ತುಮಕೂರು

ನಾಯಕತ್ವ ಕೊರತೆಯಿಂದ ದಲಿತರಿಗೆ ಸಿಎಂ ಸ್ಥಾನ ತಪ್ಪಿತು

Published On :

ಚಿಕ್ಕನಾಯಕನಹಳ್ಳಿ: ದಲಿತರಲ್ಲಿರುವ ಜನಾಂಗದ ನಾಯಕತ್ವದ ಕೊರತೆಯಿಂದಾಗಿ ಸಿಗಬಹುದಾಗಿದ್ದ ಮುಖ್ಯಮಂತ್ರಿ ಸ್ಥಾನ ತಪ್ಪಿಹೋಯಿತು ಎಂದು ಬ್ಲಾಕ್ ಕಾಂಗ್ರೆಸ್ ಕಾನೂನು ಸಮಿತಿ ಅಧ್ಯಕ್ಷರಾದ ವಕೀಲ ಜಿ.ಪರಮೇಶ್ವರ್ ವಿಷಾದಿಸಿದ್ದಾರೆ.
ಈ ಸಂಬಂಧ ಅವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ರಾಜಕೀಯ ರಂಗದಲ್ಲಿರುವ ದಲಿತ ನಾಯಕರು ಎಂದು ತಮ್ಮನ್ನು ತಾವು ದಲಿತ ನಾಯಕರೆಂದು ಬಹಿರಂಗವಾಗಿ ಹೇಳಿಕೊಳ್ಳುವಲ್ಲಿ ಹಿಂಜರಿಕೆ ತೋರಿದ ಪರಿಣಾಮ ಇಂದು ಅಧಿಕಾರ ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ. ದಲಿತ ಮುಖಂಡರು ಕೇವಲ ಮೀಸಲು ಕ್ಷೇತ್ರಕ್ಕಷ್ಟೆ ಸೀಮಿತವಾಗಿ ರಾಜ್ಯದಾದ್ಯಂತ ಸಾಮೂಹಿಕ ನಾಯಕತ್ವ ಬೆಳೆಸಿಕೊಂಡಿಲ್ಲ. ಮೀಸಲು ಸೌಲಭ್ಯವನ್ನು ಬಳಸಿಕೊಂಡು ಆಯ್ಕೆಯಾದ ದಲಿತ ನಾಯಕರುಗಳು ಶಾಸನ ಸಭೆಯಲ್ಲಿ ದಲಿತ ಜನಾಂಗವನ್ನು ಪ್ರತಿನಿಧಿಸುವ ಛಾತಿಯನ್ನು ಬೆಳೆಸಿಕೊಳ್ಳದ ಹೊರತು ದಲಿತರಿಗೆ ಅಧಿಕಾರ ಕನ್ನಡಿಯೊಳಗಿನ ಗಂಟಾಗಿಯೇ ಉಳಿಯುತ್ತದೆ. ಮುಂದುವರಿದರೆ ಜನಾಂಗದವರು ಮತಹಾಕುವುದಿಲ್ಲವೆಂಬ ಭಯದಿಂದ ದಲಿತರು ಆಯ್ಕೆಯಾದ ಮೇಲೆ ದಲಿತ ಜನಾಂಗವನ್ನು ಕಡೆಗಣಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ನಾಯಕರಿಗೆ ಹಿತರಕ್ಷಕರಿಲ್ಲ ಎಂದ ಮೇಲೆ, ದಲಿತ ಜನಾಂಗದ ಹಿತ ರಕ್ಷಿಸುವವರಾರು ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ದಲಿತರಿಗೆ ಸಾರ್ವತ್ರಿಕ ನಾಯಕತ್ವದ ಅಗತ್ಯತೆ ಮತ್ತು ಅನಿವಾರ್ಯತೆಯಿದೆ. ನಮ್ಮ ದಲಿತ ನಾಯಕರು ಮೀಸಲು ಕ್ಷೇತ್ರಗಳಿಗೆ ಅಂಟಿಕೊಂಡಿರದೆ ಹೊರಬರಬೇಕಿದೆ. ಕರ್ನಾಟಕದ 224 ಕ್ಷೇತ್ರಗಳಲ್ಲಿ 17 ಮೀಸಲು ಕ್ಷೇತ್ರಗಳನ್ನು ಬಿಟ್ಟರೆ ಉಳಿದ ಎಲ್ಲಾ ಕ್ಷೇತ್ರಗಲ್ಲಿ ದಲಿತರೇ ನಿರ್ಣಾಯಕ. ಅವರ ಬೆಂಬಲವಿಲ್ಲದಿದ್ದರೆ ಯಾವ ಜನಾಂಗ ಮತ್ತು ಪಕ್ಷದವರು ಸಹ ಗೆಲ್ಲಲು ಸಾಧ್ಯವಿಲ್ಲ. ಅವರೇ ಕಿಂಗ್‌ಮೇಕರ್‌ಗಳು. ಆದ್ದರಿಂದ ದಲಿತರಲ್ಲಿ ಸಂಘಟನಾತ್ಮಕ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನ ಹಿರಿಯ ದಲಿತ ಮುಖಂಡ ರಾಜಕೀಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕಾಗಿತ್ತು. ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಅದು ಕೈತಪ್ಪಿ ಹೋಗಿದೆ. ಈಗ ಕುರುಬ ಜನಾಂಗದ ಸಿದ್ದರಾಮಯ್ಯನವರ ಜನಾಂಗದಲ್ಲಿನ ಸಂಘಟಿತ ಹೋರಾಟದ ಫಲವಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಲಭಿಸಿದೆ. ಅದಕ್ಕಾಗಿ ಅವರ ಜನಾಂಗ ಅವರಿಗೆ ಶಕ್ತಿ ತುಂಬಿದೆ, ಅದನ್ನೇ ದಲಿತರು ಮುಂದಿನ ದಿನಗಳಲ್ಲಿ ಅನುಸರಿಸಬೇಕಾಗಿದೆ ಎಂದು ಪ್ರತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.