ತುಮಕೂರು

ವೇದಾಂತ ತತ್ವ ಪುನರುತ್ಥಾನ ಮಾಡಿದವರೇ ಶಂಕರಾಚಾರ್ಯ

Published On :

ಕ ಪ್ರ ವಾರ್ತೆ ಮಧುಗಿರಿ ಮೇ 24
ಹಿಂದೂ ಧರ್ಮ ಜೈನ ಮತ್ತು ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾಗಿ ಅಪಹಾಸ್ಯಕ್ಕೀಡಾಗಿದ್ದಾಗ ಸಂಕಷ್ಟ ಕಾಲದಲ್ಲಿ ಅವತರಿಸಿ ಹಿಂದೂ ವೇದಾಂತ ತತ್ವಗಳ ಪುನರುತ್ಥಾನ ಮಾಡಿದವರೇ ಶ್ರೀಶಂಕರಚಾರ್ಯರು ಎಂದು ಕೆ.ನಾಗರಾಜಶಾಸ್ತ್ರಿ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಶ್ರೀಶಂಕರ ಜಯಂತಿ ಆರಾಧನೆ  ಪ್ರಯುಕ್ತ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ  6 ದಿನಗಳ ಕಾಲ ಆಯೋಜಿಸಿದ್ದ  ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನ ಮಾರ್ಗ ವಿಶ್ಲೇಷಿಸುವ ಅದ್ವೈತ ಮಾರ್ಗ ತಿಳಿಸಿರುವ ಶ್ರೀಶಂಕರರು ಸಾಮಾನ್ಯ ಜನರ ಜೀವನ ಸಾರ್ಥಕತೆಗೆ ಮುಕ್ತಿ ಸಾಧನೆಗೆ ಅನುಕೂಲವಾಗುವಂತೆ ದೇವರ ಪೂಜೆ ಸ್ತುತಿಗಳು, ಸ್ತೋತ್ರ ರಚಿಸಿ ಕೊಟ್ಟಿದ್ದಾರೆ. ಉಪನಿಷತ್ತುಗಳಿಗೆ ಅರ್ಥಪೂರ್ಣವಾದ ಶ್ರವಣ, ಸ್ಮರಣ ಸಂಕೀರ್ತನ ಪಾದ ಸೇವನ, ಅರ್ಚನ ದಾಸವಂದನ, ಸಕ್ಯ ಆತ್ಮ ನಿವೇದನೆಗಳಿಗೆ ಅನುಕೂಲವಾಗುವ ಅರ್ಥಗರ್ಭಿತವಾದ ಸ್ತೋತ್ರ ರಚಿಸಿ ಸನಾತನ ವೇದ ಧರ್ಮಕ್ಕೆ ಅರ್ಥ ತಿಳಿಸಿ ಮನುಷ್ಯನ ಮುಕ್ತಿಗೆ ದಾರಿ ತೋರಿಸಿದವರು ಎಂದರು.
ಸಾಮೂಹಿಕ ಉಪನಯನ ಮಾಡುವವರಿಗೆ ವೇ.ಬ್ರ.ಶ್ರೀ ನಾಗರಾಜಶಾಸ್ತ್ರಿ , ವಿನಯಶರ್ಮ, ಕೆ.ಗುರುಪ್ರಸಾದ್, ಮೃತ್ಯುಂಜಯ ಶರ್ಮ, ಮೊದಲಾದ ಋತ್ವಿಕರುಗಳಿಂದ ಪುಣ್ಯಾಹ, ನಾಂದಿ, ನವಗ್ರಹ ಪೂಜೆ, ಹೋಮ, ಬಳಿಕ  ಶ್ರೀಶಾರದ ಮಹಿಳಾ ಮಂಡಳಿಯವರಿಂದ ಹೂವೀಳ್ಯ ಕಾರ್ಯಕ್ರಮ ನೆರವೇರಿಸಿದರು.
ಶೇಷಾದ್ರಿ ಅವರಿಂದ ಅದ್ವೈತ ಮತ್ತು ಉಪನಯನ, ಸಂದ್ಯಾವಂದನೆ ಸಂಸ್ಕಾರಗಳ ಬಗ್ಗೆ ಪ್ರವಚನ ಮಾಡಿದರು.
ಶ್ರೀ ಶಂಕರ ಮಠದಲ್ಲಿ ಶ್ರೀಶಂಕರಚಾರ್ಯರಿಗೆ, ಶ್ರೀಶಾರದಮ್ಮ ಅವರಿಗೆ ಪಂಚಾಮೃತ ಅಭಿಷೇಕ, ಅರ್ಚನೆ ಮಂಗಳಾರತಿ ಮಾಡಿದ ನಂತರ ಶ್ರೀಶಂಕರಚಾರ್ಯರ ಪ್ರತಿಮೆ ಮತ್ತು ಭಾವಚಿತ್ರವನ್ನು ಅಲಂಕೃತ ರಥದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಮಂಗಳವಾದ್ಯ, ವೇದಘೋಷ ಮತ್ತ ಭಜನೆಯೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಹಾಮಂಗಳಾರತಿ ಬ್ರಾಹ್ಮಣ ಸಂತರ್ಪಣೆಯೊಂದಿಗೆ ಶ್ರೀಶಂಕರ ಜಯಂತಿ ಸಪ್ತಾಹ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ತಾ.ಅಧ್ಯಕ್ಷ ಪಿ.ಆರ್.ನಂಜುಂಡಯ್ಯ ಮತ್ತಿತರರು ಉಪಸ್ಥಿತರಿದ್ದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.