ತುಮಕೂರು

ಜಿಲ್ಲೆಯ ಅಂಗವಿಕಲರಿಗೆ ಉದ್ಯೋಗಾವಕಾಶ ತರಬೇತಿ

Published On :

ತುಮಕೂರು: ಇಲ್ಲಿನ ಪರಿವರ್ತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಿಲ್ಲೆಯ ಅಂಗವಿಕಲರಿಗೆ 3 ತಿಂಗಳ ಕಾಲ ಕೌಶಲ್ಯ  ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡಲು ನಿರ್ಧರಿಸಲಾಗಿದೆ.
ಅಂಗವಿಕಲರಿಗೆ ಉದ್ಯೋಗ ಕೊಡಿಸುವ ಗುರಿಯೊಂದಿಗೆ ಪರಿವರ್ತನಾ ಚಾರಿಟಬಲ್ ಟ್ರಸ್ಟ್, ಐಎಲ್‌ಎಫ್‌ಎಸ್ ಸಂಸ್ಥೆ ಬೆಂಗಳೂರು, ಸಮ ಫೌಂಡೇಶನ್, ಹೆಲನ್‌ಕೆಲರ್ ಸಂಸ್ಥೆ ಹಾಗೂ ಪ್ರೋತ್ಸಾಹಕ ಸಾರ್ವಜನಿಕರ ಸಹಯೋಗದಲ್ಲಿ ಅಂಗವಿಕಲರಿಗೆ ತರಬೇತಿ ನೀಡಲಾಗುವುದು. ಆಸಕ್ತ ನಿರುದ್ಯೋಗಿ ಅಂಗವಿಕಲರು, ಅಂಧರು, ವಾಕ್ ಮತ್ತು ಶ್ರವಣ ದೋಷವುಳ್ಳವರು ತಮ್ಮ ಪೂರ್ಣ ವಿವರಗಳೊಂದಿಗೆ ಬೆಳಗುಂಬದ ಪರಿವರ್ತನ ಚಾರಿಟಬಲ್ ಟ್ರಸ್ಟ್‌ನಲ್ಲಿ ಹೆಸರು  ನೋಂದಾಯಿಸಿಕೊಳ್ಳಬಹುದು. ಅಥವಾ ಮೊಬೈಲ್ ಸಂಖ್ಯೆ 8453946008, 8453913436 ಸಂಪರ್ಕಿಸಬಹುದು. ತರಬೇತಿಯಲ್ಲಿ ಕಂಪ್ಯೂಟರ್ ಬೇಸಿಕ್, ಡಾಟಾ ಎಂಟ್ರಿ, ಟ್ಯಾಲಿ, ಸ್ಪೋಕನ್ ಇಂಗ್ಲಿಷ್, ಟೈಲರಿಂಗ್, ಮೆಹಂದಿ ಮತ್ತು ಕಸೂತಿ, ಬ್ಯೂಟಿಶಿಯನ್ ಕೋರ್ಸ್, ಹಪ್ಪಳ ಮತ್ತು ಸಂಡಿಗೆ, ಮಾರ್ಕೆಟಿಂಗ್ ಕೌಶಲ್ಯ ತರಬೇತಿ,  ಮೊಬೈಲ್ ತರಬೇತಿ, ರಿಕೇನಿಂಗ್ ತರಬೇತಿ ಹೇಳಿಕೊಡಲಾಗುವುದು ಎಂದು ಅಧ್ಯಕ್ಷೆ ಮಂಜುಳಾ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.