ತುಮಕೂರು

ಸರಸ್ವತಿ ಪುತ್ರನಿಗೆ ಆರ್ಥಿಕ ಸಮಸ್ಯೆ

Published On :

ಕ.ಪ್ರ. ವಾರ್ತೆ  ಮಧುಗಿರಿ  ಮೇ 10
ಪ್ರತಿಭೆಗೆ ಹುಟ್ಟುವುದು ಗುಡಿಸಿಲಿನಲ್ಲಿ ಎಂಬುದು ಒಂದು ಗಾದೆ ಮಾತು ಅಂತಹ ಗಾದೆ ಮಾತಿಗೆ ನಿದರ್ಶನವೆಂಬಂತೆ ಕಡು ಬಡತನದಲ್ಲಿಯೂ ಓದಿ ಶೇ. 93 ರಷ್ಟು ಅಂಕಗಳಿಕೆಯೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾವಂತನ ಕಥೆಯಿದು.
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ತಿಮ್ಮಲಾಪುರ ಗ್ರಾಮದ ರಾಮಕೃಷ್ಣಪ್ಪ, ವರಲಕ್ಷ್ಮಮ್ಮ ದಂಪತಿಯ ನಾಲ್ವರು ಮಕ್ಕಳಲ್ಲಿ ಕಿರಿಯವನಾದ ನವೀನ್ ಕುಮಾರ್ ಟಿ.ಆರ್. ಅಂತ ಪ್ರತಿಭಾವಂತ.
ಎಸ್ಎಸ್ಎಲ್ಸಿಯಲ್ಲಿ ಶೇ.92: ನವೀನ್ ಚಿಕ್ಕಂದಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ವಿದ್ಯಾಭ್ಯಾಸ ಶಾಲೆಯಲ್ಲಿ ಎಲ್ಲರಿಗಿಂತಲೂ ಮುಂದು ಮನೆಯಲ್ಲಿ ಕಡು ಬಡತನವಿದ್ದ ಕಾರಣ ತಂದೆ ತಾಯಿ ಜೀವನೋಪಾಯಕ್ಕಾಗಿ ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನವೀನ್ ತನ್ನ ಅಕ್ಕನ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಯುತ್ತಿದ್ದಾನೆ. ಎಸ್ಎಸ್ಎಲ್ಸಿಯಲ್ಲಿ ಶೇ.92.64 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನವೀನ್ ಪಿಯುಸಿ ಗೌತಮ ಬುದ್ಧ ಪದವಿ ಪೂರ್ವ ಕಾಲೇಜಿಗೆ ಸೇರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ (ವಾಣಿಜ್ಯ ವಿಭಾಗ) ಶೇ. 93 ರಷ್ಟು ಅಂಕ ಪಡೆಯುವುದಕರ ಮೂಲಕ ಪ್ರಥಮ ಸ್ಥಾನಗಳಿಸಿ ಕಾಲೇಜು ಮತ್ತು ತಾಲೂಕಿಗೆ ಗೌರವ ತಂದಿದ್ದಾನೆ.
ಇಂತಹ ಪ್ರತಿಭಾವಂತನಿಗೆ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿ ಬಡತನದಿಂದಾಗಿ ಮಗನನ್ನು ಮುಂದಿನ ವಿದ್ಯಾಭ್ಯಾಸದ ಖರ್ಚು ವೆಚ್ಚ ಭರಿಸಲಾಗದ ಪರಿಸ್ಥಿತಿಯಲ್ಲಿದೆ ಅವರ ಕುಟುಂಬ. ಶೇ. 93 ರಷ್ಟು ಅಂಕ ಪಡೆದರೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಓದು ನಿಲ್ಲಿಸುವ ದುಸ್ಥಿತಿಯಲ್ಲಿ ನವೀನ್ ಇದ್ದಾನೆ. ಆದ್ದರಿಂದ ಸಹೃದಯಿಗಳು ನೆರವಾದರೆ ಪ್ರತಿಭೆಯೊಂದು ಬೆಳಗಲು ನೆರವಾಗುತ್ತದೆ.


ನನಗೆ ನಿಜಕ್ಕೂ ಪ್ರೇರಣೆ ಮತ್ತು ಪ್ರೋತ್ಸಾಹಕರು ನನ್ನ ನೆಚ್ಚಿನ ಗುರುಗಳಾದ ಇಂಗ್ಲೀಷ್ ಉಪನ್ಯಾಸಕ ದೊಡ್ಡ ಮಲ್ಲಯ್ಯ. ನನ್ನ ಕಷ್ಟಗಳಿಗೆ ಸ್ಪಂದಿಸಿ ನನಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಓದುವ ವಿಚಾರದಲ್ಲಿ ನನಗೆ ಅವರೇ ಮಾರ್ಗದರ್ಶಕರು ನನ್ನ ಫಲಿತಾಂಶದ ಸಂಪೂರ್ಣ ಶ್ರೇಯಸ್ಸು ಅವರಿಗೇ ಸಲ್ಲಬೇಕು.
 - ನವೀನ್ ಕುಮಾರ್, ವಿದ್ಯಾರ್ಥಿ
(ನವೀನ್ ಕುಮಾರ್: 8453090505)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.