ರಂಗ ಕಲೆ ಉಳಿದು ಬೆಳೆಯಲಿ: ಡಿ.ನಾಗರಾಜಯ್ಯ ಪ್ರತಿಪಾದನೆ
ಕ.ಪ್ರ.ವಾರ್ತೆ ಕುಣಿಗಲ್ ಮೇ 25
ವಿದ್ಯುನ್ಮಾನ ಮಾಧ್ಯಮಗಳ ಅಬ್ಬರದಿಂದ ವಿನಾಶದ ಅಂಚಿನಲ್ಲಿರುವ ರಂಗಭೂಮಿಕಲೆಯ ಉಳಿವಿಗೆ, ಪಟ್ಟಣದ ಬಾಲಕ, ಬಾಲಕಿಯರು ಪೌರಾಣಿಕ ನಾಟಕ ಪ್ರದರ್ಶನ ನೀಡುವ ಮೂಲಕ ರಂಗಭೂಮಿ ಕಲೆಗಳ ಸಂರಕ್ಷಣೆಗೆ ಮುಂದಾಗಿರುವುದು ಪ್ರಶಂಸನೀಯ ಎಂದು ಶಾಸಕ ಡಿ.ನಾಗರಾಜಯ್ಯ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ರಂಗ ಕ್ರಿಕೆಟ್ ಕ್ಲಬ್ನ ಬಾಲಕ, ಬಾಲಕಿಯರು ಬೇಸಿಗೆ ಶಿಬಿರದಲ್ಲಿ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶಗಳಲ್ಲಿ ರಂಗಭೂಮಿ ಹಿನ್ನೆಲೆಯಲ್ಲಿನ ಪೌರಾಣಿಕ ನಾಟಕಗಳಲ್ಲಿ ನಮ್ಮ ತನಗಳನ್ನು, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಸಿ, ಬೆಳಸುವ ಸಾಹಿತ್ಯದ ಸೊಗಡಿದ್ದು, ರಾಮಾಯಣ ಒಂದು ಕುಟುಂಬದ ಆದರ್ಶವನ್ನು ಪರಿಣಾಮಕಾರಿಯಾಗಿ ಜನತೆಗೆ ಮನಮುಟ್ಟುವ ಸಂದೇಶ ನೀಡಿದರೆ, ಮಹಾಭಾರತ ಒಂದು ಗ್ರಾಮ, ಊರಿನಲ್ಲಿನ ವ್ಯವಸ್ಥೆ ಹಾಗೂ ಸಚ್ಚಾರಿತ್ರ್ಯ ರಾಜಕಾರಣ ಪ್ರತಿಪಾದನೆಗೆ ಪೂರಕ ಅಂಶಗಳ ಅರಿವು ಮೂಡಿಸುತ್ತದೆ ಎಂದು ಪ್ರತಿಪಾದಿಸಿದರು.
ಎರಡೂ ಮಹಾಕಾವ್ಯಗಳಲ್ಲಿ ಬರುವ ಸಾಕಷ್ಟು ಉಪಕಥೆಗಳು, ನೀತಿ ಕಥೆಗಳ ಪ್ರಸಂಗ, ಮನುಷ್ಯನ ಸಚ್ಚಾರಿತ್ರ್ಯ ಜೀವನ ನಿರ್ವಹಣೆಗೆ ಪೂರಕ ಅಂಶಗಳ ಅರಿವು ಮೂಡಿಸುತ್ತಿದೆ. ಪಟ್ಟಣ ಪ್ರದೇಶದಲ್ಲಿನ ಬಹುತೇಕ ಮಕ್ಕಳು, ಪೋಷಕರು, ಟಿವಿ ಮಾಧ್ಯಮಗಳ ಹಾವಳಿಯಿಂದ ನಮ್ಮ ಸಂಸ್ಕೃತಿಯ ಸಾರವನ್ನು ಪ್ರತಿಬಿಂಬಿಸುವ ರಂಗಭೂಮಿ ಕಲೆ ನಿರ್ಲಕ್ಷಿಸಿದರ ಪರಿಣಾಮ ಇಂದು ಅವು ವಿನಾಶದ ಅಂಚಿಗೆ ತಲುಪಿರುವುದು ಖೇದಕರ. ಇಂತಹ ಹಲವು ಪ್ರಯೋಗಗಳಿಂದ ಈ ಪೀಳಿಗೆಯ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯ ಅರಿವು ದೊರೆತು ಅವರು ಉತ್ತಮ ಪ್ರಜೆಗಳಾಗಿ ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗುತ್ತದೆ ಎಂದರು.
ಪುರಸಭೆ ಮಾಜಿ ಸದಸ್ಯ ಜಯರಾಮ್, ಕಸಾಪ ಅಧ್ಯಕ್ಷ ದಿನೇಶ್ ಕುಮಾರ್, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ, ಪ್ರಸನ್ನ ಇತರರು ಉಪಸ್ಥಿತರಿದ್ದು, ತಾಲೂಕಿನ ಇತಿಹಾಸದಲ್ಲೆ ಮೊದಲಬಾರಿಗೆ 16 ವರ್ಷಕ್ಕಿಂತ ಕಿರಿಯ ವಯೋವಾನದ ಬಹುತೇಕ ಆಂಗ್ಲ ಮಾದ್ಯಮದಲ್ಲಿ ವ್ಯಾಸಂಗ ಮಾಡುವ ಬಾಲಕ, ಬಾಲಕಿಯರು ನಡೆಸಿಕೊಟ್ಟ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನದ ಪಾತ್ರದಾರಿಗಳೆಲ್ಲ ಉತ್ತಮ ಪ್ರದರ್ಶನ ನೀಡಿದ್ದು, ವೀಕ್ಷಕರ ಮನಸೂರೆಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

