ತಜ್ಞರು ಪರಿಶೀಲಿಸಿದ ನಂತರ ವಿವರ ಲಭ್ಯ
ಕ.ಪ್ರ. ವಾರ್ತೆ ಮಧುಗಿರಿ ಮೇ 22
ಇಲ್ಲಿನ 5ನೇ ತ್ವರಿತ ವಿಲೇವಾರಿ ನ್ಯಾಯಲಯದ ಆವರಣದಲ್ಲಿ ಇತ್ಯರ್ಥವಾದ ಪ್ರಕರಣಗಳಿಗೆ ಸಂಬಂಧಿಸಿದ ವಸ್ತುಗಳನ್ನು ನಾಶ ಪಡಿಸುವಾಗ ಜಿಲೆಟಿನ್ ಕಡ್ಡಿ ಸ್ಫೋಟಗೊಂಡ ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣಗುಪ್ತ ಭೇಟಿ ನೀಡಿ ಪರಿಶೀಲಿಸಿದರು.
ಈ ಘಟನೆಯಲ್ಲಿ ಬೆಂಚ್ ಕ್ಲರ್ಕ್ ನರಸಯ್ಯಗೆ ತೀವ್ರ ಸ್ವರೂಪದ ಗಾಯವಾಗಿದ್ದು, ನ್ಯಾಯಾಧೀಶ ಪಿ.ನಾರಾಯಣ ಆಚಾರ್ಯ ಅವರು ಗಾಯಗೊಂಡ ಸ್ಥಳಕ್ಕೆ ಮಂಗಳವಾರ ರಾತ್ರಿ ಐ.ಜಿ.ಪಾಂಡೆ ಮತ್ತು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿ, ಪಾವಗಡ ತಾಲೂಕಿನ ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯ 40-50 ಪ್ರಕಣಗಳು ಇತ್ಯರ್ಥಗೊಂಡಿದ್ದು ನಿಷ್ಕ್ರಿಯಗೊಂಡ ವಸ್ತುಗಳನ್ನು ಒಂದೇ ಸಲ ಬೆಂಕಿಗೆ ಹಾಕಿದ್ದರಿಂದ ಆ ಪೈಕಿ ಯಾವುದೋ ಒಂದರಲ್ಲಿದ್ದ ಜಿಲೆಟಿನ್ ವಸ್ತು ಸ್ಫೋಟಗೊಂಡಿದೆ. ಈ ಪ್ರಕರಣ ಕುರಿತಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿ ಪರಿಶೀಲಿಸಿದ ನಂತರ ಖಚಿತವಾಗಿ ಮಾಹಿತ ಲಭ್ಯವಾಗಲಿದೆ ಎಂದರು. ಡಿವೈಎಸ್ಪಿ ಡಾ.ಸೌಮ್ಯಲತಾ, ಸಿಪಿಐ ಎ.ಎಸ್. ವಿಶ್ವಾಸ್, ಪಿಎಸೈ ನಿರ್ಮಲಾ ಇದ್ದರು.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ತುಮಕೂರು: ಜಿಲ್ಲಾ ದೊಂಬಿದಾಸರ ಕ್ಷೇಮಾಭಿವೃದ್ಧಿ ಸಂಘವು 2012-13ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಮತ್ತು ಪಿಯುಪಿ ಅಂಕ ಪಟ್ಟಿ ಹಾಗೂ ವರ್ಗಾವಣೆ ಪತ್ರ ನಕಲು ಪ್ರತಿಯನ್ನು 20 ದಿನದೊಳಗೆ ಅರ್ಜಿಯೊಂದಿಗೆ ಸಲ್ಲಿಸಲು ಕೋರಲಾಗಿದೆ. ಆಸಕ್ತರು ರವಿಕುಮಾರ್, ದಾಸರಹಟ್ಟಿ, ಮಡಕೆಹಳ್ಳಿ ಅಂಚೆ, ಕೊತ್ತಗೆರೆ, ಕುಣಿಗಲ್ ತಾಲೂಕು ಇಲ್ಲಿಗೆ ಕಳುಹಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

