ದಲಿತರಿಗೆ ರಾಜ್ಯಾಧಿಕಾರ: ಅಸಡ್ಡೆಗೆ ಆಕ್ರೋಶ
ಕುಣಿಗಲ್: ದಲಿತರಿಗೆ ರಾಜ್ಯಾಧಿಕಾರವನ್ನು ನೀಡುವಲ್ಲಿ ರಾಜಕೀಯ ಪಕ್ಷಗಳು ಅನುಸರಿಸುತ್ತಿರುವ ಧೋರಣೆಯನ್ನು ಖಂಡಿಸಿ, ತಾಲೂಕು ದಲಿತಪರ ಸಂಘಟನೆಗಳ ಒಕ್ಕೂಟದವರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ 17ನೇ ವಾರ್ಡ್ನಲ್ಲಿರುವ ಪುರಸಭೆಯ ಅಂಬೇಡ್ಕರ್ ಭವನದ ಅವರಣದಲ್ಲಿ ಸಂಘಟಿತರಾದ ದಲಿತ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು, ದಲಿತರಿಗೆ ರಾಜ್ಯಾಧಿಕಾರ ನೀಡದಂತೆ ವಂಚಿಸುತ್ತಿರುವುದರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆತಡೆ ನಡೆಸಿ, ತಾಲೂಕು ಕಚೇರಿವರೆಗೂ ಆಗಮಿಸಿ, ಪ್ರತಿಭಟನಾ ಸಭೆ ನಡೆಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಗಂಗಾಧರ್, ಮತದಾನದ ಸಮಯದಲ್ಲಿ ದಲಿತರ ಮತಗಳ ಮೇಲೆ ಕಣ್ಣಿಟ್ಟು, ದಲಿತರ ಮತಗಳ ಆಧಾರದ ಮೇಲೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ಕೂಡಲೆ, ದಲಿತರಿಗೆ ಸೂಕ್ತ ಅವಕಾಶ ಇದ್ದರೂ ಅಧಿಕಾರ ನೀಡದೆ ವಂಚಿಸುತ್ತಾ, ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಮಾಡುವ ಪ್ರವೃತ್ತಿ ತೀರಾ ಖಂಡನೀಯ. ಬೇರೆ ಜನಾಂಗದ ವ್ಯಕ್ತಿಯೊಬ್ಬರಿಗೆ ಪದವಿ ನೀಡಲು ಹಲವು ಕಸರತ್ತುಗಳನ್ನು ನಡೆಸುವ ಇತರೆ ವರ್ಗದ ಜನರು, ದಲಿತ ವರ್ಗದವರಿಗೆ ಅಧಿಕಾರ ನೀಡುವಾಗ, ಮನಸು ಮಾಡದೆ, ದಲಿತ ವರ್ಗವನ್ನು ಕೇವಲ ಓಟ್ ಬ್ಯಾಂಕ್ ಮಾಡುವುದನ್ನು ಎಲ್ಲಾ ದಲಿತರು ಒಮ್ಮತದಿಂದ ಖಂಡಿಸಿ, ಮುಂದಿನ ದಿನಗಳಲ್ಲಿ ದಲಿತರಿಗೆ ರಾಜ್ಯಾಧಿಕಾರ ನೀಡದ ಪಕ್ಷಗಳಿಗೆ ಬುದ್ಧಿಕಲಿಸುವ ದಿಸೆಯಲ್ಲಿ ಜಾಗೃರಾಗಬೇಕೆಂದರು.
ಮುಖಂಡರಾದ ಸುರೇಶ್, ಕುಮಾರ್, ಪ್ರಶಾಂತ್ ಕುಮಾರ್, ಹನುಮಂತ್ ಇತರರು ಮಾತನಾಡಿದರು, ರಂಗನಾಥ, ಗೋಪಾಲ, ಕೃಷ್ಣಪ್ಪ, ವೆಂಕಟೇಶ್ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

