ಕುಟುಂಬದ ಸಹಕಾರದಿಂದ ಕುಡಿತ ನಿವಾರಣೆ ಸಾಧ್ಯ
ತುಮಕೂರು: ಕುಡಿತ ಒಂದು ರೋಗವಾಗಿದ್ದು ಅದನ್ನು ಕುಟುಂಬದ ಸಹಕಾರದಿಂದ ನಿವಾರಣೆ ಮಾಡಬಹುದು ಎಂದು ಆಚರ್ಡ್ ಸಂಸ್ಥೆ ಆಪ್ತ ಸಮಾಲೋಚಕ ಮುತ್ತುರಾಯಪ್ಪ ಅಭಿಪ್ರಾಯಪಟ್ಟರು.
ಅವರು ಹೇಮಾದ್ರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಜವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ಶಿಬಿರದ ಆರನೇ ದಿನವಾದ ಶನಿವಾರ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ನಕಾರಾತ್ಮಕ ಯೋಚನೆಗಳಿಂದ ದೂರವಿರುವುದರಿಮದ ಕುಡಿತವನ್ನು ತ್ಯಜಿಸಬಹುದು ಎಂದರು.
ವೈಜ್ಞಾನಿಕ ಚಿಕಿತ್ಯೆಯ ಮೂಲಕ ಹಂತ ಹಂತವಾಗಿ ಕುಡಿತವನ್ನು ನಿಯಂತ್ರಿಸುತ್ತಾ ಸಂಪೂರ್ಣವಾಗಿ
ತ್ಯಜಿಸಬಹುದು ಎಂದು ಹೇಳಿದರು. ಇಂದಿನ ಯುವಕರು ಹಾಗೂ ಮಕ್ಕಳು ತಮ್ಮ ಸುತ್ತಲಿನ ವಾತಾವರಣದಿಂದ ಪ್ರೇರಿತರಾಗಿ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅದುದರಿಂದ ಸ್ವಚ್ಛ ಹಾಗೂ ಸ್ವಾಸ್ಥ್ಯ ಪರಿಸರವನ್ನು ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಳ್ಳಂಬೆಳ್ಳ ಕುಂಚಿಟಿಗ ಸಂಘದ ನಿರ್ದೇಶಕ ಜಗನ್ನಾಥ್ ಮಾತನಾಡಿ ಮಾನಸಿಕ ತೊಳಲಾಟಕ್ಕೆ ಕುಡಿತ ಮದ್ದಲ್ಲ ಎಂದರು.
ಸತೀಶ್ ಕುಮಾರ್, ವಿ.ಟಿ. ತಿಪ್ಪೇಸ್ವಾಮಿ, ಬಿ.ಕೆ. ನಟರಾಜು ನಿಸರ್ಗಪ್ರಿಯಾ ಟಿ.ಎಸ್ ಹಾಗೂ ಶಿವಣ್ಣ ಉಪಸ್ಥಿತರಿದ್ದರು. ಶಿಬಿರಾರ್ಥಿಯಾದ ಡಿ.ಎಸ್. ಮಂಜುನಾಥ್ ನಿರೂಪಿಸಿದರು, ಗಂಗನರಸಯ್ಯ ಸ್ವಾಗತಿಸಿದರು. ಗೋವಿಂದರಾಜು ವಂದಿಸಿದರು.
ವೀರಭದ್ರಸ್ವಾಮಿ ಕುಂಭಾಭೀಷೇಕ ಜಾತ್ರ ಮಹೋತ್ಸವ
ಗುಬ್ಬಿ: ತಾಲೂಕಿನ ಅಮ್ಮನಘಟ್ಟ ಗ್ರಾಮದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಕುಂಭಾಭೀಷೇಕ ಜಾತ್ರ ಮಹೋತ್ಸವ ಮೇ 19 ಮತ್ತು 20 ರಂದು ನಡೆಯಲಿದೆ. ಮೇ 19 ರ ಸಂಜೆ ಗೋಧೂಳಿ ಲಗ್ನದಲ್ಲಿ ಗುರುಕಳಸ 108 ಕುಂಭಗಳೊಂದಿಗೆ ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಮೆರವಣಿಗೆ ನಡೆಸಲಾಗುವುದು. ಮೇ 20 ರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಪುಣ್ಯಾಹ,ಪಂಚಕಳಸ, ನಾಂದಿಪೂಜೆ, ಶ್ರೀ ಮಹಾಲಿಂಗೇಶ್ವರ ಸ್ವಾಮಿ ಮತ್ತು ಶ್ರೀ ಭದ್ರಕಾಳಿ ಸಮೇತ ವೀರಭದ್ರಸ್ವಾಮಿಗೆ ಕುಂಭಾಭೀಷೇಕ, ರುದ್ರಾಭಿಷೇಕ ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿದೆ.
ಶಿವಮೂರ್ತಿ ನಾಯ್ಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ
ತಿಪಟೂರು: ಲಂಬಾಣಿ ಜನಾಂಗದ ದಾವಣಗೆರೆ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಶಿವಮೂರ್ತಿನಾಯ್ಕರಿಗೆ 2ನೇ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ.ಕುಮಾರ್ ಕೆಪಿಸಿಸಿ ಮುಖಂಡರನ್ನು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಸುಮಾರು 70-80 ಲಕ್ಷದಷ್ಟು ಲಂಬಾಣಿ ಜನಾಂಗ ವಾಸಿಸುತ್ತಿದ್ದು, ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದಾರೆ. 60 ವರ್ಷಗಳಿಂದಲೂ ಕೂಡ ಈ ಜನಾಂಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಲಂಬಾಣಿ ಜನಾಂಗದ 4 ಜನ ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದು. ಈ ಪೈಕಿ ಸುಮಾರು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ಮಾಯಕೊಂಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಶಿವಮೂರ್ತಿನಾಯ್ಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇಂದು ಹುಚ್ಚಮ್ಮದೇವಿ ದೇವಸ್ಥಾನ ಜೀರ್ಣೋದ್ಧಾರ
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿ ಬಿದರಿಕೆರೆ ಗ್ರಾಮದ ಶ್ರೀ ಬಿದರಿಕೆರೆ ಹುಚ್ಚಮ್ಮ ದೇವಿ ಅಮ್ಮನವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮವು ಭಾನುವಾರ ಮತ್ತು 20ರಂದು ನಡೆಯಲಿದೆ.
ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ದೇವನಾಂದಿ, ಗಂಗೆಪೂಜೆ, ಅಂಕುರಾರ್ಪಣೆ, ವಾಸ್ತುಹೋಮ ಮತ್ತಿತರ ಕಾರ್ಯಕ್ರಮಗಳು, 20ರಂದು ಅಭಿಷೇಕ, ಗಣಹೋಮ, ನವಗ್ರಹಹೋಮ, ಪಾಂಚಾಯತನ ಹೋಮ ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ, ಕಲ್ಪತರು ಮಾಯಸಂದ್ರದ ಶಿವಕುಮಾರನಾಥ ಸ್ವಾಮೀಜಿ ಭಾಗವಹಿಸಲಿದ್ದು, ಅಧ್ಯಕ್ಷತೆ ಶಾಸಕ ಕೆ.ಷಡಕ್ಷರಿ ವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

