ತುಮಕೂರು

'ಕವಿಗೆ ನೈತಿಕ ಪ್ರಜ್ಞೆ ಜಾಗೃತವಾಗಿರಬೇಕು'

Published On :

ತುಮಕೂರು: ಕವಿಯಾದವನು ತನ್ನ ಬರೆಹಗಳ ಮೂಲಕ ಸಮಾಜಕ್ಕೆ ನೀತಿ ಸಂದೇಶ ಬಿತ್ತರಿಸಬೇಕು. ನೈತಿಕ ಪ್ರಜ್ಞೆಯಿಂದ ಸದಾಜಾಗೃತನಾಗಿರುವ ಮೂಲಕ ಸಮಾಜವನ್ನು ತನ್ನ ಸಾಹಿತ್ಯ ರಚನೆಗಳಲ್ಲಿ ತಿದ್ದುವ ಪ್ರಯತ್ನ ಮಾಡಬೇಕು ಎಂದು ಸಾಹಿತಿ ಕವಿತಾಕೃಷ್ಣ ತಿಳಿಸಿದರು.
ಅವರು ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯ ಮಂದಿರದಲ್ಲಿ ಮಹಿಳಾ ಮಕ್ಕಳ ಸಾಹಿತ್ಯ ಕೂಟ ಏರ್ಪಡಿಸಿದ್ದ ಕಮಲಾ ಬಡ್ಡಿಹಳ್ಳಿಯವರ ಮಕ್ಕಳ ಕವನ ಸಂಕಲನ ಕರುವಿನ ಕಿರುಗೆಜ್ಜೆ  ಪುಸ್ತಕ ಕುರಿತ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಸರ್ಕಾರ ಶಾಲೆಗಳಲ್ಲಿ ನೀತಿ ಶಿಕ್ಷಣವನ್ನು ಪ್ರತ್ಯೇಕ  ಅವಧಿಗಳನ್ನಿಟ್ಟು ಬೋಧಿಸಬೇಕಾದುದು ಅತ್ಯಗತ್ಯವಾಗಿದೆ. ಇದರ ಜತೆಗೆ ಮಕ್ಕಳ ಸಾಹಿತಿಯಾದವನು ನಿರಂತರವಾಗಿ ಮಕ್ಕಳಿಗಾಗಿ ಬರೆಯುವ ಬರೆಹಗಳಲ್ಲಿ ಒಳ್ಳೆಯ ನೀತಿ ಸಂದೇಶ ನೀಡಬೇಕು ಎಂದರು
ಮಕ್ಕಳಿಗಾಗಿ ಮಕ್ಕಳ ಮಟ್ಟಕ್ಕಿಳಿದು ಸಾಹಿತ್ಯ ರಚಿಸದೇ ಇರುವವನು ಎಂದೂ ಪರಿಪೂರ್ಣ ಸಾಹಿತಿಯಾಗಲಾರ ಎಂದ ತಿಳಿಸಿದರು.
ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಚಿಂತಕಿ ಡಾ. ಪುಷ್ಪವಲ್ಲಿ ಅವರು ಮಾತನಾಡಿ ಮಹಿಳೆ ಯಾವತ್ತೂ ಪುರುಷರಿಂದ ನಿರೀಕ್ಷೆ ಮಾಡುವುದು ಸೌಹಾರ್ದತೆ ಮತ್ತು ಹೊಂದಾಣಿಕೆಯನ್ನು ಮಾತ್ರ. ಆದರೆ ಅವಳ ನಿರೀಕ್ಷೆ ಹುಸಿಯಾದಾಗ ಅವಳು ಅನಿವಾರ್ಯವಾಗಿ ಸಮಾನತೆ ಮತ್ತು ಹೋರಾಟಕ್ಕೆ ಇಳಿಯುತ್ತಾಳೆ ಎಂದರು.
ಇಂದು ಮಹಿಳೆ ಕುಟುಂಬವನ್ನು ಸರಿದೂಗಿಸಿಕೊಂಡು ಎಲ್ಲಾ ಕ್ಷೇತ್ರದಲ್ಲೂ ದುಡಿಯುತ್ತಿದ್ದಾಳೆ. ಪುರುಷ ಅವಳನ್ನು ಸಮಾನ ಮನಸ್ಸಿನಿಂದ ಶೋಷಣೆಮುಕ್ತ, ಸೌಹಾರ್ದಯುತ ಸಹಬಾಳ್ವೆಯಿಂದ ನಡೆಸಿಕೊಳ್ಳಬೇಕಾಗಿದೆ ಎಂದರು.
ಪ್ರತಿಯೊಬ್ಬ ಗಂಡಿನ ಉನ್ನತಿಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದು ಜನಜನಿತ ಮಾತು. ಹಾಗೆಯೇ ಹೆಣ್ಣಿನ ಉನ್ನತಿಯೂ ಹಿಂದೆ ಒಬ್ಬ  ಗಂಡು ಇರುತ್ತಾನೆ ಎನ್ನುವುದು ಸತ್ಯ. ಅವನ ಅಥವಾ ಅವಳ ಅವನತಿಯ ಹಿಂದೆಯೂ ಸಹ ಪರಸ್ಪರರಿರುತ್ತಾರೆ ಎನ್ನುವುದು ನಿಜ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.