ಸಂಸ್ಕೃತಿ ವೇದಿಕೆಯಿಂದದ ಸುಗಮ ಸಂಗೀತ ಏರ್ಪಡಿಸಲಾಗಿತ್ತು. ಕಂಟಲಗೆರೆ ಸಣ್ಣಹೊನ್ನಯ್ಯ, ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಿ. ನಾಗರಾಜ್ ಪ್ರಾರ್ಥಿಸಿದರು. ಎಸ್.ಕೆ. ನಾಗರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.