ನಗರ ಶಾಸಕರ ಕೆಲಸ ಕಾರ್ಯಾರಂಭ, ರಫೀಕ್- ಡಿಸಿ ಚರ್ಚೆ
ಕ.ಪ್ರ. ವಾರ್ತೆ , ತುಮಕೂರು , ಮೇ 14
ತುಮಕೂರು ನಗರದ ನೂತನ ಕಾಂಗ್ರೆಸ್ ಶಾಸಕ, ಯುವ ಮುಖಂಡ ಡಾ. ರಫೀಕ್ ಅಹಮದ್ ಕಾರ್ಯಾರಂಭ ಮಾಡಿದ್ದಾರೆ. ಕುಡಿಯುವ ನೀರು, ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿದ್ದಾರೆ.
ಕುಡಿಯುವ ನೀರು, ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನುರಾಗ್ ತಿವಾರಿ, ನಗರಸಭೆ ಆಯುಕ್ತ ಹಾಗೂ ಸಿಬ್ಬಂದಿವರ್ಗದವರೊಂದಿಗೆ ಡಾ. ರಫೀಕ್ ಅಹಮದ್ ಸಮಾಲೋಚನೆ ನಡೆಸಿದ್ದಾರೆ.
ತುಮಕೂರು ನಗರ ಹೊರವಲಯದ ವಾರ್ಡ್ಗಳಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಬಗ್ಗೆ ಚರ್ಚಿಸಿ ಕೆಳಕಂಡಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರೂ ಆಗಿರುವ ರಫೀಕ್ ಅಹಮದ್ ತಿಳಿಸಿದ್ದಾರೆ.
ಈ ಹಿಂದೆ 51 ಬೋರ್ವೆಲ್ಗಳನ್ನು ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಕೊರೆಯಲು ಅನುಮತಿ ಪಡೆಯಲಾಗಿತ್ತು. ಈ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮರಳೂರು ಜನತಾ ಕಾಲೋನಿಯಿಂದ ಕೊರೆಯಲು ಪ್ರಾರಂಭಿಸಲಾಯಿತು. ಇದೇ ರೀತಿ ಅಗತ್ಯವಿರುವ ಒಟ್ಟು ನಗರದ 35 ವಾರ್ಡ್ಗಳಲ್ಲಿ ಬೋರ್ವೆಲ್ಗಳನ್ನು ಕೊರೆಯಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಅಂತರ್ಜಲ ಮಟ್ಟ ತೀರ ಕೆಳಗೆ ಹೋಗಿರುವ ಬೋರ್ವೆಲ್ಗಳಿಗೆ ಹೆಚ್ಚಿನ ಪೈಪ್ ಲೆನ್ತ್ಗಳನ್ನು ಹಾಕಿಸಿ, ನೀರೆತ್ತಲು ಬೇಕಾದ ಸೂಕ್ತ ಸಲಕರಣೆಗಳನ್ನು ಒದಗಿಸಲು ಕ್ರಮ ಕೈಗೊಂಡು, ಕೂಡಲೇ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿ ಅನುರಾಗ್ತಿವಾರಿ ಆದೇಶಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
100 ಕೋಟಿಗೂ ಹೆಚ್ಚಿನ ಕಾಮಗಾರಿ: ಸುಮಾರು 100 ಕೋಟಿ ರು. ಗಳಿಗೂ ಹೆಚ್ಚಿನ ವಿವಿಧ ಕಾಮಗಾರಿಗಳ ಬಗ್ಗೆ ಆಗಿದ್ದ ಟೆಂಡರ್ಗಳನ್ನು ಪರಿಶೀಲನೆ ಮಾಡಿ, ಸ್ಥಗಿತಗೊಂಡಿದ್ದ ಕಾಮಗಾರಿಗಳಿಗೆ ಮರುಚಾಲನೆ ಮಾಡಲು ಸಭೆಯಲ್ಲಿ ಜಿಲ್ಲಾಧಿಕಾರಿ ಅನುರಾಗ್ತಿವಾರಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ನಗರ ನೂತನ ಶಾಸಕರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂ. 10 ರೊಳಗೆ ಮುಕ್ತಾಯ: ಈ ಮೇಲಿನ ಎಲ್ಲ ಕಾಮಗಾರಿಗಳನ್ನು ಮುಂಬರುವ ಜೂ. 10ರೊಳಗೆ ಮುಗಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಡಾ. ರಫೀಕ್ ಅಹಮದ್ ತಿಳಿಸಿದ್ದಾರೆ.
ಡಾ. ರಫೀಕ್ ಅಹಮದ್ ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

