'ರಾಜಣ್ಣರಿಗೆ ಸಹಕಾರ ಸಚಿವ ಸ್ಥಾನ ನೀಡಿ'
ತುರುವೇಕೆರೆ: ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ಸಮಾಜದಲ್ಲಿರುವ ಬಡವರು ಹಾಗೂ ರೈತಾಪಿಗಳಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿರುವ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣರಿಗೆ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು ಎಂದು ಜಿಲ್ಲಾ ಬ್ಯಾಂಕ್ನ ನಿರ್ದೇಶಕ ಬಿ.ಎಸ್.ದೇವರಾಜು ಹಾಗೂ ತಾಲೂಕಿನ ವಿಎಸ್ಎಸ್ಎನ್ನ ಅಧ್ಯಕ್ಷರು ಒತ್ತಾಯಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು ಜಿಲ್ಲೆಯ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿರುವ ಕೆ ಎನ್ ರಾಜಣ್ಣ ನವರು ಸಹಕಾರ ರಂಗದಲ್ಲಿ ಭಾರಿ ಬದಲಾವಣೆ ತಂದಿದ್ದಾರೆ.
ಒಂದು ಕಾಲದಲ್ಲಿ ಜಿಲ್ಲಾ ಬ್ಯಾಂಕ್ ಎಂದರೆ ಮೂಗು ಮುರಿಯುವಂತಿತ್ತು. ಆದರೆ ಇಂದು ಎಲ್ಲಾ ವಾಣಿಜ್ಯ ಕೇಂದ್ರಗಳಿಗಿಂತಲೂ ಡಿಸಿಸಿ ಬ್ಯಾಂಕ್ ಉತ್ತಮ ಎಂಬ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಸಾವಿರಾರು ಸ್ತ್ರೀ ಶಕ್ತಿ ಕೇಂದ್ರಗಳಿಗೆ ಕೋಟ್ಯಾಂತರ ರೂಪಾಯಿ ಸಾಲ ಸೌಲಭ್ಯವನ್ನು ನೀಡಿರುವುದಲ್ಲದೇ ಅಷ್ಟೇ ಪ್ರಮಾಣದಲ್ಲಿ ಠೇವಣಿ ಸಂಗ್ರಹಣೆ ಮಾಡುವಲ್ಲೂ ಕೆ ಎನ್ ರಾಜಣ್ಣನವರ ಕಾರ್ಯತತ್ಪರತೆ ಇದೆ ಎಂದು ಹೇಳಿದ್ದಾರೆ.
ತುಮಕೂರು ಡಿಸಿಸಿ ಬ್ಯಾಕ್ ರಾಜ್ಯದಲ್ಲೇ ಮಾದರಿಯಾದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿಸಿರುವ ಕೀರ್ತಿ ಸಹ ರಾಜಣ್ಣನವರಿಗೆ ಇದೆ. ಅವರ ಅನುಭವವನ್ನು ಇಡೀ ರಾಜ್ಯಕ್ಕೆ ಧಾರೆ ಎರೆದರೆ ರಾಜ್ಯದ ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರು, ಸಣ್ಣ ಪುಟ್ಟ ವ್ಯಾಪಾರಿಗಳೂ ಸಹ ಆರ್ಥಿಕ ಸುಧಾರಣೆ ಮಾಡಿಕೊಂಡು ಸಹಕಾರ ಬ್ಯಾಂಕ್ ಗಳ ಅಭಿವೃಧ್ಧಿಗೆ ಕಾರಣೀಭೂತರಾಗುತ್ತಾರೆ. ಆದ್ದರಿಂದ ಮುಖ್ಯಮಂತ್ರಿಗಾಳಾದ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಕೆ.ಎನ್.ರಾಜಣ್ಣ ನವರಿಗೆ ಸಹಕಾರಿ ಖಾತೆಯನ್ನೇ ನೀಡುವ ಮೂಲಕ ಅವರ ಸೇವೆಯನ್ನು ರಾಜ್ಯಕ್ಕೆ ವಿಸ್ತರಣೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಬಿ.ಎಸ್.ದೇವರಾಜು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾದಿಹಳ್ಳಿ ವಿ ಎಸ್ ಎಸ್ ನ ಅಧ್ಯಕ್ಷ ಡಿ.ಎಸ್.ಆನಂದಮೂರ್ತಿ(ಅಪ್ಪಾಜಿ), ಮಾಜಿ ಅಧ್ಯಕ್ಷ ಉದಯಕುಮಾರ್, ಅರೇಮಲ್ಲೇನಹಳ್ಳಿ ತಮ್ಮಯ್ಯ, ಮಾಯಸಂದ್ರ ಪುಟ್ಟೇಗೌಡ, ರಮೇಶ್, ಮಾವಿನಕೆರೆ ನಿಂಗಪ್ಪ, ರಾಜೇಶ್, ಅಹಿಂದಾ ಮುಖಂಡ ಶಿವನಂಜಯ್ಯ ಇದ್ದರು.
ಶಿವನಂಜಯ್ಯ ಒತ್ತಾಯ: ಸಿದ್ದರಾಮಯ್ಯನವರು ಅಹಿಂದಾ ಚಳುವಳಿಗೆ ನೀಡಿದ ಪ್ರೋತ್ಸಾಹವನ್ನೇ ಜಿಲ್ಲೆಯಲ್ಲಿ ಕೆ.ಎನ್.ರಾಜಣ್ಣನವರೂ ಸಹ ಜಿಲ್ಲೆಯಲ್ಲಿ ನೀಡಿ ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಎಲ್ಲಾ ಸಮುದಾಯಕ್ಕೆ ಜೀವಾಳವಾಗಿದ್ದರು. ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ದೇಶವೇ ಗುರುತಿಸುವಂತಹ ಸಾಧನೆ ಮಾಡಿರುವ ಕೆ.ಎನ್.ರಾಜಣ್ಣ ನವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ತಾಲ್ಲೂಕಿನ ಅಹಿಂದಾ ಮುಖಂಡ ಹಾಗೂ ರಾಜ್ಯ ವರ್ತೂರು ಪ್ರಕಾಶ್ ಯುವ ಸೇನೆಯ ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಶಿವನಂಜಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ರವರನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

