ತುಮಕೂರು

ಮನಸೂರೆಗೊಂಡ ಮಕ್ಕಳ ಗೋಕುಲ ನಿರ್ಗಮನ

Published On :

ಕ.ಪ್ರ. ವಾರ್ತೆ, ತುಮಕೂರು, ಮೇ 15
ತುಮಕೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಸುಷ್ಮ ಸುರೇಶ್ ಅವರ ನಿರ್ದೇಶನದಲ್ಲಿ ನಾಡಿನ ಪ್ರಸಿದ್ಧ ಕವಿ ಪುತಿನ ರಚಿತ ಗೋಕುಲ ನಿರ್ಗಮನ ನಾಟಕ ಅತ್ಯಂತ ಯಶಸ್ವಿಯಾಯಿತು.
ಸುಮಾರು ವರ್ಷಗಳಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ ಹೀಗೆ ಹಲವು ಕಾರ್ಯಕ್ರಮಗಳನ್ನು ನಗರದ ಕೃಪಾಮಯಿ ಮಕ್ಕಳ ಬಳಗದ ರಂಗನಾಥ್ ಕುಟುಂಬ ಪ್ರತಿ ವರ್ಷ ಉಚಿತವಾಗಿ ಮಕ್ಕಳಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ.
ಹಾಗೆಯೇ ಈ ವರ್ಷವೂ 60-65 ಮಕ್ಕಳೇ ನಾಟಕದಲ್ಲಿ ಅಭಿನಯಿಸಿದ್ದು ವಿಶೇಷ. ಪ್ರೌಢ ಕಥಾಭಾಗವಾದ ಗೋಕುಲ ನಿರ್ಗಮನ ಮಕ್ಕಳ ಆಂಗಿಕ ಅಭಿನಯ ಮತ್ತು ನೃತ್ಯಗಳಿಂದ ಮಕ್ಕಳ ಮನಸ್ಸನ್ನು ಸೆಳೆಯಿತು. ಭಗವಾನ್ ಕೃಷ್ಣನ ಬಾಲ್ಯದ ಆಟ, ಪಾಠಗಳು ನವನೀತ ಚೋರನೆಂಬ ಬಿರುದು ಗಳಿಸುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಘಟಸರ್ಪವನ್ನು ಮೆಟ್ಟಿ ಮೆರೆಯುವುದು, ಗೋಪಿಕಾಸ್ತ್ರೀಯರನ್ನು ಗೋಳು ಹೊಯ್ದುಕೊಳ್ಳುವ ಸನ್ನಿವೇಶ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.
ಅಕ್ರೂರ, ಬಲರಾಮ, ಶ್ರೀ ಕೃಷ್ಣರ ವೇಷಭೂಷಣಗಳನ್ನು ಪೌರಾಣಿಕ ರೀತಿಯಲ್ಲಿ ವೈಭವೀಕರಿಸಲಾಗಿತ್ತು. ಚೇತನ್ ಶ್ರೀನಿವಾಸ್ ಮತ್ತು ಅಕ್ಷತಾ ತಂಡದವರ ಸಂಗೀತ ಪಾತ್ರಧಾರಿಗಳ ಅಭಿನಯಕ್ಕೆ  ಪೂರಕವಾಗಿತ್ತು. ಚರ್ವಿತ ಚರ್ವಣದ ತಾಂತ್ರಗಾರಿಕೆ ಕಂಡು ಬರುತ್ತಿತ್ತು. ದೃಶ್ಯದಿಂದ ದೃಶ್ಯಕ್ಕೆ ಬದಲಾಗುವಾಗ ಬೆಳಕು ವಿನ್ಯಾಸಕ ಜೈ ಪ್ರಕಾಶ್ ರಂಗದ ಬೆಳಕು ಸಂದರ್ಭಕ್ಕನುಗುಣವಾಗಿ ಮೂಡಿಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.